ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಾಜಸ್ತಾನ್ ರಾಯಲ್ಸ್‌ಗೆ ಮತ್ತೊಂದು ಆಘಾತ, ದಿಢೀರ್ ತವರಿಗೆ ಮರಳಿದ ಆಂಡ್ರೋ ಟೈ

IPL 2021 Another shock for Rajasthan Royals as Andrew Tye pulls out of tournament

ಈ ಬಾರಿಯ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮತ್ತೊಂದು ಆಘಾತ ಉಂಟಾಗಿದೆ. ತಂಡದ ವೇಗಿ ಆಂಡ್ರೋ ಟೈ ಕೂಡ ದೀಢೀರ್ ಆಗಿ ತವರಿಗೆ ಮರಳುವ ನಿರ್ಧಾರ ಕೈಗೊಂಡು ಆಸ್ಟ್ರೇಲಿಯಾಗೆ ವಾಪಾಸಾಗಿದ್ದಾರೆ. ಈಗಾಲೇ ಪ್ರಮುಖ ವಿದೇಶಿ ಆಟಗಾರರ ಸೇವೆಯನ್ನು ಕಳೆದುಕೊಂಡಿರುವ ರಾಜಸ್ಥಾನ್ ರಾಯಲ್ಸ್‌ಗೆ ಇದು ಮತ್ತೊಂದು ಹಿನ್ನಡೆಗೆ ಒಳಗಾಗಿದೆ. ಆದರೆ ಆಸಿಸ್ ವೇಗಿಯ ಈ ನಡೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

ರಾಜಸ್ಥಾನ್ ರಾಯಲ್ಸ್ ತಂಡ ಈಗಾಗಲೇ ಪ್ರಮುಖ ಆಟಗಾರರ ಸೇವೆಯಿಂದ ವಂಚಿತವಾಗಿದೆ. ಬೆನ್ ಸ್ಟೋಕ್ಸ್ ಗಾಯಗೊಂಡು ಟೂರ್ನಿಯಿಂದ ಹೊರನಡೆದರೆ ವೇಗಿ ಜೋಫ್ರಾ ಆರ್ಚರ್ ಈ ಬಾರಿಯ ಟೂರ್ನಿಯ ಆರಂಭಕ್ಕೂ ಮುನ್ನವೇ ಗಾಯಗೊಂಡು ಹೊರಗುಳಿದರು. ಇತ್ತೀಚೆಗಷ್ಟೇ ಸಂಪೂರ್ಣ ಐಪಿಎಲ್‌ನಿಂದ ಹೊರಗುಳಿಯಲಿದ್ದಾರೆ ಎಂದು ಇಸಿಬಿ ಘೋಷಿಸಿತು. ಈ ಮಧ್ಯೆ ಲಿಯಾಮ್ ಲಿವಿಂಗ್ಸ್ಟನ್ ಕೂಡ ಬಯೋಬಬಲ್ ಕಾರಣವನ್ನು ನೀಡಿ ತವರಿಗೆ ವಾಪಾಸಾಗಿದ್ದಾರೆ.

ನಮ್ಮ ಪಂದ್ಯ ಬ್ಲಾಕ್‌ಬಸ್ಟರ್; ಪಂದ್ಯಕ್ಕೂ ಮುನ್ನ ಧೋನಿ ಬಗ್ಗೆ ಆರ್‌ಸಿಬಿ ಹೇಳಿದ್ದಿಷ್ಟುನಮ್ಮ ಪಂದ್ಯ ಬ್ಲಾಕ್‌ಬಸ್ಟರ್; ಪಂದ್ಯಕ್ಕೂ ಮುನ್ನ ಧೋನಿ ಬಗ್ಗೆ ಆರ್‌ಸಿಬಿ ಹೇಳಿದ್ದಿಷ್ಟು

ಕ್ರಿಸ್ ಮೋರಿಸ್ ಹಾಗೂ ಮುಸ್ತಫಿಜುರ್ ರಹ್ಮಾನ್ ಆಡುವ ಬಳಗದಲ್ಲಿದ್ದ ಕಾರಣ ಆಂಡ್ರೋ ಟೈ ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶವನ್ನು ಪಡೆದುಕೊಂಡಿರಲಿಲ್ಲ. ಈಗ ರಾಜಸ್ಥಾನ್ ರಾಯಲ್ಸ್ ಕೇವಲ 4 ವಿದೇಶಿ ಆಟಗಾರರನ್ನು ಹೊಂದಿದೆ.

ರಾಜಸ್ಥಾನ್ ರಾಯಲ್ಸ್ ತಂಡದ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ತಂಡದ ಕ್ರಿಕೆಟ್‌ ಚಟುವಟಿಕೆಗಳ ನಿರ್ದೇಶಕ ಕುಮಾರ್ ಸಂಗಕ್ಕರ ಆಟಗಾರರಲ್ಲಿ ಆಂಡ್ರೋ ಟೈ ತವರಿಗೆ ಮರಳಿದ ಬಗ್ಗೆ ಮಾಹಿತಿ ನೀಡಿದ್ದಾರೆ.

"ಎಜೆ ಈ ಮುಂಜಾನೆ 4 ಗಂಟೆಗೆ ತಂಡವನ್ನು ತೊರೆದಿದ್ದಾರೆ. ಎಲ್ಲರೂ ಆತನಿಗೆ ವಿದಾಯ ಹೇಳಿ. ಧನ್ಯವಾದಗಳು, ಆತ ನಮ್ಮ ತಂಡದ ಸದಸ್ಯನಾಗಿದ್ದ. ತನ್ನನ್ನು ಹಾಗೂ ತನ್ನ ಯೋಚನೆಗಳನ್ನು ಸಾಕಷ್ಟು ಪ್ರಮಾಣದಲ್ಲಿ ತಂಡದೊಂದೊಗೆ ಆತ ಹಂಚಿಕೊಂಡಿದ್ದರು" ಎಂದಿದ್ದಾರೆ ಕುಮಾರ್ ಸಂಗಕ್ಕರ.

Story first published: Monday, April 26, 2021, 9:39 [IST]
Other articles published on Apr 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X