ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಪಂತ್ ನಾಯಕತ್ವದಲ್ಲಿ ಇಬ್ಬರು ದಿಗ್ಗಜರ ಗುಣಗಳನ್ನು ಗುರುತಿಸಿದ ಪಾಂಟಿಂಗ್

IPL 2021: As captain Rishabh Pant thinks like bit of Kohli and Williamson: Ricky Ponting

ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಇದೇ ಮೊದಲ ಬಾರಿಗೆ ಯುವ ಆಟಗಾರ ರಿಷಭ್ ಪಂತ್ ಮುನ್ನಡೆಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂತ್ ಪಡೆ ಜಯವನ್ನೂ ಗಳಿಸಿದೆ. ಹೀಗಾಗಿ ಯುವ ನಾಯಕನ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ರಿಕಿ ಪಾಂಟಿಂಗ್ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ.

ಕಳೆದ ಆವೃತ್ತಿಯಲ್ಲಿ ನಾಯಕನಾಗಿದ್ದ ಶ್ರೇಯಸ್ ಐಯ್ಯರ್ ಈ ಬಾರಿಯ ಟೂರ್ನಿಯ ಆರಂಭಕ್ಕೆ ಕೆಲವೇ ದಿನಗಳಿರುವಾಗ ಗಾಯಗೊಂಡು ಸಂಪೂರ್ಣ ಐಪಿಎಲ್‌ನಿಂದ ಹೊರಗುಳಿಯಬೇಕಾಯಿತು. ಹೀಗಾಗಿ ನಾಯಕತ್ವ ರಿಷಭ್ ಪಂತ್ ಹೆಗಲೇರಿದೆ. ನಾಯಕನಾಗಿ ರಿಷಭ್ ಪಂತ್ ಅವರ ಆಯೋಚನಾ ಶೈಲಿ ವಿರಾಟ್ ಕೊಹ್ಲಿ ಹಾಗೂ ಕೇನ್ ವಿಲಿಯಮ್ಸನ್‌ಗೆ ಹೋಲಿಕೆಯಾಗುವಂತಿದೆ ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ.

ಎಬಿಡಿ ದಾಖಲೆಯನ್ನು ಸರಿದೂಗಿಸಿದ ಸಂಜು ಸ್ಯಾಮ್ಸನ್ಎಬಿಡಿ ದಾಖಲೆಯನ್ನು ಸರಿದೂಗಿಸಿದ ಸಂಜು ಸ್ಯಾಮ್ಸನ್

"ರಿಷಭ್ ಪಂತ್ ಅವರಂತಾ ಆಟಗಾರ ಆದಷ್ಟು ಬೇಗನೇ ಆಟದಲ್ಲಿ ಭಾಗಿಯಾಗುವುದನ್ನು ನೀವು ಬಯಸುತ್ತೀರಿ ಮತ್ತು ಆದಷ್ಟು ಹೆಚ್ಚು ಕಾಲ ಬ್ಯಾಟಿಂಗ್ ಮಾಡುವುದನ್ನು ನೋಡಲು ಬಯಸುತ್ತೀರಿ" ಎಂದು ಆಟಗಾರನಾಗಿ ಪಂತ್ ಬಗ್ಗೆ ಪಾಂಟಿಂಗ್ ಹೊಗಳಿಕೆಯ ಮಾತುಗಳನ್ನು ಆಡಿದರು.

ಆತ ಯೋಚನೆ ಮಾಡುವ ರೀತಿ ಸ್ವಲ್ಪ ಪ್ರಮಾಣದಲ್ಲಿ ವಿರಾಟ್ ಅಥವಾ ಕೇನ್ ಶೈಲಿಯಲ್ಲಿದೆ ಎಂದು ಪಾಂಟಿಂಗ್ ಹೇಳಿದ್ದಾರೆ. "ಪಂತ್ ಓರ್ವ ಉತ್ಸಾಹದ ಆಟಗಾರ. ಅದನ್ನು ನೀವು ವಿಕೆಟ್‌ನ ಹಿಂಬದಿಯಿಂದ ಕೇಳಿರುತ್ತೀರಿ. ಆತ ಯಾವಾಗಲೂ ಸ್ಪರ್ಧೆಯಲ್ಲಿರಲು ಬಯಸುತ್ತಾನೆ ಮತ್ತು ಆತನೋರ್ವ ವಿನ್ನರ್" ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಮೋರಿಸ್‌ಗೆ ಸಿಂಗಲ್‌ ನಿರಾಕರಿಸಿದ ಸಂಜು ಸ್ಯಾಮ್ಸನ್: ನೆಟ್ಟಿಗರ ತಮಾಷೆಮೋರಿಸ್‌ಗೆ ಸಿಂಗಲ್‌ ನಿರಾಕರಿಸಿದ ಸಂಜು ಸ್ಯಾಮ್ಸನ್: ನೆಟ್ಟಿಗರ ತಮಾಷೆ

ಇನ್ನು ಇದೇ ಸಂದರ್ಭದಲ್ಲಿ ಕಳೆದ ಆವೃತ್ತಿಯಲ್ಲಿ ರಿಷಭ್ ಪಂತ್ ಅವರಿಮದ ನಿರೀಕ್ಷಿತ ಪ್ರದರ್ಶನ ಬಂದಿರಲಿಲ್ಲ ಎಂದು ರಿಕಿ ಪಾಂಟಿಂಗ್ ಒಪ್ಪಿಕೊಂಡಿದ್ದಾರೆ. "ಕಳೆದ ಆವೃತ್ತಿಯಲ್ಲಿ ರಿಷಭ್ ಪಂತ್ ನಮ್ಮನ್ನು ನಿರಾಸೆಗೊಳಿಸಿದ್ದರು. ಲಾಕ್‌ಡೌನ್‌ನ ನಂತರ ಅವರು ಯುಎಇಗೆ ನಿರೀಕ್ಷೆಯ ಮೂಟೆ ಹೊತ್ತು ಸಾಗಿದ್ದರು. ಆದರೆ ನಿರೀಕ್ಷೆಯ ಮಟ್ಟವನ್ನು ತಲುಪಲು ಅಂದು ಸಾಧ್ಯವಾಗಿರಲಿಲ್ಲ. ಆದರೆ ಆಸ್ಟ್ರೇಲಿಯಾ ವಿರುದ್ಧ್ ಪ್ರವಾಸದ ನಂತರ ಫಿಟ್‌ನೆಸ್ ಮೇಲೆ ಗಮನಹರಿಸಿದ ಪಂತ್ ಆಟದ ಮೇಲೆ ಗಮನ ಹೆಚ್ಚು ಕೇಂದ್ರೀಕರಿಸಲು ಶಕ್ತರಾಗಿದ್ದಾರೆ " ಎಂದಿದ್ದಾರೆ ರಿಕಿ ಪಾಂಟಿಂಗ್.

Story first published: Wednesday, April 14, 2021, 17:24 [IST]
Other articles published on Apr 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X