ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮನವಿಯನ್ನು ತಿರಸ್ಕರಿಸಿದ ಬಿಸಿಸಿಐ

IPL 2021: BCCI shoots down Virat Kohlis call to reschedule international games

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮನವಿಯೊಂದನ್ನು ಮಾಡಿದ್ದರು. ಸತತವಾಗಿ ಬಯೋ ಬಬಲ್‌ನಲ್ಲಿದ್ದು ಆಟಗಾರರು ಸರಣಿಗಳಲ್ಲಿ ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆಟಗಾರರ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಬದಲಾವಣೆ ಮಾಡಿಕೊಳ್ಳವ ಅಗತ್ಯವಿದೆ ಎಂದಿದ್ದರು.

ಆದರೆ ಟೀಮ್ ಇಂಡಿಯಾ ನಾಯಕ ಮಾಡಿದ್ದ ಮನವಿಯನ್ನು ಬಿಸಿಸಿಐ ತಿರಸ್ಕರಿಸಿದೆ. ಈಗಿನ ಸ್ಥಿತಿಯಲ್ಲಿ ಎಲ್ಲಾ ಪಾಲುದಾರರನ್ನು ದೃಷ್ಟಿಯಲ್ಲಿಟ್ಟುಕೊಂಡು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ವೇಳಾಪಟ್ಟಿ ಬದಲಾಯಿಸುವ ಸ್ಥಿತಿಯಲ್ಲಿ ಇಲ್ಲ ಎಂದು ಬಿಸಿಸಿಐ ಹೇಳಿದೆ.

ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ ವಹಿಸಿಕೊಳ್ಳುತ್ತಲೇ ಪಂತ್ ಹೆಸರಿಗೆ ದಾಖಲೆಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ ವಹಿಸಿಕೊಳ್ಳುತ್ತಲೇ ಪಂತ್ ಹೆಸರಿಗೆ ದಾಖಲೆ

ಎಎನ್‌ಐ ಜೊತೆಗೆ ಬಿಸಿಸಿಐ ಅಧಿಕಾರಿಯೊಬ್ಬರು ಮಾತನಾಡುತ್ತಾ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ನಾಯಕ ವಿರಾಟ್ ಕೊಹ್ಲಿ ತೋರಿಸಿದ ಕಾಳಜಿ ಬಹಳ ಮುಖ್ಯವಾದದ್ದು. ಆದರೆ ವೇಳಾಪಟ್ಟಿಯಲ್ಲಿ ಬದಲಾವಣೆಗಳನ್ನು ಮಾಡುವುದು ದೊಡ್ಡ ಏರುಪೇರಿಗೆ ಕಾರಣವಾಗುತ್ತದೆ. ಅದರಲ್ಲೂ ಕೊರೊನಾ ವೈರಸ್ ಬೀರಿದ ಪರಿಣಾಮ ಮಂಡಳಿಯಮೇಲೆ ಮತ್ತಷ್ಟು ಮುಂದುವರಿಯುತ್ತದೆ" ಎಂದು ಪ್ರತಿಕ್ರಿಯಿಸಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಕಡಿಮೆ ಮಾಡುವುದರಿಂದಾಗಿ ಅದು ನೇರವಾಗಿ ಒರಿಣಾಮ ಬೀರುತ್ತದೆ. ಆದಾಯದ ಮೇಲೆ ಅದರ ಏಟು ಬೀಳುತ್ತದೆ. ಅದು ದೇಶೀಯ ಆಟಗಾರರ ಆದಾಯದ ಮೇಲೆಯೂ ಪರಿಣಾಮವನ್ನು ಉಂಟು ಮಾಡುತ್ತದೆ. ಯಾಕೆಂದರೆ ಕಾಂಟ್ರಾಕ್ಟ್‌ ಹೊಂದಿರುವ ಆಟಗಾರರು ಎಷ್ಟು ಪಂದ್ಯಗಳನ್ನು ಆಡುತ್ತಾರೆ ಎಂಬುವುದು ಅವರ ಆದಾಯಕ್ಕೆ ಗಣನೆಗೆ ಬರುವುದಿಲ್ಲ. ಆದರೆ ದೇಶೀಯ ಕ್ರಿಕೆಟಿಗರಿಗೆ ಅದು ಪರಿಣಾಮವನ್ನು ಬೀರುತ್ತದೆ" ಎಂದು ಹೇಳಿಕೆಯನ್ನು ನೀಡಿದ್ದಾರೆ.

ರೋಹಿತ್, ಕೊಹ್ಲಿಯನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ರಿಷಭ್ ಪಂತ್!ರೋಹಿತ್, ಕೊಹ್ಲಿಯನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ರಿಷಭ್ ಪಂತ್!

ಟೀಮ್ ಇಂಡಿಯಾ ಆಟಗಾರು ನಿರಂತರವಾಗಿ ಮುಂದಿನ ಕೆಲ ತಿಂಗಳುಗಳ ಕಾಲ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳಬೇಕಿದೆ. ಕಳೆದ ಐಪಿಎಲ್ ಮುಗಿಸಿ ದುಬೈನಿಂದ ನೇರವಾಗಿ ಆಸ್ಟ್ರೇಲಿಯಾಗೆ ಪ್ರಯಾಣಿಸಿದ್ದ ಭಾರತೀಯ ಆಟಗಾರರು ಬಳಿಕ ಆಸಿಸ್ ಪ್ರವಾಸ ಮುಗಿಸಿ ಕೇವಲ ಒಂದು ವಾರಗಳ ವಿರಾಮವನ್ನು ಪಡೆದುಕೊಂಡಿದ್ದರು. ಇಂಗ್ಲೆಂಡ್ ಪ್ರವಾಸ ಅಂತ್ಯವಾಗುತ್ತಿದ್ದಂತೆಯೇ ಆಟಗಾರರು ನೇರವಾಗಿ ಐಪಿಎಲ್ ಬಯೋಬಬಲ್‌ಗೆ ಸೇರಿದ್ದು ಈ ಸರಣಿಯ ನಂತರ ಇಂಗ್ಲೆಂಡ್‌ಗೆ ಪ್ರವಾಸಗೈದು ಐಸಿಸಿ ವಿಶ್ವ ಟಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಮಡಿಯಾ ಭಾಗಿಯಾಗಲಿದೆ.

Story first published: Wednesday, March 31, 2021, 13:54 [IST]
Other articles published on Mar 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X