ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾಯಕ ಧೋನಿಗೆ "ಡೆಫಿನೇಟ್ಲಿ ನಾಟ್" ಟಿ ಶರ್ಟ್ ಗೌರವ ನೀಡಿದ ಸಿಎಸ್‌ಕೆ

IPL 2021 Auction: Chennai Super Kings special tribute to skipper MS Dhoni

ಗುರುವಾರ ಐಪಿಎಲ್ 2021ರ ಆವೃತ್ತಿಗೆ ಹರಾಜು ಪ್ರಕ್ರಿಯೆ ಯಶಸ್ವಿಯಾಗಿ ಮುಕ್ತಾಯವಾಗಿದೆ. 292 ಆಟಗಾರರು ಈ ಹರಾಜಿನಲ್ಲಿ ಪಾಲ್ಗೊಂಡಿದ್ದು ಎಲ್ಲಾ 8 ತಂಡಗಳು ತಮಗೆ ಬೇಕಾದ ಆಟಗಾರರನ್ನು ಹರಾಜಿನ ಮೂಲಕ ಖರೀದಿಸಿದ್ದಾರೆ. ಈ ಹರಾಜಿನಲ್ಲಿ ಪಾಲ್ಗೊಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರತಿನಿಧಿಗಳು ವಿಶೇಷ ಟಿ ಶರ್ಟ್ ಮೂಲಕ ಗಮನಸೆಳೆದಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರತಿನಿಧಿಗಳು ತಮ್ಮ ತಂಡದ ಬಣ್ಣವಾದ ಹಳದಿ ಟಿ ಶರ್ಟ್ ಮೇಲೆ ಬ್ಲೇಜರ್ ತೊಟ್ಟಿದ್ದರು. ಇದರ ಜೊತೆಗೆ ಹಳದಿ ಬಣ್ಣದ ಮಾಸ್ಕ್ ಕೂಡ ಧರಿಸಿದ್ದರು. ಆದರೆ ಇದು ಖಂಡಿತವಾಗಿಯೂ ವಿಶೇಷತೆಯಲ್ಲ. ಆದರೆ ಅದರಲ್ಲಿ ಬರೆದಿದ್ದ ಬರಹ ಸಾಕಷ್ಟು ಕುತೂಹಲ ಮೂಡಿಸುವಂತಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಮಡದ ಪ್ರತಿನಿಧಿಗಳು ಧರಿಸಿದ್ದ ಜರ್ಸಿಯಲ್ಲಿ "ಡೆಫಿನೇಟ್ಲಿ ನಾಟ್" ಎಂಬ ಬರಹವನ್ನು ಬರೆಯಲಾಗಿದೆ. ಈ ಮಾತು ಕಳೆದ ಬಾರಿಯ ಐಪಿಎಲ್‌ನ ಚೆನ್ನೈ ತಂಡದ ಅಂತಿಮ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಆಡಿದ ಮಾತುಗಳಾಗಿದೆ.

ಕಳೆದ ಐಪಿಎಲ್‌ಗೂ ಮುನ್ನ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಹೇಳಿದ್ದರು. ಐಪಿಎಲ್‌ನಲ್ಲಿ ಧೋಣಿ ವೈಯಕ್ತಿಕವಾಗಿ ಹಾಗೂ ತಂಡವಾಗಿ ಉತ್ತಮ ಪ್ರದರ್ಶನ ನೀಡದ ಕಾರಣ ಐಪಿಎಲ್‌ನಿಂದಲೂ ನಿವೃತ್ತಿ ಘೋಷಿಸಬಹುದು ಎಂಬ ಮಾತುಗಳು ಕೇಳಿಬಂದಿತ್ತು. ಹೀಗಾಗಿ ಲೀಗ್‌ಹಂತದಲ್ಲಿ ಹೊರ ಬಿದ್ದ ನಂತರ ಚೆನ್ನೈ ತಂಡದ ಅಂತಿಮ ಪಂದ್ಯದ ಸಂದರ್ಭದಲ್ಲಿ"ಇದು ನಿಮ್ಮ ಕೊನೆಯ ಪಂದ್ಯ ಎಂದು ಭಾವಿಸಬಹುದಾ?" ಎಂಬ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಧೋನಿ "ಡೆಫಿನೇಟ್ಲಿ ನಾಟ್" ಎನ್ನುವ ಮೂಲಕ ತಮ್ಮ ನಿವೃತ್ತಿ ಬಗೆಗಿನ ಅನುಮಾನಗಳಿಗೆ ಪೂರ್ಣವಿರಾಮ ಹಾಕಿದ್ದರು.

ಈ ಪದಗಳನ್ನು ಚೆನ್ನೈ ತಂಡದ ಪ್ರತಿನಿಧಿಗಳು ಧೋನಿಗೆ ಗೌರವ ಸಲ್ಲಿಸುವ ಸಲುವಾಗಿ ಟಿ ಶರ್ಟ್‌ನಲ್ಲಿ ಧರಿಸಿದ್ದರು. ಜೊತೆಗೆ ಮಾಸ್ಕ್‌ನಲ್ಲಿಯೂ ಧೋನಿ ಜರ್ಸಿ ಸಂಖ್ಯೆ 7 ಎಂದು ಬರೆಯಲಾಗಿತ್ತು. ಈ ರೀತಿ ತಮ್ಮ ತಂಡದ ನಾಯಕನಿಗೆ ವಿಶೇಷ ಗೌರವವನ್ನು ನೀಡಿದೆ ಚೆನ್ನೈ ಫ್ರಾಂಚೈಸಿ. ಈ ಬಾರಿಯ ಐಪಿಎಲ್‌ನಲ್ಲಿಯೂ ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.

Story first published: Friday, February 19, 2021, 12:57 [IST]
Other articles published on Feb 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X