ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾದಲ್ಲಿ ಮನೀಶ್ ಪಾಂಡೆ ಸ್ಥಾನದ ಬಗ್ಗೆ ಆಶಿಶ್ ನೆಹ್ರಾ ಕಟು ಮಾತು

IPL 2021: Ashish Nehra Reveals Why Manish Pandey has been in and out of Indian team

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಅನುಭವಿ ಆಟಗಾರ ಮನೀಶ್ ಪಾಂಡೆ ನಿಧಾನಗತಿಯಲ್ಲಿ ಆಡಿದ್ದಾರೆ ಎಂದು ಮಾಜಿ ವೇಗದ ಬೌಲರ್ ಅಶಿಶ್ ನೆಹ್ರಾ ಟೀಕಿಸಿದ್ದಾರೆ. ಮನೀಶ್ ಪಾಂಡೆಯ ನಿಧಾನಗತಿಯ ಆಟ ತಂದ ಸೋಲಿಗೆ ಕಾರಣವಾಯಿತು ಎಂದಿದ್ದಾರೆ ನೆಹ್ರಾ.

ಇನ್ನು ಇದೇ ಸಂದರ್ಭದಲ್ಲಿ ಮನೀಶ್ ಪಾಂಡೆ ಭಾರತೀಯ ತಂಡದದಲ್ಲಿ ಸ್ಥಿರವಾಗಿ ಅವಕಾಶವನ್ನು ಪಡೆಯದಿರಲು ಕೂಡ ಕಾರಣವೇನೆಮದು ಹೇಳಿದ್ದಾರೆ. ಮನೀಶ್ ಪಾಂಡೆ ಸಂದರ್ಭಕ್ಕೆ ತಕ್ಕನಾಗಿ ಆಡುವುದುದಿಲ್ಲ. ಆದ ಕಾರಣ ಅವರು ತಂಡದಲ್ಲಿ ಒಮ್ಮೆ ಸ್ಥಾನ ಪಡೆದರೆ ಮತ್ತೊಮ್ಮೆ ವಿಫಲರಾಗುತ್ತಾರೆ ಎಂದಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ಆರ್‌ಸಿಬಿ!ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ಆರ್‌ಸಿಬಿ!

"ಮನೀಶ್ ಪಾಂಡೆ ಟೀಮ್ ಇಂಡಿಯಾದಲ್ಲಿ ಒಳಗೆ ಮತ್ತು ಹೊರಗೆ ಉಳಿದುಕೊಳ್ಳಲು ಇದೇ ಕಾರಣ. ಆತ ಎಷ್ಟು ಹಿಂದೆ ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದು ನೋಡಿ. ಆದರೆ ಹರ್ದಿಕ್ ಪಾಂಡ್ಯ, ಇಶಾನ್ ಕಿಶನ್, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್ ಎಲ್ಲರಿಗೂ ಮನೀಶ್‌ಗಿಂತ ಮುಂದಕ್ಕೆ ಸಾಗುತ್ತಿದ್ದಾರೆ. ಇದಕ್ಕೆ ಕಾರಣ ಅವರ ಆಟದಲ್ಲಿನ ಭಿನ್ನತೆ. ಇವರೆಲ್ಲಾ ಒತ್ತಡವನ್ನು ಮನೀಶ್ ಗಿಂರ ಚೆನ್ನಾಗಿ ನಿಭಾಯಿಸುತ್ತಾರೆ ಮತ್ತು ಅಂತಾ ಸಂದರ್ಭಣದಲ್ಲಿ ಮನೀಶ್‌ಗಿಂತ ತುಂಬಾ ಚೆನ್ನಾಗಿ ನಿರ್ವಹಿಸುತ್ತಾರೆ. ಇದೇ ಕಾರಣಕ್ಕೆ ಮನೀಶ್ ಪಾಂಡೆ ಹಿಂದಕ್ಕೆ ಉಳಿದಿದ್ದಾರೆ" ಎಂದಿದ್ದಾರೆ ಆಶಿಶ್ ನೆಹ್ರಾ.

ಮನೀಶ್ ಪಾಂಡೆ ಈ ಬಾರಿಯ ಆವೃತ್ತಿಯ ಮೊದಲ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಅರ್ಧ ಶತಕವನ್ನು ಸಿಡಿಸಿದ್ದರು. ಆದರೆ ಆ ಪಂದ್ಯವನ್ನು ಕೂಡ ಗೆಲ್ಲಲು ಸನ್‌ರೈಸರ್ಸ್ ಹೈದರಾಬಾದ್‌ಗೆ ಸಾಧ್ಯವಾಗಿರಲಿಲ್ಲ. ಮನೀಶ್ ವಿಕೆಟ್ ಪತನದ ಬಳಿಕ ಹೈದರಾಬಾದ್ ಕುಸಿತವನ್ನು ಕಂಡಿತ್ತು.

ಐಪಿಎಲ್ 2021: ಹೈದರಾಬಾದ್ ವಿರುದ್ಧ ಬೆಂಗಳೂರಿಗೆ ರೋಚಕ ಜಯಐಪಿಎಲ್ 2021: ಹೈದರಾಬಾದ್ ವಿರುದ್ಧ ಬೆಂಗಳೂರಿಗೆ ರೋಚಕ ಜಯ

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿಯೂ ಹೈದರಾಬಾದ್ ಇದೇ ಸ್ಥಿತಿಯನ್ನು ಎದುರಿಸಿದರೆ. ಆದರೆ ಚೆನ್ನೈನ ಪಿಚ್‌ನಲ್ಲಿ ರನ್‌ಗಳಿಸುವುದು ಸುಲಭವಾಗಿಲಿಲ್ಲ. ಅದರಲ್ಲೂ ಆರ್‌ಸಿಬಿ ಬೌಲರ್‌ಗಳ ಅತ್ಯುತ್ತಮ ಬೌಲಿಂಗ್ ದಾಳಿ ಎದುರಾಳಿಯನ್ನು ಸೋಲಿನತ್ತ ದೂಡಿತ್ತು.

Story first published: Friday, April 16, 2021, 13:01 [IST]
Other articles published on Apr 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X