ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಮಿನಿ ಹರಾಜು: ದಿನಾಂಕ, ಆಟಗಾರರ ವರ್ಗಾವಣೆ ನಿಯಮ ಮತ್ತು ಅರ್ಹತೆ

IPL 2021 auction: Date, Eligibility and Transfer Rules

ಐಪಿಎಲ್‌ನ 14ನೇ ಆವೃತ್ತಿ ಇನ್ನೇನು ಮೂರ್ನಾಲ್ಕು ತಿಂಗಳಲ್ಲಿ ಆರಂಭವಾಗಲಿದೆ. ಅದಕ್ಕೂ ಮುನ್ನ ಐಪಿಎಲ್ ತಂಡಗಳ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಸೋಮವಾರ ಐಪಿಎಲ್ ಆಡಳಿತ ಮಂಡಳಿಯ ಸಭೆ ನಡೆದಿದ್ದು ಫೆಬ್ರವರಿ 11ರಂದು ಮಿನಿ ಹರಾಜು ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ.

ಸೋಮವಾರ ವರ್ಚುವಲ್ ವೇದಿಕೆಯಲ್ಲಿ ನಡೆದ ಮೀಟಿಂಗ್‌ನಲ್ಲಿ ಖಚಿತ ದಿನಾಂಕ ಹಾಗೂ ಐಪಿಎಲ್ ಆಯೋಜನೆಯ ಸ್ಥಳದ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ಈ ಹಿಂದಿನ ಆವೃತ್ತಿಯಂತೆ 8 ತಂಡಗಳು ಮಾತ್ರವೇ ಪಾಲ್ಗೊಳ್ಳಲಿದೆ ಎಂಬ ಖಚಿತ ನಿರ್ಧಾರವನ್ನು ಈ ಹಿಂದೆಯೇ ತೆಗೆದುಕೊಳ್ಳಲಾಗಿತ್ತು.

ಫೆಬ್ರವರಿ ತಿಂಗಳ ಮೊದಲ ವಾರದಿಂದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆರಂಭವಾಗಲಿದೆ. ಮೊದಲ ಹಾಗೂ ಎರಡನೇ ಟೆಸ್ಟ್‌ನ ವಿರಾಮದ ಸಂದರ್ಭದಲ್ಲಿ ಮಿನಿ ಹರಾಜು ನಡೆಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ಹಾಗಾದರೆ ಈ ಹರಾಜು ಪ್ರಕ್ರಿಯೆಯ ನಿಯಮಗಳೇನು? ಯಾವ ಆಟಗಾರರು ವರ್ಗಾವಣೆಗೆ ಅರ್ಹರಾಗಿರುತ್ತಾರೆ? ತಂಡಗಳಲ್ಲಿ ಉಳಿಸುಕೊಂಡಿರುವ ಮೊತ್ತವೆಷ್ಟು ಮುಂದೆ ಓದಿ..

ಆಟಗಾರರ ವರ್ಗಾವಣೆ ನಿಯಮ

ಆಟಗಾರರ ವರ್ಗಾವಣೆ ನಿಯಮ

ಐಪಿಎಲ್‌ನಲ್ಲಿನ ಹೊಸ ನಿಯಮದ ಪ್ರಕಾರ ಫ್ರಾಂಚೈಸಿಗಳು ಆಂತರಿಕವಾಗಿ ಕ್ಯಾಪ್‌ಡ್ ಅಥವಾ ಅನ್‌ಕ್ಯಾಪ್‌ಡ್ ಆಟಗಾರರನ್ನು ಬದಲಾಯಿಸಿಕೊಲ್ಳುವ ಅವಕಾಶವನ್ನು ನೀಡಲಾಗಿದೆ. ಈ ಹಿಂದೆ ಕೇವಲ ಅನ್‌ಕ್ಯಾಪ್‌ಡ್ ಅಂದರೆ ಆಡದ ಆಟಗಾರರನ್ನು ಮಾತ್ರವೇ ವರ್ಗಾವಣೆ ಮಾಡುವ ಅವಕಾಶವಿತ್ತು.

ತಂಡದ ಪರ್ಸ್‌ನಲ್ಲಿ ಉಳಿದಿರುವ ಮೊತ್ತ

ತಂಡದ ಪರ್ಸ್‌ನಲ್ಲಿ ಉಳಿದಿರುವ ಮೊತ್ತ

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಈಗ ಕೇವಲ 0.15 ಕೋಟಿ ಮಾತ್ರವೇ ಬಾಕಿ ಉಳಿದುಕೊಂಡಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 16.5 ಕೋಟಿ ಮೊತ್ತವನ್ನು ಹೊಂದಿದ್ದು ಹೆಚ್ಚಿನ ಮೊತ್ತವನ್ನು ಉಳಿಸಿಕೊಂಡಿರುವ ತಂಡವಾಗಿದೆ. ರಾಜಸ್ಥಾನ ರಾಯಲ್ಸ್(14.75 ಕೋಟಿ), ಸನ್‌ರೈಸರ್ಸ್ ಹೈದರಾಬಾದ್ (10.1ಕೋಟಿ) ಡೆಲ್ಲಿ ಕ್ಯಾಪಿಟಲ್ಸ್ (9 ಕೋಟಿ), ಕೊಲ್ಕತ್ತಾ ನೈಟ್ ರೈಡರ್ಸ್(8.5 ಕೋಟಿ) ರಾಯಲ್ ಚಾಲೆಂಜರ್ಸ್ ಬೆಂಗಳೂರು (6.4 ಕೋಟಿ) ಮುಂಬೈ ಇಂಡಿಯನ್ಸ್(1.95 ಕೋಟಿ)

ಐಪಿಎಲ್ 2021 ಶೆಡ್ಯೂಲ್

ಐಪಿಎಲ್ 2021 ಶೆಡ್ಯೂಲ್

ಐಪಿಎಲ್‌ನ 14ನೇ ಆವೃತ್ತಿ ಮಾರ್ಚ್ ಅಂತ್ಯಕ್ಕೆ ಆರಂಭವಾಗಿ ಮೇ ಮಧ್ಯಭಾಗದಲ್ಲಿ ಅಂತ್ಯವಾಗುವ ನಿರೀಕ್ಷೆಯಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ಬಾರಿಯ ಐಪಿಎಲ್ ಆವೃತ್ತಿಯನ್ನು ಭಾರತದಲ್ಲೇ ಆಯೋಜಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿಯ ಐಪಿಎಲ್ ಆವೃತ್ತಿ ಕೊರೊನಾ ವೈರಸ್‌ನ ಕಾರಣದಿಂದಾಗಿ ಯುಎಇನಲ್ಲಿ ಆಯೋಜನೆಯಾಗಿತ್ತು. ಕೊರೊನಾ ವೈರಸ್‌ನ ತೀವ್ರತೆ ಕಡಿಮೆಯಾಗದಿದ್ದಲ್ಲಿ ಈ ಬಾರಿಯೂ ಯುಎಇನಲ್ಲೆ ಐಪಿಎಲ್ ಆಯೋಜನೆಯಾಗುವ ಸಂಭವವಿದೆ.

Story first published: Thursday, January 7, 2021, 14:23 [IST]
Other articles published on Jan 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X