ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಸಿಎಸ್‌ಕೆ ಕೈ ಬಿಡಲಿರುವ ಪ್ರಮುಖ 7-8 ಆಟಗಾರರಿವರು!

IPL 2021: Chennai Super Kings ready to drop 7-8 big players before IPL 2021 Auctions

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ 2020ರ ಸೀಸನ್‌ನಲ್ಲಿ ಪರದಾಡಿತ್ತು. ಅಲ್ಲದೆ ಲೀಗ್‌ ಹಂತದಲ್ಲಿ ಹೊರ ಬಿದ್ದ ಮೊದಲ ತಂಡವಾಗಿ ಗುರುತಿಸಿಕೊಂಡಿತ್ತು. ಅಷ್ಟೇ ಅಲ್ಲ, ಐಪಿಎಲ್ ಇತಿಹಾಸದಲ್ಲಿ ಸಿಎಸ್‌ಕೆ ಪ್ಲೇ ಆಫ್‌ಗೆ ಪ್ರವೇಶಿಸದೆಯೇ ಹೊರ ಬಿದ್ದಿದ್ದು ಕಳೆದ ಸೀಸನ್‌ನಲ್ಲೇ ಮೊದಲು. ಟೂರ್ನಿ ಮುಗಿಯುವಾಗ ಸಿಎಸ್‌ಕೆ 7ನೇ ಸ್ಥಾನಿಯಾಗಿ ಅಂಕಪಟ್ಟಿಯಲ್ಲಿ ಕಾಣಿಸಿಕೊಂಡಿತ್ತು.

ಕ್ರಿಕೆಟ್ ದಂತಕತೆಗಳ ಹಿಂದಿಕ್ಕಿ ದಾಖಲೆ ನಿರ್ಮಿಸಿದ ಸ್ಟೀವ್ ಸ್ಮಿತ್!ಕ್ರಿಕೆಟ್ ದಂತಕತೆಗಳ ಹಿಂದಿಕ್ಕಿ ದಾಖಲೆ ನಿರ್ಮಿಸಿದ ಸ್ಟೀವ್ ಸ್ಮಿತ್!

14 ಆವೃತ್ತಿಯ ಐಪಿಎಲ್‌ಗೆ ಬಿಸಿಸಿಐ ತಯಾರಿ ನಡೆಸುತ್ತಿರುವ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್‌ ಕೂಡ ತಂಡದಲ್ಲಿ ಆಟಗಾರರನ್ನು ಬದಲಾಯಿಸಿಕೊಳ್ಳಲು ಯೋಚಿಸುತ್ತಿದೆ. ಕಳೆದ ಸೀಸನ್‌ನಲ್ಲಿ ತಂಡ ಕೆಟ್ಟ ಪ್ರದರ್ಶನ ನೀಡಿದ್ದರಿಂದ ಮುಂಬರುವ ಸೀಸನ್‌ಲ್ಲಿ ಸಿಎಸ್‌ಕೆ ಬದಲಾವಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿದೆ.

ಐಪಿಎಲ್ ಹರಾಜು: 8 ತಂಡಗಳು ಬಿಡುಗಡೆಗೊಳಿಸಬಲ್ಲ ಆಟಗಾರರ ಸಂಭಾವ್ಯ ಪಟ್ಟಿಐಪಿಎಲ್ ಹರಾಜು: 8 ತಂಡಗಳು ಬಿಡುಗಡೆಗೊಳಿಸಬಲ್ಲ ಆಟಗಾರರ ಸಂಭಾವ್ಯ ಪಟ್ಟಿ

ಫೆಬ್ರವರಿಯಲ್ಲಿ 2021ರ ಐಪಿಎಲ್‌ಗಾಗಿ ಆಟಗಾರರ ಹರಾಜು ನಡೆಯಲಿದೆ. ಆದರೆ ಇದಕ್ಕೂ ಮುನ್ನವೇ ಸಿಎಸ್‌ಕೆ ಪ್ರಮುಖ 7-8 ಆಟಗಾರರನ್ನು ತಂಡದಿಂದ ಕೈಬಿಡಲಿದೆ ಎನ್ನಲಾಗುತ್ತಿದೆ.

ತಂಡದಿಂದ ಹೊರ ಹಾಕೋದ್ಯಾಕೆ

ತಂಡದಿಂದ ಹೊರ ಹಾಕೋದ್ಯಾಕೆ

ಸಿಎಸ್‌ಕೆ ತಂಡದಿಂದ ಪ್ರಮುಖ ಆಟಗಾರರನ್ನು ಹೊರ ಹಾಕುವುದರಲ್ಲಿದೆ ಯಾಕೆಂದರೆ ಸಿಎಸ್‌ಕೆ ಪರ್ಸ್‌ನಲ್ಲಿ ಸದ್ಯ ಏನೂ ಹಣವಿಲ್ಲ. ಸಿಎಸ್‌ಕೆ ಪರ್ಸ್‌ನಲ್ಲಿ ಸದ್ಯ ಕೇವಲ 15 ಲಕ್ಷ ಮಾತ್ರ ಹಣವಿದೆ. ಈ ಬಾರಿಯ ಹರಾಜಿನ ವೇಳೆ ಪರ್ಸ್‌ ಮೌಲ್ಯವನ್ನು ಹೆಚ್ಚಿಸಲಾಗುವುದಿಲ್ಲ ಎಂದು ಐಪಿಎಲ್‌ ಗವರ್ನಿಂಗ್ ಕೌನ್ಸಿಲ್ ಈಗಾಗಲೇ ಹೇಳಿರುವುದರಿಂದ ಹೆಚ್ಚು ಬೆಲೆ ಬಾಳುವ ಆದರೆ ಫಾರ್ಮ್‌ನಲ್ಲಿ ಇಲ್ಲದ ಪ್ರಮುಖ ಆಟಗಾರರನ್ನು ಕೈ ಬಿಡಲು ಸಿಎಸ್‌ಕೆ ಯೋಚಿಸಿದೆ ಎಂದು ತಿಳಿದುಬಂದಿದೆ.

ಪ್ರಮುಖ ಆಟಗಾರರು ಹೊರಕ್ಕೆ

ಪ್ರಮುಖ ಆಟಗಾರರು ಹೊರಕ್ಕೆ

2021ರ ಐಪಿಎಲ್‌ ಸೀಸನ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್‌ ತಂಡ, ಆಲ್ ರೌಂಡರ್ ಕೇದಾರ್ ಜಾಧವ್, ಇಮ್ರಾನ್ ತಾಹಿರ್, ಡ್ವೇನ್ ಬ್ರಾವೋ, ಹರ್ಭಜನ್ ಸಿಂಗ್ ಇಂಥ ಪ್ರಮುಖ ಆಟಗಾರರನ್ನು ಕೈಬಿಡಲಿದೆ. ಇದರಲ್ಲಿ ಕಳೆದ ಸೀಸನ್‌ನಲ್ಲಿ ಕೆಲವರಿಗೆ ಆಡಲು ಸರಿಯಾದ ಅವಕಾಶ ಲಭಿಸಲಿಲ್ಲ. ಅವಕಾಶ ಲಭಿಸಿದ ಒಂದಿಷ್ಟು ಮಂದಿ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಆದರೆ ಮುಂದಿನ ಬಾರಿಯೂ ಸಿಎಸ್‌ಕೆ ಎಂದಿನ ನಾಯಕ ಎಂಎಸ್ ಧೋನಿ ಅವರೇ ಕ್ಯಾಪ್ಟನ್ ಆಗಿರಲಿದ್ದಾರೆ ಎನ್ನಲಾಗಿದೆ.

ಹೊರ ಬೀಳಬಹುದಾದ ಆಟಗಾರರು

ಹೊರ ಬೀಳಬಹುದಾದ ಆಟಗಾರರು

1) ಕೇದಾರ ಜಾಧವ್ - 7.8 ಕೋ.ರೂ.
2) ಇಮ್ರಾನ್ ತಾಹಿರ್ - 1 ಕೋ.ರೂ.
3) ಪಿಯೂಷ್ ಚಾವ್ಲಾ - 6.75 ಕೋ.ರೂ.
4) ಹರ್ಭಜನ್ ಸಿಂಗ್ - 2 ಕೋ.ರೂ.
5) ಮುರಳಿ ವಿಜಯ್ - 2 ಕೋ.ರೂ.
6) ಡ್ವೇನ್ ಬ್ರಾವೋ - 6.4 ಕೋ.ರೂ. (ಫಿಟ್ನೆಸ್‌ ಅನ್ನು ಅವಲಂಬಿಸಿರುತ್ತದೆ)
7) ಜೋಶ್ ಹ್ಯಾಝಲ್ವುಡ್ 2.0 ಕೋ.ರೂ.
8) ಕರ್ಣ್ ಶರ್ಮಾ 5 ಕೋ.ರೂ.

ಉಳಿಸಿಕೊಳ್ಳಬಹುದಾದ ಆಟಗಾರರು

ಉಳಿಸಿಕೊಳ್ಳಬಹುದಾದ ಆಟಗಾರರು

1) ಎಂ.ಎಸ್ ಧೋನಿ (15 ಕೋ.ರೂ.)
2) ದೀಪಕ್ ಚಾಹರ್
3) ಲುಂಗಿ ಎನ್‌ಗಿಡಿ (0.50 ಕೋ.ರೂ.)
4) ರವೀಂದ್ರ ಜಡೇಜಾ (7 ಕೋ.ರೂ.)
5) ರುತುರಾಜ್ ಗಾಯಕ್ವಾಡ್ (0.2 ಕೋ.ರೂ.)
6) ಶಾರ್ದೂಲ್ ಠಾಕೂರ್ (2.6 ಕೋ.ರೂ.)
7) ಸ್ಯಾಮ್ ಕರ್ರನ್ (5.5 ಕೋ.ರೂ.)
8) ನಾರಾಯಣ್ ಜಗದೀಶನ್ (0.2 ಕೋ.ರೂ.)

Story first published: Saturday, January 9, 2021, 16:29 [IST]
Other articles published on Jan 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X