ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021, CSK vs MI: ಚೆನ್ನೈನ ಈ ಬಲಿಷ್ಠ ಆಡುವ ಬಳಗ ಕಣಕ್ಕಿಳಿದರೆ ಮುಂಬೈಗೆ ಸೋಲು ಖಚಿತ!

IPL 2021: Chennai Super Kings strongest playing XI prediction for the match against MI

ಇದೇ ವರ್ಷದ ಏಪ್ರಿಲ್ 9ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ನಡೆದ ಪಂದ್ಯದ ಮೂಲಕ ಆರಂಭವಾಗಿದ್ದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ 29 ಪಂದ್ಯಗಳು ಮುಗಿಯುವವರೆಗೂ ಯಾವುದೇ ಅಡಚಣೆಯಿಲ್ಲದೆ ಸರಾಗವಾಗಿ ನಡೆದಿತ್ತು. ಹೌದು ಭಾರತದಲ್ಲಿ ಆ ಸಮಯದಲ್ಲಿ ಕೊರೋನಾವೈರಸ್ ಸೋಂಕಿತರ ಸಂಖ್ಯೆ ದೊಡ್ಡ ಮಟ್ಟದಲ್ಲಿತ್ತು, ಹಾಗಿದ್ದರೂ ಭಾರತ ನೆಲದಲ್ಲಿ ಆರಂಭವಾಗಿದ್ದ ಟೂರ್ನಿ ಯಾವುದೇ ತೊಂದರೆಯಿಲ್ಲದೆ ನಡೆದಿತ್ತು. ಹೀಗೆ ನಡೆಯುತ್ತಿದ್ದ ಟೂರ್ನಿಯ ವಿವಿಧ ತಂಡಗಳ ಕೆಲ ಆಟಗಾರರು ಮತ್ತು ಸಿಬ್ಬಂದಿ ವರ್ಗದವರಲ್ಲಿ ಸೋಂಕು ಕಾಣಿಸಿಕೊಂಡ ಕಾರಣ ಎಚ್ಚೆತ್ತ ಬಿಸಿಸಿಐ ತಾತ್ಕಾಲಿಕವಾಗಿ ಟೂರ್ನಿಯನ್ನು ಸ್ಥಗಿತಗೊಳಿಸಿ ಮುಂದೂಡಿತು.

ಐಪಿಎಲ್: ಕ್ವಾರಂಟೈನ್ ಮುಗಿಸಿ ಮುಂಬೈ ತಂಡ ಸೇರಿಕೊಂಡ ರೋಹಿತ್ ಶರ್ಮಾಐಪಿಎಲ್: ಕ್ವಾರಂಟೈನ್ ಮುಗಿಸಿ ಮುಂಬೈ ತಂಡ ಸೇರಿಕೊಂಡ ರೋಹಿತ್ ಶರ್ಮಾ

ಹೀಗೆ ಭಾರತದಲ್ಲಿ ಸ್ಥಗಿತಗೊಂಡಿದ್ದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಇದೇ ಸೆಪ್ಟೆಂಬರ್ 19ರಿಂದ ಯುಎಇಯಲ್ಲಿ ಮುಂದುವರೆಸಲಾಗುತ್ತಿದ್ದು ಮೊದಲನೇ ಪಂದ್ಯದಲ್ಲಿಯೇ ಬಲಿಷ್ಠ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಸೆಣಸಾಟ ನಡೆಸಲಿವೆ. ಹೌದು, ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೊದಲನೇ ಭಾಗದಲ್ಲಿ ಕೇವಲ 29 ಪಂದ್ಯಗಳು ಮಾತ್ರ ನಡೆದಿದ್ದು ಇದೀಗ ಭಾನುವಾರದಿಂದ ಆರಂಭವಾಗುತ್ತಿರುವ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯ ದ್ವಿತೀಯ ಭಾಗದಲ್ಲಿ 31 ಪಂದ್ಯಗಳು ನಡೆಯಲಿವೆ.

ಟೀಮ್ ಇಂಡಿಯಾ ಮೆಂಟರ್ ಆಗಿ ಎಂಎಸ್ ಧೋನಿ ಆಯ್ಕೆ ಸರಿಯೇ?; ತುಟಿ ಬಿಚ್ಚಿದ ವಿರೇಂದ್ರ ಸೆಹ್ವಾಗ್ಟೀಮ್ ಇಂಡಿಯಾ ಮೆಂಟರ್ ಆಗಿ ಎಂಎಸ್ ಧೋನಿ ಆಯ್ಕೆ ಸರಿಯೇ?; ತುಟಿ ಬಿಚ್ಚಿದ ವಿರೇಂದ್ರ ಸೆಹ್ವಾಗ್

ಹೀಗೆ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಉಳಿದಿರುವ 31 ಪಂದ್ಯಗಳು ಯುಎಇನಲ್ಲಿ ಮುಂದುವರಿಯಲಿದ್ದು ಕ್ರಿಕೆಟ್ ಅಭಿಮಾನಿಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದ ಕುತೂಹಲ ಮತ್ತು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಇನ್ನು ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ದ್ವಿತೀಯಾರ್ಧದ ಮೊದಲನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡಲಿದ್ದು, ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಈ ಕೆಳಕಂಡ ಬಲಿಷ್ಠ ಆಡುವ ಬಳಗ ಕಣಕ್ಕಿಳಿದರೆ ಮುಂಬೈ ತಂಡ ಗೆಲ್ಲುವುದು ಸುಲಭದ ಮಾತಲ್ಲ.

ಓಪನಿಂಗ್ ಮತ್ತು ಮಧ್ಯಮ ಕ್ರಮಾಂಕ

ಓಪನಿಂಗ್ ಮತ್ತು ಮಧ್ಯಮ ಕ್ರಮಾಂಕ

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬಲಿಷ್ಠ ಓಪನರ್ ಫಾಫ್ ಡು ಪ್ಲೆಸಿಸ್ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಮುಂಬೈ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಗಳು ಕಡಿಮೆಯಿದ್ದು, ಡು ಪ್ಲೆಸಿಸ್ ಬದಲಾಗಿ ರಾಬಿನ್ ಉತ್ತಪ್ಪ ಓಪನರ್ ಆಗಿ ಕಣಕ್ಕಿಳಿಯುವ ಸಾಧ್ಯತೆಗಳು ಹೆಚ್ಚಿವೆ. 189 ಐಪಿಎಲ್ ಪಂದ್ಯಗಳನ್ನಾಡಿರುವ ಅನುಭವವಿರುವ ರಾಬಿನ್ ಉತ್ತಪ್ಪ ಜೊತೆಗೆ ರುತುರಾಜ್ ಗಾಯಕ್ವಾಡ್ ಆರಂಭಿಕ ಆಟಗಾರನಾಗಿ ಕಣಕ್ಕಿಳಿದರೆ ಚೆನ್ನೈ ಉತ್ತಮ ಆರಂಭವನ್ನು ಪಡೆದುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಸುರೇಶ್ ರೈನಾ, ಅಂಬಟಿ ರಾಯುಡು ಮತ್ತು ಎಂಎಸ್ ಧೋನಿ ಇರಲಿದ್ದು ಈ ಆಟಗಾರರ ಪ್ರದರ್ಶನದ ಬಗ್ಗೆ ಹೆಚ್ಚೇನೂ ಹೇಳುವ ಅವಶ್ಯಕತೆಯೇ ಇಲ್ಲ. ಹೀಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಮತ್ತು ಮಧ್ಯಮ ಕ್ರಮಾಂಕ ಈ ದಾಂಡಿಗರಿಂದ ಬಲಿಷ್ಠವಾಗಿರಲಿದೆ.

ಆಲ್‌ರೌಂಡರ್ಸ್

ಆಲ್‌ರೌಂಡರ್ಸ್

ಮುಂಬೈ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಲ್‌ರೌಂಡರ್ ಆಟಗಾರರಾಗಿ ಮೊಯಿನ್ ಅಲಿ, ರವೀಂದ್ರ ಜಡೇಜಾ ಮತ್ತು ಡ್ವೇನ್ ಬ್ರಾವೊ ಈ ಮೂವರೂ ಕಣಕ್ಕಿಳಿಯುವ ಸಾಧ್ಯತೆಗಳು ಹೆಚ್ಚಿವೆ. ಹೀಗೆ ಮೂವರು ಆಲ್‌ರೌಂಡರ್ ಆಟಗಾರರು ಕಣಕ್ಕಿಳಿಯುವುದರಿಂದ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗಗಳು ಬಲಿಷ್ಠವಾಗಲಿದ್ದು, ಮುಂಬೈನಂತಹ ಬಲಿಷ್ಠ ತಂಡವನ್ನು ಕಟ್ಟಿಹಾಕಲು ಎಂಎಸ್ ಧೋನಿಗೆ ಹೆಚ್ಚು ಬೌಲರ್ ಅವಕಾಶಗಳೂ ಕೂಡ ಸಿಕ್ಕಿದಂತಾಗಲಿದೆ.

ಬೌಲಿಂಗ್ ವಿಭಾಗ

ಬೌಲಿಂಗ್ ವಿಭಾಗ

ಇನ್ನು ಚೆನ್ನೈ ಬೌಲಿಂಗ್ ವಿಭಾಗ ಸಂಪೂರ್ಣವಾಗಿ ವೇಗದ ಬೌಲರ್‌ಗಳಿಂದ ಕೂಡಿರುವ ಸಾಧ್ಯತೆಗಳು ಹೆಚ್ಚಿರಲಿದೆ. ಆಲ್‌ರೌಂಡರ್ ಆಟಗಾರರಲ್ಲೇ ಇಬ್ಬರು ಸ್ಪಿನ್ ಬೌಲರ್‌ಗಳು ಇರುವ ಕಾರಣ ಅಂತಿಮ 3 ಸ್ಥಾನಗಳಿಗೆ ವೇಗಿಗಳನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಈ ಸ್ಥಾನವನ್ನು ಶಾರ್ದೂಲ್ ಠಾಕೂರ್, ದೀಪಕ್ ಚಹರ್ ಮತ್ತು ಜೋಶ್ ಹೇಜಲ್‌ವುಡ್ ತುಂಬುವ ಸಾಧ್ಯತೆಗಳು ಹೆಚ್ಚಿದ್ದು ಬೌಲಿಂಗ್ ವಿಭಾಗ ಕೂಡ ಬಲಿಷ್ಠವಾಗಿರಲಿದ್ದು ಮುಂಬೈ ತಂಡ ಒತ್ತಡಕ್ಕೆ ಸಿಲುಕಲಿದೆ.

Story first published: Sunday, September 19, 2021, 23:58 [IST]
Other articles published on Sep 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X