ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

"ಬ್ಯಾಟ್ಸ್‌ಮನ್ ಆಗಿ ಎಂಎಸ್ ಧೋನಿ ಮತ್ತಷ್ಟು ಜವಾಬ್ಧಾರಿ ವಹಿಸಿಕೊಳ್ಳಬೇಕಿದೆ"

IPL 2021: as a batsman MS Dhoni need to take more responsibility for CSK Bishop, Manjrekar

ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಈ ಬಾರಿಯ ಐಪಿಎಲ್‌ನ ಎರಡನೇ ಚರಣದ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಈ ಬಾರಿಯ ಐಪಿಎಲ್‌ನ ಮೊದಲ ಹಂತದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅದ್ಭುತ ಪ್ರದರ್ಶನ ನೀಡಿದ್ದು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎಲ್ಲಾ ವಿಭಾಗದ ಆಟಗಾರರು ಕೂಡ ತಮ್ಮ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದರೆ ನಾಯಕ ಎಂಎಸ್ ಧೋನಿ ಕೂಡ ಬ್ಯಾಟ್ಸ್‌ಮನ್ ಆಗಿ ತಮ್ಮ ಜವಾಬ್ಧಾರಿಯನ್ನು ನಿರ್ವಹಿಸಬೇಕಿದೆ ಎಂಬ ಅಭಿಪ್ರಾಯವನ್ನು ಮಾಜಿ ಕ್ರಿಕೆಟಿಗರು ಹಾಗೂ ಕಾಮೆಂಟೇಟರ್‌ಗಳಾದ ಸಂಜಯ್ ಮಂಜ್ರೇಕರ್ ಹಾಗೂ ಇಯಾನ್ ಬಿಷಪ್ ಹೇಳಿದ್ದಾರೆ.

ಐಪಿಎಲ್ ದ್ವಿತೀಯ ಹಂತ ಎಸ್‌ಆರ್‌ಎಚ್‌ಗೆ ನಿರ್ಣಾಯಕವಾಗಲಿದೆ: ಲಕ್ಷ್ಮಣ್ಐಪಿಎಲ್ ದ್ವಿತೀಯ ಹಂತ ಎಸ್‌ಆರ್‌ಎಚ್‌ಗೆ ನಿರ್ಣಾಯಕವಾಗಲಿದೆ: ಲಕ್ಷ್ಮಣ್

ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಇಯಾನ್ ಬಿಷಪ್ ಈ ವಿಚಾರವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ನಾಯಕ ಧೋನಿ ಬ್ಯಾಟ್ಸ್‌ಮನ್ ಕೊಡಿಗೆ ನೀಡುವ ಅಗತ್ಯವಿದೆ. ಅದಕ್ಕಾಗಿ ಮೇಲಿನ ಕ್ರಮಾಂಕದಲ್ಲಿ ಕಣಕ್ಕಿಳಿಯಬೇಕು ಎಂದು ಹೇಳಿದ್ದಾರೆ. 40ರ ಹರೆಯದ ಎಂಎಸ್ ಧೋನಿ ಈ ಬಾರಿಯ ಐಪಿಎಲ್‌ನ ಮೊದಲ ಭಾಗದಲ್ಲಿ ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ರವೀಂದ್ರ ಜಡೇಜಾ, ಸ್ಯಾಮ್ ಕರನ್ ಅವರಂತಾ ಆಲ್‌ರೌಂಡರ್‌ಗಳ ಬಳಿಕ ಬ್ಯಾಟಿಂಗ್‌ಗೆ ಇಳಿದಿದ್ದರು.

ನನ್ನ ಬೌಲಿಂಗ್ ತಂತ್ರಗಾರಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದೇನೆ: ಉನಾದ್ಕತ್ನನ್ನ ಬೌಲಿಂಗ್ ತಂತ್ರಗಾರಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದೇನೆ: ಉನಾದ್ಕತ್

ಮತ್ತೊಂದೆಡೆ ಕೆರೀಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸಿಎಸ್‌ಕೆ ತಂಡದ ಇಬ್ಬರು ಪ್ರಮುಖ ಆಟಗಾರರಾದ ಫಾಪ್ ಡು ಪ್ಲೆಸಿಸ್ ಹಾಗೂ ಡ್ವೇಯ್ನ್ ಬ್ರಾವೋ ಗಾಯಗೊಂಡ ಕಾರಣದಿಂದಾಗಿ ಧೋನಿ ತಮ್ಮ ಕ್ರಮಾಂಕವನ್ನು ಏರಿಸಿಕೊಳ್ಳಬೇಕಾದ ಅನಿವಾರ್ಯತೆ ಬರಬಹುದು.

ಇನ್ನು ಇದೇ ಸಂದರ್ಭದಲ್ಲಿ ಸಂಜಯ್ ಮಂಜ್ರೇಕರ್ ಪ್ರತಿಕ್ರಿಯೆ ನೀಡಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡ ಡ್ವೇಯ್ನ್ ಬ್ರಾವೋ ಅವರನ್ನು ಅಷ್ಟಾಗಿ ಕಳೆದುಕೊಳ್ಳದಿರಬಹುದು ಆದರೆ ಫಾಪ್ ಡು ಪ್ಲೆಸಿಸ್ ಚೆನ್ನೂ ತಂಡಕ್ಕೆ ಪ್ರಮುಖ ಅಂಗ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಸಂಜಯ್ ಮಂಜ್ರೇಕರ್ ಕೂಡ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಎಂಎಸ್ ಧೋನಿ ಬ್ಯಾಟಿಂಗ್‌ನಲ್ಲಿ ತಮ್ಮ ಜವಾಬ್ಧಾರಿಯನ್ನು ವಹಿಸಿಕೊಳ್ಳಬೇಕಿದೆ ಎಂದಿದ್ದಾರೆ.

ಭರ್ಜರಿ ಸಿಕ್ಸರ್‌ಗಳ ಮೂಲಕ ಎಚ್ಚರಿಕೆ ಕೊಟ್ಟ ಎಂಎಸ್ ಧೋನಿ: ವಿಡಿಯೋಭರ್ಜರಿ ಸಿಕ್ಸರ್‌ಗಳ ಮೂಲಕ ಎಚ್ಚರಿಕೆ ಕೊಟ್ಟ ಎಂಎಸ್ ಧೋನಿ: ವಿಡಿಯೋ

ಅಂಕಿ ಅಂಶಗಳ ಪ್ರಕಾರ KKR ಮತ್ತು RCB ನಡುವೆ ಮೇಲುಗೈ ಯಾರದ್ದು? | Oneindia Kannada

ಐಪಿಎಲ್ 2020ರ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಪ್ರಮುಖ ಆಟಗಾರರೆಲ್ಲರೂ ಮುಗ್ಗರಿಸಿದ್ದರು. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈಗೆ ಎಲ್ಲಾ ವಿಭಾಗದಿಂದಲೂ ಉತ್ತಮ ಪ್ರದರ್ಶನ ದೊರೆತಿದೆ. ಈ ಸಂದರ್ಭದಲ್ಲಿ ಶೀಗ್ರವಾಗಿ ರನ್‌ಗಳಿಸುವ ದೃಷ್ಟಿಕೋನದಿಂದ ಇತರ ಬ್ಯಾಟ್ಸ್‌ಮನ್‌ಗಳಿಗೆ ಮೊದಲಿಗೆ ಅವಕಾಶ ನೀಡಿ ತಾನು ಕೆಳ ಲ್ರಮಾಂಖದಲ್ಲಿ ಇಳಿಯಲು ಧೋನಿ ತೆಗೆದುಕೊಂಡ ನಿರ್ಧಾರ ಮೆಚ್ಚಿಕೊಳ್ಳುವಂತದ್ದು ಎಂದು ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.

Story first published: Monday, September 20, 2021, 23:14 [IST]
Other articles published on Sep 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X