ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧವನ್-ಪೃಥ್ವಿ ಸ್ಫೋಟಕ ಅರ್ಧಶತಕ, ಚೆನ್ನೈ ವಿರುದ್ಧ ಡೆಲ್ಲಿಗೆ ಭರ್ಜರಿ ಜಯ

IPL 2021: Chennai Super Kings vs Delhi Capitals, 2nd Match, report

ಮುಂಬೈ: ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಶನಿವಾರ (ಏಪ್ರಿಲ್ 10) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 2ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್ ಸುಲಭ ಜಯ ಗಳಿಸಿದೆ. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಶಿಖರ್ ಧವನ್ ಮತ್ತು ಪೃಥ್ವಿ ಶಾ ಸ್ಫೋಟಕ ಅರ್ಧ ಶತಕದೊಂದಿಗೆ ಡೆಲ್ಲಿ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ.

ಅಣ್ಣ ಟಾಮ್‌ನ ಓವರ್‌ನಲ್ಲಿ ತಮ್ಮ ಸ್ಯಾಮ್ ಕರನ್ ಸ್ಫೋಟಕ ಬ್ಯಾಟಿಂಗ್!ಅಣ್ಣ ಟಾಮ್‌ನ ಓವರ್‌ನಲ್ಲಿ ತಮ್ಮ ಸ್ಯಾಮ್ ಕರನ್ ಸ್ಫೋಟಕ ಬ್ಯಾಟಿಂಗ್!

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈ ಸೂಪರ್ ಕಿಂಗ್ಸ್, ಮೊಯೀನ್ ಅಲಿ 36, ಸುರೇಶ್ ರೈನಾ 54 (36), ಅಂಬಾಟಿ ರಾಯುಡು 23, ರವೀಂದ್ರ ಜಡೇಜಾ ಅಜೇಯ 26, ಸ್ಯಾಮ್ ಕರನ್ 34 (15) ರನ್‌ನೊಂದಿಗೆ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 188 ರನ್ ಗಳಿಸಿತು.

ಐಪಿಎಲ್ 2021: ಚೆನ್ನೈ vs ಡೆಲ್ಲಿ, ಸ್ಕೋರ್‌ಕಾರ್ಡ್

1
50810

ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್‌ನಿಂದ ಭರ್ಜರಿ ಆರಂಭ ಲಭಿಸಿತು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಶಿಖರ್ ಧವನ್ 85 (54), ಪೃಥ್ವಿ ಶಾ 72 (38), ರಿಷಭ್ ಪಂತ್ 15, ಮಾರ್ಕಸ್ ಸ್ಟೋಯ್ನಿಸ್ 14 ರನ್‌ನೊಂದಿಗೆ 18.4 ಓವರ್‌ಗೆ ವಿಕೆಟ್ 3 ನಷ್ಟದಲ್ಲಿ 190 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಅಪರೂಪದ ದಾಖಲೆ ಬರೆದ ಪಾಕ್ ಬ್ಯಾಟ್ಸ್‌ಮನ್‌ ಮೊಹಮ್ಮದ್ ಹಫೀಜ್ಅಪರೂಪದ ದಾಖಲೆ ಬರೆದ ಪಾಕ್ ಬ್ಯಾಟ್ಸ್‌ಮನ್‌ ಮೊಹಮ್ಮದ್ ಹಫೀಜ್

ಚೆನ್ನೈ ಸೂಪರ್ ಕಿಂಗ್ಸ್‌ ಇನ್ನಿಂಗ್ಸ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಕ್ರಿಸ್ ವೋಕ್ಸ್ 2, ಆವೇಶ್ ಖಾನ್ 2, ರವಿಚಂದ್ರನ್ ಅಶ್ವಿನ್ 1, ಟಾಮ್ ಕರನ್ 1 ವಿಕೆಟ್ ಪಡೆದರೆ, ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್‌ನಲ್ಲಿ ಚೆನ್ನೈಯ ಶಾರ್ದೂಲ್ ಠಾಕೂರ್ 1, ಡ್ವೇನ್ ಬ್ರಾವೋ 1 ವಿಕೆಟ್‌ನಿಂದ ಗಮನ ಸೆಳೆದರು.

Story first published: Saturday, April 10, 2021, 23:29 [IST]
Other articles published on Apr 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X