ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2021 Revenue : ಬಿಸಿಸಿಐಗೆ ನಷ್ಟವಾದರೂ ಐಪಿಎಲ್ ಆಟಗಾರರಿಗೆ ಸಂಪೂರ್ಣ ಹಣ ಕೊಡಲೇಬೇಕು!

IPL 2021: BCCI to lose but players to be paid in full despite IPL postponement

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿಯ ಉದ್ದೇಶಿತ ಟೂರ್ನಿ ಪೂರ್ಣಗೊಳ್ಳದೆ ಅಮಾನತಾಗಿದೆ. ಬಯೋಬಬಲ್‌ ಒಳಗೆ ಹೆಚ್ಚುತ್ತಿದ್ದ ಕೋವಿಡ್-19 ಸೋಂಕಿತರ ಸಂಖ್ಯೆಯಿಂದಾಗಿ ನಗದು ಶ್ರೀಮಂತ ಟೂರ್ನಿಯನ್ನು ರದ್ದು ಮಾಡುವ ಅನಿವಾರ್ಯತೆಗೆ ಬಿಸಿಸಿಐ ಒಳಗಾಗಿತ್ತು. ಐಪಿಎಲ್‌ನಲ್ಲಿ ಈವರೆಗೆ ನಡೆದಿದ್ದು ಬರೀ 29 ಪಂದ್ಯಗಳು. ಇನ್ನೂ 31 ಪಂದ್ಯಗಳು ಬಾಕಿ ಉಳಿದಿದ್ದವು.

ಡೇವಿಡ್ ವಾರ್ನರ್‌ಗೆ ಮನ ಕಲುಕುವ ಸಂದೇಶ ಬರೆದ ಪುತ್ರಿಯರುಡೇವಿಡ್ ವಾರ್ನರ್‌ಗೆ ಮನ ಕಲುಕುವ ಸಂದೇಶ ಬರೆದ ಪುತ್ರಿಯರು

ದೊಡ್ಡ ಮಟ್ಟದ ಟೂರ್ನಿ ಅರ್ಧದಲ್ಲೇ ನಿಂತಿದ್ದರಿಂದ ಬಿಸಿಸಿಐ, ಐಪಿಎಲ್ ಅಧಿಕೃತ ಪ್ರಸಾರಕ ಸ್ಟಾರ್ ಸ್ಪೋರ್ಟ್ಸ್ ಮತ್ತು ಎಲ್ಲಾ ಎಂಟು ಫ್ರಾಂಚೈಸಿಗಳಿಗೆ ಬರಬೇಕಾದ ಆದಾಯ ಬಾರದೆ ನಷ್ಟವಾಗಿದೆ. ಆದರೂ ಆಟಗಾರರಿಗೆ ನೀಡಬೇಕಾದ ಹಣವನ್ನು ಸಂಪೂರ್ಣವಾಗಿ ನೀಡಲಾಗುತ್ತದೆ ಎಂದು ಬಿಸಿಸಿಐ ಹೇಳಿದೆ.

ಬಿಸಿಸಿಐಗೆ 2000 ಕೋ.ರೂ. ನಷ್ಟ

ಬಿಸಿಸಿಐಗೆ 2000 ಕೋ.ರೂ. ನಷ್ಟ

2021ರ ಐಪಿಎಲ್ ಅರ್ಧಕ್ಕೆ ನಿಂತಿದ್ದರಿಂದ ಬಿಸಿಸಿಐಗೆ ಒಟ್ಟಾರೆ ಸುಮಾರು 2000 ಕೋಟಿ ರೂ.ನಷ್ಟು ನಷ್ಟವಾಗಲಿದೆ. ಈ ನಷ್ಟದ ಪ್ರಮಾಣ ಸ್ವಲ್ಪಮಟ್ಟಿಗೆ ಸುಧಾರಣೆಯಾಗಲಿದೆ. ಅದು ಇದೇ ವರ್ಷ ಐಪಿಎಲ್ ಮುಂದುವರೆದರೆ ಮಾತ್ರ. ಆದರೆ ಈ ವರ್ಷ ಐಪಿಎಲ್ ಉಳಿದ ಪಂದ್ಯಗಳು ನಡೆಯಲಿ, ಬಿಡಲಿ. ಆಟಗಾರರು ಸಂಪೂರ್ಣ ಹಣ ಪಡೆಯಲಿದ್ದಾರೆ ಎಂದು ಬಿಸಿಸಿಐ ಭರವಸೆ ನೀಡಿದೆ.

ನಷ್ಟವಾದರೂ ಯಾಕೆ ಹಣ ಕೊಡಲೇಬೇಕು?

ನಷ್ಟವಾದರೂ ಯಾಕೆ ಹಣ ಕೊಡಲೇಬೇಕು?

ಐಪಿಎಲ್ ಪೂರ್ಣಗೊಳ್ಳದೆ ಬಿಸಿಸಿಐಗೆ ನಷ್ಟವಾಗಿದ್ದರೂ ಆಟಗಾರರಿಗೆ ಸಂಪೂರ್ಣ ಹಣ ಕೊಡಲೇ ಬೇಕು ಯಾಕೆಂದರೆ, ಐಪಿಎಲ್ ಆಟಗಾರರ ಒಪ್ಪಂದದ ಪ್ರಕಾರ, ಫ್ರಾಂಚೈಸಿಗಳು ಆಟಗಾರರಿಗೆ ಒಪ್ಪಂದದ ಹಣವನ್ನು ಮೂರು ಕಂತುಗಳಲ್ಲಿ ನೀಡುತ್ತವೆ. ಇದರಲ್ಲಿ ಒಂದು ಕಂತಿನ ಹಣ ಈಗಾಗಲೇ ನೀಡಿ ಆಗಿದೆ. ಇನ್ನೆರಡು ಕಂತುಗಳು ಟೂರ್ನಿಯ ಬಳಿಕ ನೀಡಲಾಗುತ್ತದೆ. ಟೂರ್ನಿ ಮತ್ತೆ ಚಾಲೆನೆಗೊಳ್ಳದಿದ್ದರೂ ಆಟಗಾರರಿಗೆ ಹಣ ಬೀಳುತ್ತದೆ. ಯಾಕೆಂದರೆ ಆಟಗಾರರ ಸಂಬಳದ ಹಣ ಫ್ರಾಂಚೈಸಿ ಇನ್ಶೂರನ್ಸ್‌ನಲ್ಲಿ ಕವರ್ ಆಗಿರುತ್ತದೆ. ಹೀಗಾಗಿ ಆಟಗಾರರು ಗಾಯಗೊಂಡರೆ ಅಥವಾ ಟೂರ್ನಿ ನಡೆಯದಿದ್ದರೆ ಒಪ್ಪಂದಂತೆ ಬಿಸಿಸಿಐ ಆಟಗಾರರಿಗೆ ಸಂಬಳ ನೀಡಬೇಕಾಗುತ್ತದೆ.

ಆಟಗಾರರ ಒಟ್ಟು ಸ್ಯಾಲರಿ ಎಷ್ಟಾಗುತ್ತದೆ?

ಆಟಗಾರರ ಒಟ್ಟು ಸ್ಯಾಲರಿ ಎಷ್ಟಾಗುತ್ತದೆ?

ಇನ್‌ಸೈಡ್‌ ಸ್ಪೋರ್ಟ್ಸ್ ವರದಿಯ ಪ್ರಕಾರ ಐಪಿಎಲ್‌ 2021ರಲ್ಲಿ ಆಟಗಾರರಿಗೆ ನೀಡಲಾಗುವ ಸಂಬಳದ ಮೊತ್ತ ಸುಮಾರು 483 ಕೋಟಿ ರೂ. ಇನ್ನು ಐಪಿಎಲ್ ಪ್ರಸಾರಕ ಸ್ಟಾರ್‌ ಸ್ಪೋರ್ಟ್ಸ್ ಪ್ರತೀ ಪಂದ್ಯಕ್ಕೆ ಬಿಸಿಸಿಐಗೆ 54.4 ಕೋಟಿ ರೂ. ಪಾವತಿಸುತ್ತದೆ. ನಡೆದ 29 ಪಂದ್ಯಗಳಿಗೆ ಈ ಹಣ ಲೆಕ್ಕ ಹಾಕಿದರೆ 1,577 ಕೋಟಿ ರೂ. ಆಗುತ್ತದೆ. ಇಷ್ಟು ಹಣವನ್ನು ಸ್ಟಾರ್‌ ಬಿಸಿಸಿಐಗೆ ನೀಡುತ್ತದೆ. ಇನ್ನೂ 31 ಪಂದ್ಯಗಳಿಗೆ ಬಿಸಿಸಿಐಗೆ ಆಗುವ ನಷ್ಟ 1,700 ಕೋಟಿ ರೂ.

Story first published: Wednesday, May 5, 2021, 14:45 [IST]
Other articles published on May 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X