ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಮಿನಿ ಹರಾಜಿನ ದಿನಾಂಕ ಹಾಗೂ ಸ್ಥಳ ಅಧಿಕೃತ ಘೋಷಣೆ

IPL 2021 auction will be held in Chennai on February 18th

14ನೇ ಆವೃತ್ತಿಯ ಐಪಿಎಲ್‌ನ ಚಟುವಟಿಕೆಗಳು ಈಗ ಮತ್ತಷ್ಟು ಗರಿಗೆದರಿದೆ. ಈ ಬಾರಿಯ ಐಪಿಎಲ್‌ಗೂ ಮುನ್ನ ಆಟಗಾರರ ಮಿನಿ ಹರಾಜಿಗೆ ವೇದಿಕೆ ಈಗ ಸಂಪೂರ್ಣ ಸಿದ್ಧವಾಗಿದ್ದು ಐಪಿಎಲ್ ಆಡಳಿದ ಮಂಡಳಿ ಈಗ ದಿನಾಂಕವನ್ನೂ ಅಧಿಕೃತವಾಗಿ ಘೋಷಿಸಿದೆ.

ಮುಂದಿನ ಆವೃತ್ತಿಯ ಐಪಿಎಲ್‌ನ ಮಿನಿ ಹರಾಜಯ ಫೆಬ್ರವರಿ 18ರಂದು ನಡೆಯುವುದು ಈಗ ಅಧಿಕೃತವಾಗಿದೆ. ಈ ಬಗ್ಗೆ ಐಪಿಎಲ್‌ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿಯನ್ನು ನೀಡಲಾಗಿದೆ. ಚೆನ್ನೈನಲ್ಲೇ ಈ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ ಎಂಬುದು ಕೂಡ ಈಗ ಅಧಿಕೃತವಾಗಿ ಘೋಷಣೆಯಾಗಿದೆ.

ಯುಎಇ ಆಟಗಾರರಿಂದ ಮ್ಯಾಚ್ ಫಿಕ್ಸಿಂಗ್; ಅಮಾನತು ಮಾಡಿದ ಐಸಿಸಿಯುಎಇ ಆಟಗಾರರಿಂದ ಮ್ಯಾಚ್ ಫಿಕ್ಸಿಂಗ್; ಅಮಾನತು ಮಾಡಿದ ಐಸಿಸಿ

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳು ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಆಯೋಜನೆಯಾಗಲಿದೆ. ಎರಡನೇ ಪಂದ್ಯ ಫೆಬ್ರವರಿ 17ನೇ ತಾರೀಕಿನಂದು ಅಂತ್ಯವಾಗಲಿದ್ದು 18ನೇ ತಾರೀಕಿನಂದು ಈ ಹರಾಜು ಪ್ರಕ್ರಿಯೆ ನಡೆಸುವ ತೀರ್ಮಾನವನ್ನು ಐಸಿಸಿ ಆಡಳಿತ ಮಂಡಳಿ ತೆಗೆದುಕೊಂಡಿದೆ.

ಈ ಮೊದಲು ಮೊದಲ ಹಾಗೂ ಎರಡನೇ ಟೆಸ್ಟ್ ಪಂದ್ಯದ ನಡುವಿನ ಅವಧಿಯಲ್ಲಿ ಹರಾಜು ಪ್ರಕ್ರಿಯೆ ನಡೆಸಬಹುದು ಎಂಬ ನಿರೀಕ್ಷೆಯಿಡಲಾಗಿತ್ತು. ಬಳಿಕ ಎರಡು ಹಾಗೂ ಮೂರನೇ ಟೆಸ್ಟ್‌ನ ನಡುವಿನ ಅವಧಿಯಲ್ಲಿ ಹರಾಜು ನಡೆಯಲಿದೆ ಎಂಬ ವರದಿಗಳು ಬಂದಿತ್ತು. ಈಗ ಅದರಂತೆಯೇ ಫೆಬ್ರವರಿ 18 ರದು ಐಪಿಎಲ್ ಹರಾಜು ಪ್ರಕ್ರಿಯೆ ನಡೆಯುವುದು ಖಚಿತವಾಗಿದೆ.

ವಿರಾಟ್ ಕೊಹ್ಲಿ ಮತ್ತು ನನ್ನ ಮಧ್ಯೆ ಏನೂ ಬದಲಾಗಿಲ್ಲ: ಅಜಿಂಕ್ಯ ರಹಾನೆವಿರಾಟ್ ಕೊಹ್ಲಿ ಮತ್ತು ನನ್ನ ಮಧ್ಯೆ ಏನೂ ಬದಲಾಗಿಲ್ಲ: ಅಜಿಂಕ್ಯ ರಹಾನೆ

ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಗಾಗಿ ಎಲ್ಲಾ ಫ್ರಾಂಚೈಸಿಗಳು ಕೂಡ ತಮ್ಮ ತಂಡದಲ್ಲಿ ಉಳಿಸಿಕೊಳ್ಳುವ ಆಟಗಾರರನ್ನು ಪ್ರಕಟಿಸಿದ್ದು ಹರಾಜುನಲ್ಲಿ ಪಾಲ್ಗೊಳ್ಳುವ ಆಟಗಾರರ ಬಹುತೇಕ ಚಿತ್ರಣ ದೊರೆತಿದೆ. ಇದರಲ್ಲಿ ಆಸ್ಟ್ರೇಲಿಯಾದ ಆಟಗಾರರಾದ ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಆರೋನ್ ಫಿಂಚ್ ಅವರಂತಾ ಪ್ರಮುಖ ಆಟಗಾರರು ಒಳಗೊಂಡಿದ್ದು ಯಾವ ತಂಡದ ಪಾಲಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

Story first published: Wednesday, January 27, 2021, 15:08 [IST]
Other articles published on Jan 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X