ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ರಣಜಿಗೆ ಮುನ್ನ ಮುಷ್ತಾಕ್ ಅಲಿ ನಡೆಸುವ ಸಾಧ್ಯತೆ

IPL 2021: BCCI may have Syed Mushtaq Ali T20 before Ranji Trophy

ನವದೆಹಲಿ: ಕೊರೊನಾವೈರಸ್ ಶುರುವಾದ ಬಳಿಕ ಭಾರತದಲ್ಲಿ ಮೊದಲ ಕ್ರಿಕೆಟ್ ಟೂರ್ನಿ ಆಯೋಜಿಸಲು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ಯೋಚಿಸುತ್ತಿದೆ. ಐಪಿಎಲ್ 2021ಕ್ಕೆ ಆಟಗಾರರ ಹರಾಜು ಗಮನದಲ್ಲಿಟ್ಟುಕೊಂಡಿರುವ ಬಿಸಿಸಿಐ, ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಟೂರ್ನಿ ನಡೆಸುವ ಸಾಧ್ಯತೆಯಿದೆ.

ಒಲಿಂಪಿಕ್ಸ್‌ನಲ್ಲಿ ಟಿ20 ಕ್ರಿಕೆಟ್‌ ಸೇರ್ಪಡೆಗೆ ರಾಹುಲ್ ದ್ರಾವಿಡ್ ಬ್ಯಾಟಿಂಗ್ಒಲಿಂಪಿಕ್ಸ್‌ನಲ್ಲಿ ಟಿ20 ಕ್ರಿಕೆಟ್‌ ಸೇರ್ಪಡೆಗೆ ರಾಹುಲ್ ದ್ರಾವಿಡ್ ಬ್ಯಾಟಿಂಗ್

ಕೊರೊನಾ ಬಳಿಕ ಚೊಚ್ಚಲ ದೇಸಿ ಟೂರ್ನಿಯಾಗಿ ರಣಜಿ ನಡೆಸಲು ಬಿಸಿಸಿಐ ಮೊದಲು ಯೋಚಿಸಿತ್ತು. ಆದರೆ 14ನೇ ಆವೃತ್ತಿಯ ಐಪಿಎಲ್‌ಗೆ ಆಟಗಾರರನ್ನು ಆರಿಸಲು ಟಿ20 ಟೂರ್ನಿ ಸಹಾಯಕವಾಗಿರುವುದರಿಂದ ರಣಜಿಗೂ ಮುನ್ನ ಮುಷ್ತಾಕ್ ಅಲಿ ಟಿ20 ನಡೆಸಲು ಭಾರತೀಯ ಕ್ರಿಕೆಟ್ ಬೋರ್ಡ್ ಮುಂದಾಗುತ್ತಿದೆ ಎಂದು ತಿಳಿದು ಬಂದಿದೆ.

ಮುಷ್ತಾಕ್ ಅಲಿ ಟ್ರೋಫಿ ಸಲುವಾಗಿ ಬಿಸಿಸಿಐಯು ರಾಜ್ಯ ಕ್ರಿಕೆಟ್ ಅಸೋಸಿಯೇಶನ್‌ಗಳಿಗೆ ಸಂದೇಶ ಕಳುಹಿಸಿದೆ. ಸಂದೇಶದಲ್ಲಿ, ಅಲ್ಲಿ ಎಲ್ಲೆಲ್ಲಿ ಹಲವಾರು ಕ್ರಿಕೆಟ್ ಮೈದಾನಗಳಿವೆ ಮತ್ತು ಕನಿಷ್ಠ 3 ತಂಡಗಳಿಗೆ ಬಯೋ ಬಬಲ್ ರಚಿಸಲು ಫೈವ್ ಸ್ಟಾರ್ ಹೋಟೆಲ್‌ಗಳು ಎಲ್ಲಿವೆ ಎಂದು ಗುರುತು ಮಾಡಲು ಹೇಳಿದೆ ಎನ್ನಲಾಗಿದೆ.

ಧೋನಿ ಸಿಎಸ್‌ಕೆ ನಾಯಕತ್ವ ಡು ಪ್ಲೆಸಿಸ್‌ಗೆ ನೀಡಬಹುದು: ಬಂಗಾರ್ಧೋನಿ ಸಿಎಸ್‌ಕೆ ನಾಯಕತ್ವ ಡು ಪ್ಲೆಸಿಸ್‌ಗೆ ನೀಡಬಹುದು: ಬಂಗಾರ್

'ಕನಿಷ್ಠ ಎರಡರಿಂದ ಮೂರು ತಂಡಗಳು ಭಾರತೀಯ ಪ್ರತಿಭಾನ್ವಿತರ ವಿಚಾರದಲ್ಲಿ ದುರ್ಬಲವಾಗಿರುವುದರಿಂದ ಐಪಿಎಲ್ ಆಟಗಾರರ ಹರಾಜು ಪ್ರಾಮುಖ್ಯವೆನಿಸಿದೆ. ಪ್ರತಿಭೆಗಳನ್ನು ಹುಡುಕಲು ಐಪಿಎಲ್‌ ಖಂಡಿತಾ ಅನಿವಾರ್ಯವೆನಿಸಿದೆ. ಹೀಗಾಗಿ ರಣಜಿಗೂ ಮುನ್ನ ಮುಷ್ತಾಕ್ ಅಲಿ ಟ್ರೋಫಿ ನಡೆಯಲಿದೆ,' ಎಂದು ಪಿಟಿಐಗೆ ಮೂಲವೊಂದು ತಿಳಿಸಿದೆ.

Story first published: Monday, November 16, 2020, 9:10 [IST]
Other articles published on Nov 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X