ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊರೊನಾ ವೈರಸ್‌ನಿಂದ ಚೇತರಿಸಿದ ಅಕ್ಷರ್ ಪಟೇಲ್ ಡೆಲ್ಲಿ ಸ್ಕ್ವಾಡ್‌ಗೆ ಸೇರ್ಪೆಡೆ

IPL 2021: Axar Patel rejoins Delhi Capitals squad after recovery from COVID-19

ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನವೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಲ್‌ರೌಂಡರ್ ಅಕ್ಷರ್ ಪಟೇಲ್ ಕೊರೊನಾ ವೈರಸ್‌ಗೆ ತುತ್ತಾಗಿದ್ದರು. ಇದು ಡೆಲ್ಲಿ ಕ್ಯಾಂಪ್‌ನಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಕ್ವಾರಂಟೈನಲ್ಲಿದ್ದ ಅಕ್ಷರ್ ಪಟೇಲ್ ಈಗ ಕೋರೊನಾ ವೈರಸ್‌ನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ಡೆಲ್ಲಿ ತಂಡವನ್ನು ಸೇರಿಕೊಂಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಂಪ್‌ಗೆ ಸೇರಿಕೊಂಡ ಬಳಿಕ ಅಕ್ಷರ್‌ಗೆ ಕೊರೊನಾ ವೈರಸ್ ತಗುಲಿರುವುದು ತಿಳಿದುಬಂದಿತ್ತು. ಹೀಗಾಗಿ ಅವರು ತಂಡದಿಂದ ಪ್ರತ್ಯೇಕವಾಗಿದ್ದು ಮೂರು ವಾರಗಳ ಕಾಲ ಚಿಕಿತ್ಸೆಯನ್ನು ಪಡೆದು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.

ಪಡಿಕ್ಕಲ್ ಅಬ್ಬರದ ಶತಕಕ್ಕೆ 10 ವರ್ಷದ ಈ ಹಳೆಯ ದಾಖಲೆ ಧ್ವಂಸಪಡಿಕ್ಕಲ್ ಅಬ್ಬರದ ಶತಕಕ್ಕೆ 10 ವರ್ಷದ ಈ ಹಳೆಯ ದಾಖಲೆ ಧ್ವಂಸ

27ರ ಹರೆಯದ ಅಕ್ಷರ್ ಪಟೇಲ್ ಮಾರ್ಚ್ 28ರಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೋಟೆಲ್‌ಗೆ ಸೇರಿಕೊಂಡಿದ್ದರು. ಆರಂಭದಲ್ಲಿ ನೆಗೆಟಿವ್ ವರದಿಯ ಮೂಲಕ ತಂಡವನ್ನು ಕೂಡಿಕೊಂಡಿದ್ದ ಅವರು ಬಳಿಕ ಹೋಟೆಲ್ ಕ್ವಾರಂಟೈನ್ ಅವಧಿಯಲ್ಲಿ ಕೊರೊನಾ ವೈರಸ್‌ಗೆ ತುತ್ತಾಗಿರುವುದು ಮತ್ತೊಂದು ಪರೀಕ್ಷೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿತ್ತು.

"20 ದಿನಗಳ ನಂತರ ಕ್ವಾರಂಟೈನ್‌ನಿಂದ ಹೊರಬರುವುದು ಮತ್ತು ಸಹ ಆಟಗಾರರನ್ನು ಭೇಟಿಯಾಗುವುದು ನಿಜಕ್ಕೂ ಸಂತಸದ ಸಂಗತಿ. ಟೆಸ್ಟ್ ತಂಡಕ್ಕೆ ಪದಾರ್ಪನೆಯನ್ನು ಮಾಡಿದ ನಂತರ ಇದು ಅತ್ಯಂತ ಸ್ಮರಣೀಯ ಕ್ಷಣ" ಎಂದು ಅಕ್ಷರ್ ಪಟೇಲ್ ಪ್ರತಿಕ್ರಿಯಿಸಿದ್ದಾರೆ.

MI vs PBKS Preview : ಪಂಜಾಬ್ vs ಮುಂಬೈ, ಸಂಭಾವ್ಯ ತಂಡ, ಡ್ರೀಮ್11 ಟಿಪ್ಸ್MI vs PBKS Preview : ಪಂಜಾಬ್ vs ಮುಂಬೈ, ಸಂಭಾವ್ಯ ತಂಡ, ಡ್ರೀಮ್11 ಟಿಪ್ಸ್

"20 ದಿನಘಲ ಕಾಲ ನಾನು ಕೋಣೆಯಲ್ಲಿ ಒಬ್ಬಂಟಿಯಾಗಿದ್ದೆ. ನನಗೆ ಅಲ್ಲಿ ಮಾಡುವುದಕ್ಕೂ ಏನೂ ಇರಲಿಲ್ಲ. ನಾನು ಪಂದ್ಯಗಳನ್ನು ವೀಕ್ಷಿಸುತ್ತಿದ್ದೆ. ಖುಷಿಯ ವಿಚಾರವೆಂದರೆ ನಮ್ಮ ತಂಡ ಬಹುತೇಕ ಪಂದ್ಯಗಳನ್ನು ಗೆದ್ದುಕೊಂಡಿದೆ. ಇದು ಪತ್ತಷ್ಟು ಉತ್ಸಾಹಗೊಳ್ಳುವಂತೆ ಮಾಡಿದೆ" ಎಂದು ಅಕ್ಷರ್ ಪಟೇಲ್ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ

Story first published: Friday, April 23, 2021, 16:13 [IST]
Other articles published on Apr 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X