ಐಪಿಎಲ್ 2021: ಮತ್ತೆ ಪ್ರೇಕ್ಷಕರ ಸಮ್ಮುಖದಲ್ಲಿಯೇ ನಡೆಯಲಿದೆ ಐಪಿಎಲ್!

ಕೊರೊನಾವೈರಸ್‌ನಿಂದಾಗಿ ಪ್ರೇಕ್ಷರಿಲ್ಲದೇ 2020ರ ಸಂಪೂರ್ಣ ಆವೃತ್ತಿ ಹಾಗೂ 2021ರ ಮೊದಲ ಭಾಗ ಆಯೋಜನೆಯಾಗಿತ್ತು. ಇದೀಗ ಕಡೆಗೂ ಐಪಿಎಲ್ ಪಂದ್ಯಗಳು ಪ್ರೇಕ್ಷಕರ ಸಮ್ಮುಖದಲ್ಲಿ ನಡೆಯುವ ಕಾಲ ಸನ್ನಿಹಿತವಾಗಿದೆ. ದುಬೈನಲ್ಲಿ ನಡೆಯಲಿರುವ ಐಪಿಎಲ್‌ನ ಉಳಿದ ಪಂದ್ಯಗಳಲ್ಲಿ ಪ್ರೇಕ್ಷಕರಿಗೆ ಅವಕಾಶವನ್ನು ನೀಡಲು ಬಿಸಿಸಿಐ ನಿರ್ಧಾರ ಮಾಡಿದೆ.

ಬುಧವಾರ ಈ ಬಗ್ಗೆ ಬಿಸಿಸಿಐ ಅಧಿಕೃತವಾಗಿ ಮಾಹಿತಿಯನ್ನು ನೀಡಿದ್ದು ಯುಎಇನಲ್ಲಿ ನಡೆಯಲಿರುವ ಎರಡನೇ ಚರಣದ ಪಂದ್ಯಗಳಲ್ಲಿ ಸೀಮಿತ ಪ್ರಮಾಣದಲ್ಲಿ ಪ್ರೇಕ್ಷಕರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ. ಹೀಗಾಗಿ ಚುಟುಕು ಕ್ರಿಕೆಟ್‌ಗೆ ಮತ್ತಷ್ಟು ತಂಗು ತುಂಬುವದರಲ್ಲಿ ಅನುಮಾನವಿಲ್ಲ.

ಈ ಬಾರಿಯ ಐಪಿಎಲ್ ಪಂದ್ಯಗಳು ಯುಎಇ ಮೂರು ತಾಣಗಳಾದ ದುಬೈ, ಶಾರ್ಜಾ ಹಾಗೂ ಅಬುದಾಬಿಯಲ್ಲಿ ನಡೆಯಲಿದೆ. ಈ ಮೂರು ಕ್ರೀಡಾಂಗಣದಲ್ಲಿ ಕೂಡ ಸೀಮಿತ ಅವಧಿಯಲ್ಲಿ ಪ್ರೇಕ್ಷಕರಿಗೆ ಅವಕಾಶವನ್ನು ನೀಡಲು ನಿರ್ಧರಿಸಲಾಗಿದೆ. ಯುಎಇನಲ್ಲಿರುವ ಕೊರೊನಾ ನಿಯಮಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅದಕ್ಕೆ ಪೂರಕವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಮೂಲಕ 2019ರ ಐಪಿಎಲ್ ಆವೃತ್ತೊಯ ಬಳಿಮ ಇದೇ ಮೊದಲ ಬಾರಿಗೆ ಪ್ರೇಕ್ಷಕರ ಸಮ್ಮುಖದಲ್ಲಿ ಐಪಿಎಲ್ ಟೂರ್ನಿ ನಡೆಯಲಿದೆ. 2020ರ ಆವೃತ್ತಿಯ ಸಂಪೂರ್ಣ ಪಂದ್ಯಗಳು ಹಾಗೂ 2021ರ ಆವೃತ್ತಿಯ ಮೊದಲ 29 ಪಂದ್ಯಗಳು ಪ್ರೇಕ್ಷಕರ ಅಲಭ್ಯತೆಯಲ್ಲಿ ನಡೆದಿತ್ತು.

ಟಿ ಟ್ವೆಂಟಿ ವಿಶ್ವಕಪ್ ನಂತರ ಟೀಮ್ ಇಂಡಿಯಾದಲ್ಲಿ ಈ ಮೂರು ಪ್ರಮುಖ ಬದಲಾವಣೆಗಳು ಖಚಿತಟಿ ಟ್ವೆಂಟಿ ವಿಶ್ವಕಪ್ ನಂತರ ಟೀಮ್ ಇಂಡಿಯಾದಲ್ಲಿ ಈ ಮೂರು ಪ್ರಮುಖ ಬದಲಾವಣೆಗಳು ಖಚಿತ

ಮಾಹಿತಿ ನೀಡಿದ ಐಪಿಎಲ್: ಪ್ರೇಕ್ಷಕರಿಗೆ ಅವಕಾಶ ನೀಡುವ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿ ಮಾಹಿತಿಯನ್ನು ನೀಡಲಾಗಿದೆ. ಐಪಿಎಲ್ 2021ರ ಆವೃತ್ತಿಯ ಎರಡನೇ ಚರಣದ ಪಮದ್ಯಗಳು ಐದು ಬಾರಿಯ ಚಾಂಪಿಯನ್ ಹಾಗೂ ಹಾಲಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ಹಾಗೂ ಮೂರು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಮಧ್ಯೆ ಸೆಪ್ಟೆಂಬರ್ 19ರಂದು ನಡೆಯುವ ಮೂಲಕ ಚಾಲನೆ ಪಡೆಯಲಿದೆ. ಕೊರೊನಾವೈರಸ್‌ನ ಪರಿಸ್ಥಿತಿಯಿಂದಾಗಿ ಸ್ವಲ್ಪ ಸಮಯದ ಬಳಿಕ ಪ್ರೇಕ್ಷಕರ ಮಧ್ಯೆ ಈ ಪಂದ್ಯಗಳು ನಡೆಯುತ್ತಿರುವುದರಿಂದಾಗಿ ಮುಂಬೈ ಹಾಗೂ ಚೆನ್ನೈ ನಡುವಿನ ಪಂದ್ಯ ಮಹತ್ವದ ಕ್ಷಣವಾಗಿರಲಿದೆ" ಎಂದು ಪ್ರಕಟಣೆಯಲ್ಲಿ ಹೇಳಿದೆ.

"ದುಬೈ, ಶಾರ್ಜಾ ಹಾಗೂ ಅಬುದಾಬಿ ಕ್ರೀಡಾಂಗಣಗಳಲ್ಲಿ ಈ ಪಂದ್ಯಗಳು ನಡೆಯಲಿದ್ದು ಕೊರೊನಾವೈರಸ್‌ನ ಪರಿಸ್ಥಿತಿ ಹಾಗೂ ಯುಎಇ ಸರ್ಕಾರ ನಿಯಮಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸೀಮಿತ ಪ್ರೇಕ್ಷಕರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಪಂದ್ಯಗಳ ಟಿಕೆಟ್‌ಗಳು ಸೆಪ್ಟೆಂಬರ್ 16ರಂದು ಲಭ್ಯವಾಗವಾಗಲಿದೆ" ಎಂದು ತಿಳಿಸಿದೆ. ಐಪಿಎಲ್‌ನ ಅಧಿಕೃತ ವೆಬ್‌ಸೈಟ್‌ನಿಂದ ಟಿಕೆಟ್‌ಅನ್ನು ಕೊಂಡು ಕೊಳ್ಳಬಹುದು ಎಂದು ಐಪಿಎಲ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಅಂತಿಮ ಹಂತದ ಸಿದ್ಧತೆ: ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಭಾಗಿಯಾಗಲು ಎಲ್ಲಾ ತಂಡಗಳು ಕೂಡ ಯುಎಇಗೆ ತಲುಪಿವೆ. ಬಹುತೇಕ ಆಟಗಾರರು ಕೂಡ ಈಗಾಗಲೇ ದುಬೈ ತಲುಪಿದ್ದು ಕೆಲವರು ಕ್ವಾರಂಟೈನ್ ಪೂರೈಸುತ್ತಿದ್ದಾರೆ. ಎಲ್ಲಾ 8 ಫ್ರಾಂಚೈಸಿಗಳು ಕೂಡ ಈ ಬಾರಿಯ ಐಪಿಎಲ್ ಟೂರ್ನಿಯ ಎರಡನೇ ಚರಣದ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಹಾತೊರೆಯಿತ್ತಿದೆ. ಈ ಮೂಲಕ ಪ್ರತಿಷ್ಠಿತ ಟ್ರೋಫಿಗೆ ಮುತ್ತಿಕ್ಕಲು ಸಜ್ಜಾಗಿದೆ. ಆಟಗಾರರೆಲ್ಲರೂ ಕೂಡ ಭರ್ಜರಿಯಾಗಿ ಅಭ್ಯಾಸವನ್ನು ನಡೆಸುತ್ತಿದ್ದು ಕೊನೆಯ ಕ್ಷಣದ ಸಿದ್ಧತೆಯನ್ನು ನಡೆಸುತ್ತಿದ್ದಾರೆ.

ಜಿಲ್ಲಾಧಿಕಾರಿ ದೇವಸ್ಥಾನ ಹೊಡೆದು ಹಾಕಿದ್ದು ತಪ್ಪು- ಮೈಸೂರು ದೇವಸ್ಥಾನ ತೆರವು ವಿಚಾರಕ್ಕೆ ಈಶ್ವರಪ್ಪ ಪ್ರತಿಕ್ರಿಯೆ | Oneindia Kannada

ಐಪಿಎಲ್ ನಂತರ ನಡೆಯಲಿದೆ ವಿಶ್ವಕಪ್: ಇನ್ನು ಯುಎಇನಲ್ಲಿ ಐಪಿಎಲ್ ಮುಕ್ತಾವಾಗುತ್ತಿದ್ದಂತೆಯೇ ಎರಡನೇ ದಿನಗಳ ಅಂತರದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಸುದೀರ್ಘ ಕಾಲದ ಬಳಿಕ ನಡೆಯುತ್ತಿರುವ ಈ ಪ್ರತಿಷ್ಠಿತ ಟೂರ್ನಿ ಕೂಡ ಯುಎಇನಲ್ಲಿ ಮತ್ತು ಒಮಾನ್‌ನಲ್ಲಿ ನಡೆಯಲಿದೆ. ಹೀಗಾಗಿ ಈ ಟೂರ್ನಿ ಕೂಡ ಪ್ರೇಕ್ಷಕರ ಸಮ್ಮುಖದಲ್ಲಿಯೇ ನಡೆಯುವ ಸಾಧ್ಯತೆ ದಟ್ಟವಾಗಿದೆ. ಕ್ರೀಡಾಂಗಣದ ಒಟ್ಟು ಸಾಮರ್ಥ್ಯದ ಅರ್ಧದಷ್ಟು ಪ್ರೇಕ್ಷಕರಿಗೆ ಅವಕಾಶ ದೊರೆಯುವ ಸಾಧ್ಯತೆಯಿದೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 15 - October 24 2021, 03:30 PM
ಶ್ರೀಲಂಕಾ
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, September 15, 2021, 17:11 [IST]
Other articles published on Sep 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X