ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಾಲ್ಡೀವ್ಸ್‌ನಿಂದ ತವರಿಗೆ ಮರಳಿದ ಆಸ್ಟ್ರೇಲಿಯಾ ಆಟಗಾರರು

IPL 2021: Australian players returns home from Maldives

ಸಿಡ್ನಿ: ಪ್ಯಾಟ್ ಕಮಿನ್ಸ್, ಸ್ಟೀವ್ ಸ್ಮಿತ್ ಸೇರಿದಂತೆ ಆಸ್ಟ್ರೇಲಿಯಾದ ಸ್ಟಾರ್ ಆಟಗಾರರ ಬಳಗ ಮಾಲ್ಡೀವ್ಸ್‌ನಿಂದ ಆಸ್ಟ್ರೇಲಿಯಾಕ್ಕೆ ತಲುಪಿದೆ. ಕೋವಿಡ್-19 ಭೀತಿಯಿಂದಾಗಿ ಅಮಾನತುಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 2021ರ ಟೂರ್ನಿಯಲ್ಲಿ ಈ ಆಟಗಾರರು ಪಾಲ್ಗೊಂಡಿದ್ದರು.

ಮ್ಯಾಚ್ ಫಿಕ್ಸಿಂಗ್ ವೇಳೆ ಈ ಬುದ್ಧಿ ಇರಬೇಕಿತ್ತು ; ಕೊಹ್ಲಿ ಪರ ಮಾತನಾಡಿದ್ದ ಆಟಗಾರನಿಗೆ ವಾನ್ ತರಾಟೆಮ್ಯಾಚ್ ಫಿಕ್ಸಿಂಗ್ ವೇಳೆ ಈ ಬುದ್ಧಿ ಇರಬೇಕಿತ್ತು ; ಕೊಹ್ಲಿ ಪರ ಮಾತನಾಡಿದ್ದ ಆಟಗಾರನಿಗೆ ವಾನ್ ತರಾಟೆ

ನಾಲ್ಕು ಫ್ರಾಂಚೈಸಿಗಳಲ್ಲಿ ಕೋವಿಡ್-19 ಪ್ರಕರಣಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ಮೇ 4ರಂದು ಐಪಿಎಲ್ 14ನೇ ಆವೃತ್ತಿಯನ್ನು ಬಿಸಿಸಿಐ ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಿತ್ತು. ಆದರೆ ಆಸ್ಟ್ರೇಲಿಯಾ ಆಟಗಾರರಿಗೆ ಭಾರತದಿಂದ ಸೀದಾ ಆಸ್ಟ್ರೇಲಿಯಾಕ್ಕೆ ತೆರಳುವ ಅವಕಾಶವಿಲ್ಲದಿದ್ದರಿಂದ ಆಸೀಸ್ ಆಟಗಾರರು ಮಾಲ್ಡೀವ್ಸ್‌ಗೆ ತೆರಳಿ ಅಲ್ಲಿ ಕ್ವಾರಂಟೈನ್ ಪಾಲಿಸಿದ್ದರು.

ಕ್ವಾರಂಟೈನ್ ಬಳಿಕ ಈಗ ಆಸ್ಟ್ರೇಲಿಯನ್ ಆಟಗಾರರೆಲ್ಲ ಸಿಡ್ನಿಗೆ ಬಂದಿಳಿದಿದ್ದಾರೆ. ಸೋಮವಾರ (ಮೇ 17) ಆಸೀಸ್ ಆಟಗಾರರು ಸಿಡ್ನಿ ತಲುಪಿರುವುದಾಗಿ ತಿಳಿದು ಬಂದಿದೆ. ಮುಂದೂಡಲ್ಪಟ್ಟಿರುವ ಐಪಿಎಲ್ ಈ ವರ್ಷ ನಡೆದರೂ ವಿದೇಶದಲ್ಲಿ ಸೆಪ್ಟೆಂಬರ್‌ನಲ್ಲಿ ನಡೆಯುವ ನಿರೀಕ್ಷೆಯಿದೆ. 29 ಪಂದ್ಯಗಳ ಬಳಿಕ ಐಪಿಎಲ್ ನಿಲುಗಡೆಯಾಗಿದ್ದು, 31 ಪಂದ್ಯಗಳು ಬಾಕಿ ಉಳಿದಿವೆ.

ಆರ್ಚರ್‌ಗೆ ಮೊಣಕೈ ಗಾಯ, ನ್ಯೂಜಿಲೆಂಡ್ ಸರಣಿಯಿಂದ ಹೊರಕ್ಕೆಆರ್ಚರ್‌ಗೆ ಮೊಣಕೈ ಗಾಯ, ನ್ಯೂಜಿಲೆಂಡ್ ಸರಣಿಯಿಂದ ಹೊರಕ್ಕೆ

ಐಪಿಎಲ್ ಬಯೋಬಬಲ್ ಒಳಗಿದ್ದ ಕೋಲ್ಕತ್ತಾ ನೈಟ್ ರೈಡರ್ಸ್‌ನ ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್, ಚೆನ್ನೈ ಸೂಪರ್ ಕಿಂಗ್ಸ್‌ನ ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿ, ಸನ್ ರೈಸರ್ಸ್ ಹೈದರಾಬಾದ್‌ನ ವೃದ್ಧಿಮಾನ್ ಸಾಹ, ಡೆಲ್ಲಿ ಕ್ಯಾಪಿಟಲ್ಸ್‌ನ ಅಮಿತ್ ಮಿಶ್ರಾಗೆ ಕೋವಿಡ್ ಪಾಸಿಟಿವ್ ಬಂದಿದ್ದರಿಂದ ಐಪಿಎಲ್ ಅಮಾನತುಗೊಂಡಿತ್ತು.

Story first published: Monday, May 17, 2021, 10:59 [IST]
Other articles published on May 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X