ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಯುಎಇ ಪ್ರವೇಶಿಸಲು ಆಟಗಾರರಿಗೆ ಹೊಸ ಷರತ್ತು ವಿಧಿಸಿದ ಬಿಸಿಸಿಐ

IPL 2021: BCCI Asks 8 Teams To Ensure 2 Doses Of Coronavirus Vaccination For All Players

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಏಪ್ರಿಲ್ 9ರಂದು ಕೊರೊನಾ ವೈರಸ್ ಭೀತಿಯ ನಡುವೆಯೇ ಭಾರತದಲ್ಲಿ ಆರಂಭವಾಗಿತ್ತು. ಎಲ್ಲಾ ತಂಡಗಳ ಆಟಗಾರರಿಗೂ ಬಯೋ ಬಬಲ್ ವ್ಯವಸ್ಥೆ ಮಾಡಿ ಕ್ರೀಡಾಂಗಣಗಳಲ್ಲಿ ಪ್ರೇಕ್ಷಕರಿಗೆ ಅನುಮತಿ ನೀಡದೇ ಎಲ್ಲಾ ಪಂದ್ಯಗಳನ್ನು ಸಂಪೂರ್ಣವಾಗಿ ಭಾರತದಲ್ಲಿಯೇ ನಡೆಸುವ ಯೋಜನೆಯನ್ನು ಬಿಸಿಸಿಐ ಹಾಕಿಕೊಂಡಿತ್ತು. ಆದರೆ ಬಿಸಿಸಿಐ ಲೆಕ್ಕಾಚಾರ ಅಂದುಕೊಂಡಂತೆ ಆಗಲಿಲ್ಲ, ಐಪಿಎಲ್ ಇನ್ನೇನು ಅರ್ಧ ಭಾಗದಷ್ಟು ಮುಗಿಯಲಿದೆ ಎನ್ನುವ ಸಮಯಕ್ಕೆ ಸರಿಯಾಗಿ ವಿವಿಧ ತಂಡಗಳ ಕೆಲ ಆಟಗಾರರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು.

ಕೆ ಎಲ್ ರಾಹುಲ್ ನೋಡಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಕಲಿಯಲಿ ಎಂದ ಮಾಜಿ ಕ್ರಿಕೆಟಿಗ!ಕೆ ಎಲ್ ರಾಹುಲ್ ನೋಡಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಕಲಿಯಲಿ ಎಂದ ಮಾಜಿ ಕ್ರಿಕೆಟಿಗ!

ಕೇವಲ ಆಟಗಾರರು ಮಾತ್ರವಲ್ಲದೇ ವಿವಿಧ ತಂಡಗಳ ಸಿಬ್ಬಂದಿ ವರ್ಗದಲ್ಲಿಯೂ ಕೊವಿಡ್ ಸೋಂಕು ಕಾಣಿಸಿಕೊಂಡ ಕಾರಣ ಎಚ್ಚೆತ್ತುಕೊಂಡ ಬಿಸಿಸಿಐ ತಕ್ಷಣವೇ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. 29 ಪಂದ್ಯಗಳು ಯಶಸ್ವಿಯಾಗಿ ಮುಗಿದ ನಂತರ ಈ ದಿಢೀರ್ ನಿರ್ಧಾರ ಕೈಗೊಂಡ ಬಿಸಿಸಿಐ ಉಳಿದ 31 ಪಂದ್ಯಗಳನ್ನು ಯುಎಇಯಲ್ಲಿ ಟಿ ಟ್ವೆಂಟಿ ವಿಶ್ವಕಪ್ ಆರಂಭಕ್ಕೂ ಮುನ್ನವೇ ನಡೆಸಲು ತೀರ್ಮಾನ ಮಾಡಿತ್ತು.

ರೋಹಿತ್ ಶರ್ಮಾ ಹಿಂದಿಕ್ಕಿ ನಂಬರ್ 1 ಸ್ಥಾನಕ್ಕೇರಿದ ರಿಷಭ್ ಪಂತ್!ರೋಹಿತ್ ಶರ್ಮಾ ಹಿಂದಿಕ್ಕಿ ನಂಬರ್ 1 ಸ್ಥಾನಕ್ಕೇರಿದ ರಿಷಭ್ ಪಂತ್!

ಹೀಗೆ ಬಿಸಿಸಿಐ ಹಾಕಿದ ಯೋಜನೆಯ ಪ್ರಕಾರ ಸೆಪ್ಟೆಂಬರ್ 19ರಿಂದ ಉಳಿದ ಪ್ರಸಕ್ತ ಸಾಲಿನ 31 ಐಪಿಎಲ್ ಪಂದ್ಯಗಳನ್ನು ಯುಎಇಯಲ್ಲಿ ನಡೆಸಲು ಅನುಮತಿ ಸಿಕ್ಕಿದ್ದು ಕೆಲವೊಂದು ನೀತಿ ನಿಯಮಗಳನ್ನು ಅನುಸರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಐಪಿಎಲ್ ಆಡಲು ತೆರಳುವ ವಿವಿಧ ದೇಶಗಳ ಆಟಗಾರರು ಕಡ್ಡಾಯವಾಗಿ ಹೋಮ್ ಕ್ವಾರಂಟೈನ್ ನಿಯಮವನ್ನು ಯುಎಇಯಲ್ಲಿ ಪಾಲಿಸಬೇಕಾಗಿದೆ. ಅಷ್ಟೇ ಅಲ್ಲದೆ ಯುಎಇಯಲ್ಲಿಯೂ ಸಹ ಬಯೋ ಬಬಲ್ ನಿಯಮವಿರಲಿದ್ದು ಆಟಗಾರರು ಚಾಚೂ ತಪ್ಪದೇ ನಿಯಮಗಳನ್ನು ಪಾಲಿಸಬೇಕಾಗಿದೆ.

ಇನ್ನು ಈ ನಿಯಮಗಳೆಲ್ಲ ಕೊರೊನಾ ವೈರಸ್ ಆಗಮನದ ನಂತರ ಕ್ರೀಡಾಪಟುಗಳಿಗೆ ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಆದರೆ ಇದೀಗ ಬಿಸಿಸಿಐ ಹೊಸ ನಿಯಮವೊಂದನ್ನು ಪ್ರಕಟಿಸಿದ್ದು ಯುಎಇಯಲ್ಲಿ ನಡೆಯಲಿರುವ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸುವ ಪ್ರತಿ ಆಟಗಾರರು ಸಹ ಇದನ್ನು ಪಾಲಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಬಿಸಿಸಿಐ ಹೊರಡಿಸಿರುವ ಹೊಸ ನಿಯಮದ ಪ್ರಕಾರ ಯುಎಇ ಪ್ರಯಾಣ ಕೈಗೊಳ್ಳುವ ಮುನ್ನ ಪ್ರತಿಯೊಬ್ಬ ಆಟಗಾರರೂ ಸಹ ಕೊರೊನಾ ಲಸಿಕೆಯನ್ನು ಪಡೆದಿರಲೇಬೇಕು. ಹೌದು ಮುಂದುವರಿಯಲಿರುವ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಲು ಪ್ರಯಾಣ ಕೈಗೊಳ್ಳಲಿರುವ ಪ್ರತಿಯೊಬ್ಬ ಆಟಗಾರನೂ ಸಹ ಕಡ್ಡಾಯವಾಗಿ 2 ಡೋಸ್ ಕೊವಿಡ್ ಲಸಿಕೆಯನ್ನು ಪಡೆದಿರಲೇಬೇಕು ಎಂದು ಬಿಸಿಸಿಐ ಹೇಳಿದೆ.

ಭಾರತ vs ಇಂಗ್ಲೆಂಡ್ ಪ್ರಥಮ ಟೆಸ್ಟ್: ಮೂರನೇ ದಿನ ಮಳೆ ಇರುತ್ತಾ? ಇಲ್ಲಿದೆ ಹವಾಮಾನ ವರದಿಭಾರತ vs ಇಂಗ್ಲೆಂಡ್ ಪ್ರಥಮ ಟೆಸ್ಟ್: ಮೂರನೇ ದಿನ ಮಳೆ ಇರುತ್ತಾ? ಇಲ್ಲಿದೆ ಹವಾಮಾನ ವರದಿ

ಹೀಗಾಗಿ ಯುಎಇ ಪ್ರವಾಸ ಕೈಗೊಳ್ಳಲಿರುವ ಎಲ್ಲಾ ಆಟಗಾರರೂ ಕಡ್ಡಾಯವಾಗಿ 2 ಡೋಸೇಜ್ ಕೊವಿಡ್ ಲಸಿಕೆಯನ್ನು ಪಡೆದುಕೊಳ್ಳಬೇಕು ಮತ್ತು ಲಸಿಕೆ ಪಡೆದಿರುವ ವರದಿಯ ಜೊತೆ ಯುಎಇ ಪ್ರಯಾಣವನ್ನು ಕೈಗೊಳ್ಳಬೇಕಾಗಿದೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೆಲ ಆಟಗಾರರು ಮುಂದಿನ ವಾರ ಯುಎಇ ಪ್ರವಾಸ ಕೈಗೊಳ್ಳಲಿದ್ದು ಇದು ಈ ಬಾರಿ ಯುಎಇ ತಲುಪಲಿರುವ ಮೊದಲ ತಂಡವಾಗಿದೆ. ಯುಎಇ ತಲುಪಿದ ನಂತರ 7 ದಿನಗಳ ಐಸೋಲೇಷನ್ ನಿಯಮವನ್ನು ಆಟಗಾರರು ಅನುಸರಿಸಬೇಕಾಗಿದ್ದು, ತದನಂತರ ತಂಡದ ಇತರ ಸದಸ್ಯರ ಜೊತೆ ಅಭ್ಯಾಸದಲ್ಲಿ ತೊಡಗಿಕೊಳ್ಳಬಹುದಾಗಿದೆ.

ಸಿರಾಜ್ & ಆಂಡರ್ಸನ್ ನಡುವೆ ಪಂದ್ಯದ ವೇಳೆ ಮಾತಿನ ಚಕಮಕಿ, ವಿಡಿಯೋ ವೈರಲ್ | Oneindia Kannada

ಇನ್ನು ಮುಂದುವರಿಯಲಿರುವ ಐಪಿಎಲ್ ಟೂರ್ನಿಯಲ್ಲಿ ಇಂಗ್ಲೆಂಡ್ ಆಟಗಾರರು ಭಾಗವಹಿಸುವುದು ಅನುಮಾನ ಎಂದು ಈ ಹಿಂದೆ ಹೇಳಲಾಗುತ್ತಿತ್ತು, ಆದರೆ ಇದೀಗ ಬಹುತೇಕ ಇಂಗ್ಲೆಂಡ್ ಆಟಗಾರರು ಮುಂದುವರಿಯಲಿರುವ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸುವುದು ಖಚಿತ ಎನ್ನಲಾಗುತ್ತಿದೆ. ಹಾಗೂ ಪ್ರಸ್ತುತ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದ್ದು ಈ ಸರಣಿ ಮುಗಿದ ಬಳಿಕ ಟೀಮ್ ಇಂಡಿಯಾದ ಹಲವಾರು ಪ್ರಮುಖ ಆಟಗಾರರು ಮುಂದುವರಿಯಲಿರುವ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಯುಎಇ ಪ್ರವಾಸವನ್ನು ಕೈಗೊಳ್ಳಲಿದ್ದಾರೆ.

Story first published: Friday, August 6, 2021, 19:43 [IST]
Other articles published on Aug 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X