ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021 ಹರಾಜು: ಆರ್‌ಸಿಬಿ ಕಣ್ಣಿಟ್ಟಿರುವ ಪ್ರಮುಖ ಆಟಗಾರರಿವರು!

IPL 2021 Auction: Players That Royal Challengers Bangalore (RCB) Will Target

ಬೆಂಗಳೂರು: ಸತತ ಮೂರು ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಸೀಸನ್‌ಗಳಲ್ಲಿ ನಿರಾಸೆ ಅನುಭವಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕೊನೆಗೂ ಐಪಿಎಲ್ 2020ರಲ್ಲಿ ಪ್ಲೇ ಆಫ್ಸ್‌ಗೆ ಪ್ರವೇಶಿಸಿತ್ತು. ಆದರೆ ಟೂರ್ನಿಯ ಬೆಸ್ಟ್ 4ನೇ ತಂಡವಾಗಿ ಆಟ ಮುಗಿಸಿತು. 2021ರ ಐಪಿಎಲ್‌ನ ತಯಾರಿಯಲ್ಲಿರುವ ಆರ್‌ಸಿಬಿ ಈಗಾಗಲೇ ಕ್ರಿಸ್ ಮೋರಿಸ್, ಶಿವಂ ದೂಬೆ, ಆ್ಯರನ್ ಫಿಂಚ್, ಉಮೇಶ್ ಯಾದವ್, ಡೇಲ್ ಸ್ಟೇನ್, ಮೊಯೀನ್ ಅಲಿ, ಪಾರ್ಥಿವ್ ಪಟೇಲ್, ಪವನ್ ನೇಗಿ, ಇಸುರು ಉದಾನ, ಗುರ್‌ಕೀರತ್ ಮಾನ್ ಅವರನ್ನು ಬಿಡುಗಡೆ ಮಾಡಿದೆ.

ಪಾಕ್‌ನ ರಿಝ್ವಾನ್ ಅದ್ಭುತ ವಿಕೆಟ್ ಕೀಪರ್ ಎನ್ನುತ್ತಿವೆ ಈ ವಿಡಿಯೋಗಳು!ಪಾಕ್‌ನ ರಿಝ್ವಾನ್ ಅದ್ಭುತ ವಿಕೆಟ್ ಕೀಪರ್ ಎನ್ನುತ್ತಿವೆ ಈ ವಿಡಿಯೋಗಳು!

ಆರ್‌ಸಿಬಿ ಬಿಡುಗಡೆ ಮಾಡಿರುವ ಆಟಗಾರರ ಪಟ್ಟಿಯಲ್ಲಿ ಪ್ರಮುಖ ಆಟಗಾರರಿದ್ದಾರೆ ನಿಜ. ಆದರೆ ಬೆಂಗಳೂರು ಫ್ರಾಂಚೈಸಿ ವ್ಯಾಪಾರದ ಮೂಲಕ ಆಲ್ ರೌಂಡರ್ ಡೇನಿಯಲ್ ಸ್ಯಾಮ್ಸ್, ಹರ್ಷಲ್ ಪಟೇಲ್ ಅವರನ್ನು ತಂಡಕ್ಕೆ ಕರೆತಂದಿದೆ.

'ಭಾರತದಲ್ಲಿ ಸರಣಿ ಗೆದ್ದರೆ ಅದು ಆ್ಯಷಸ್ ಸರಣಿಗಿಂತಲೂ ಮಿಗಿಲು''ಭಾರತದಲ್ಲಿ ಸರಣಿ ಗೆದ್ದರೆ ಅದು ಆ್ಯಷಸ್ ಸರಣಿಗಿಂತಲೂ ಮಿಗಿಲು'

2021ರ ಆಟಗಾರರ ಹರಾಜಿಗೂ ಮುನ್ನ ಆರ್‌ಸಿಬಿಯಲ್ಲಿ 11 ಸ್ಲಾಟ್‌ಗಳು ಲಭ್ಯವಿವೆ. ಇದರಲ್ಲಿ 3 ವಿದೇಶ ಆಟಗಾರರದ್ದು. ಹಾಗಾದರೆ ಮುಂಬರುವ ಹರಾಜಿನಲ್ಲಿ ಆರ್‌ಸಿಬಿ ಯಾರನ್ನು ಆರಿಸಬಹುದು?

ಜೇಸನ್ ರಾಯ್

ಜೇಸನ್ ರಾಯ್

ಆರ್‌ಸಿಬಿಗೆ ಈಗ ಒಳ್ಳೆಯ ಆರಂಭಿಕ ಬ್ಯಾಟ್ಸ್‌ಮನ್‌ ಮತ್ತು ಉತ್ತಮ ವಿಕೆಟ್‌ ಕೀಪರ್‌ನ ಅವಶ್ಯಕತೆಯಿದೆ. ಹೀಗಾಗಿ ನಿಯಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ದೊಡ್ಡ ದೊಡೆತಗಳ ಸಾಮರ್ಥ್ಯ ಹೊಂದಿರುವ ಇಂಗ್ಲೆಂಡ್ ಕ್ರಿಕೆಟರ್ ಜೇಸನ್ ರಾಯ್ ಅವರನ್ನು ಆರ್‌ಸಿಬಿ ಆರಿಸುವ ಸಾಧ್ಯತೆಯಿದೆ. ಆರಂಭಿಕ ಬ್ಯಾಟ್ಸ್‌ಮನ್‌ ಆಗಿರುವ ಜೇಸನ್ ಟಿ20ಯಲ್ಲಿ ರಾಯ್ 4 ಶತಕಗಳನ್ನು ಬಾರಿಸಿದ್ದಾರೆ. ಬಲಗೈ ಬ್ಯಾಟ್ಸ್‌ಮನ್‌ ರಾಯ್ 8 ಐಪಿಎಲ್ ಪಂದ್ಯಗಳಲ್ಲಿ 179 ರನ್ ಬಾರಿಸಿದ್ದಾರೆ. ಇದರಲ್ಲಿ ಅಜೇಯ ಅರ್ಧ ಶತಕ (91 ರನ್) ಕೂಡ ಸೇರಿದೆ. 2020ರ ಸೀಸನ್‌ನಲ್ಲಿ ರಾಯ್ ಕೊಂಚ ನಿಷ್ಕ್ರಿಯರಾಗಿ ಇದ್ದಿದ್ದರಿಂದ ಡೆಲ್ಲಿ ಕ್ಯಾಪಿಟಲ್ಸ್ ಇವರನ್ನು ರಿಲೀಸ್ ಮಾಡಿತ್ತು.

ಶೆಲ್ಡನ್ ಜಾಕ್ಸನ್

ಶೆಲ್ಡನ್ ಜಾಕ್ಸನ್

ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿ ಡಿವಿಲಿಯರ್ಸ್ 2020ರ ಐಪಿಎಲ್ ಸೀಸನ್‌ನಲ್ಲಿ ಆರ್‌ಸಿಬಿಗೆ ಹೆಚ್ಚಿನ ಪಂದ್ಯಗಳಲ್ಲಿ ವಿಕೆಟ್ ಕೀಪಿಂಗ್ ಮಾಡಿದ್ದರು. ತಂಡದಲ್ಲಿ ಆಸ್ಟ್ರೇಲಿಯಾದ ಯುವ ವಿಕೆಟ್ ಕೀಪರ್ ಜೋಶುವಾ ಫಿಲಿಪ್ ಕೂಡ ಇದ್ದಾರೆ. ಆದರೂ ಆರ್‌ಸಿಬಿಗೆ ಒಬ್ಬ ಉತ್ತಮ ಭಾರತೀಯ ವಿಕೆಟ್‌ ಕೀಪರ್‌ನ ಅಗತ್ಯ ಖಂಡಿತಾ ಇದೆ. ಈ ನಿಟ್ಟಿನಲ್ಲಿ ಸೌರಾಷ್ಟ್ರದ ಶೆಲ್ಡನ್ ಜಾಕ್ಸನ್ ಆರ್‌ಸಿಬಿಗೆ ಉಪಯುಕ್ತ ಆಟಗಾರ. ದೇಶಿ ಕ್ರಿಕೆಟ್‌ನಲ್ಲಿ ಜಾಕ್ಸನ್ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. 2020/21ರ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಜಾಕ್ಸನ್ ಐದು ಪಂದ್ಯಗಳಲ್ಲಿ 80.66ರ ಸರಾಸರಿಯಂತೆ, 155.12 ಸ್ಟ್ರೈಕ್ ರೇಟ್‌ನಂತೆ 242 ರನ್ ಗಳಿಸಿದ್ದರು. 2017ರ ಐಪಿಎಲ್‌ನಲ್ಲಿ ಜಾಕ್ಸನ್ 4 ಪಂದ್ಯಗಳನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದರು. 2013-14ರಲ್ಲಿ ಆರ್‌ಸಿಬಿಯಲ್ಲಿ ಬೆಂಚ್ ಕಾದಿದ್ದರು. ಆದರೆ ಈಗ ಜಾಕ್ಸನ್ ಪ್ರೌಢ ಆಟ ಆಡುತ್ತಿದ್ದಾರೆ. ಆದ್ದರಿಂದ ಆರ್‌ಸಿಬಿ ಆರಿಸುವ ನಿರೀಕ್ಷೆಯಿದೆ.

ಅಂಕಿತ್ ರಜಪೂತ್

ಅಂಕಿತ್ ರಜಪೂತ್

ಆರ್‌ಸಿಬಿಗೆ ವೇಗಿಗಳ ಅವಶ್ಯಕತೆಯಿದೆ. ಹೀಗಾಗಿ 27ರ ಹರೆಯದ ಅಂಕಿತ್ ರಜಪೂತ್ ಆರ್‌ಸಿಬಿಗೆ ಒಳ್ಳೆಯ ಆಯ್ಕೆ. 2020/21ರ ಸಯ್ಯದ್ ಮುಷ್ತಾಕ್ ಅಲಿ ಟಿ20ಯಲ್ಲಿ ಆಡಿದ್ದ ಅಂಕಿತ್, ಉತ್ತರ ಪ್ರದೇಶಪರ 3 ಪಂದ್ಯಗಳಲ್ಲಿ 2 ವಿಕೆಟ್ ಪಡೆದಿದ್ದರು. ತೀರಾ ಇತ್ತೀಚೆಗೆ ಭಾರತಕ್ಕೆ ಪ್ರವಾಸ ಬರಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಅಂಕಿತ್ ನೆಟ್‌ ಬೌಲರ್ ಆಗಿ ಆಯ್ಕೆಯಾಗಿದ್ದಾರೆ. ಆದ್ದರಿಂದ ಫ್ರಾಂಚೈಸಿಗಳು ರಜಪೂತ್‌ ಅವರತ್ತ ಆಸಕ್ತಿ ತಾಳಿವೆ ಅನ್ನೋದರಲ್ಲಿ ಅನುಮಾನವಿಲ್ಲ. ಐಪಿಎಲ್‌ನಲ್ಲಿ 29 ಪಂದ್ಯಗಳನ್ನಾಡಿರುವ ಅಂಕಿತ್ ಒಟ್ಟು 24 ವಿಕೆಟ್ ಪಡೆದಿದ್ದಾರೆ. ಅಂಕಿತ್ ಅವರು ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಪರ ಆಡಿದ ಅನುಭವ ಹೊಂದಿದ್ದಾರೆ.

Story first published: Friday, January 29, 2021, 12:27 [IST]
Other articles published on Jan 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X