ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡು ಪ್ಲೆಸಿಸ್, ಗಾಯಕ್ವಾಡ್ ಅದ್ಭುತ ಜೊತೆಯಾಟ, ಚೆನ್ನೈಗೆ ಭರ್ಜರಿ ಜಯ

IPL 2021: Chennai Super Kings vs Sunrisers Hyderabad, 23rd Match, Playing XI, Report

ನವದೆಹಲಿ: ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಬುಧವಾರ (ಏಪ್ರಿಲ್ 28) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 23ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 7 ವಿಕೆಟ್ ಭರ್ಜರಿ ಜಯ ಗಳಿಸಿದೆ. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಋತುರಾಜ್ ಗಾಯಕ್ವಾಡ್ ಮತ್ತು ಫಾಫ್ ಡು ಪ್ಲೆಸಿಸ್ ಅದ್ಭುತ ಜೊತೆಯಾಟದಿಂದ ಚೆನ್ನೈ ಸತತ 5ನೇ ಜಯ ದಾಖಲಿಸಿದೆ.

T20I Rankings: ಟಾಪ್ 10ನಲ್ಲಿ ಇಬ್ಬರು ಭಾರತೀಯರಿಗೆ ಸ್ಥಾನT20I Rankings: ಟಾಪ್ 10ನಲ್ಲಿ ಇಬ್ಬರು ಭಾರತೀಯರಿಗೆ ಸ್ಥಾನ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಸನ್ ರೈಸರ್ಸ್ ಹೈದರಾಬಾದ್, ವಾರ್ನರ್ 57 (55), ಜಾನಿ ಬೇರ್ಸ್ಟೋವ್ 7, ಮನೀಶ್ ಪಾಂಡೆ 61 (46), ಕೇನ್ ವಿಲಿಯಮ್ಸನ್ 26, ಕೇದಾರ್ ಜಾಧವ್ 12 ರನ್‌ನೊಂದಿಗೆ 20 ಓವರ್‌ಗೆ 3 ವಿಕೆಟ್ ನಷ್ಟದಲ್ಲಿ 171 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್, ಋತುರಾಜ್ ಗಾಯಕ್ವಾಡ್ 75 (44), ಫಾಫ್ ಡು ಪ್ಲೆಸಿಸ್ 56 (38), ಮೊಯೀನ್ ಅಲಿ 15, ರವೀಂದ್ರ ಜಡೇಜಾ 7, ಸುರೇಶ್ ರೈನಾ 17 ರನ್‌ ಸೇರ್ಪಡೆಯೊಂದಿಗೆ 18.3 ಓವರ್‌ಗೆ 3 ವಿಕೆಟ್ ಕಳೆದು 173 ರನ್ ಗಳಿಸಿತು.

ವಿರಾಟ್ ಅಲ್ಲ, ಎಬಿಡಿ ಅಲ್ಲ ಸಿರಾಜ್ ಅದ್ಭುತ ಪ್ರದರ್ಶನದ ಹಿಂದಿನ ಸ್ಫೂರ್ತಿ ಈ ಆಟಗಾರರುವಿರಾಟ್ ಅಲ್ಲ, ಎಬಿಡಿ ಅಲ್ಲ ಸಿರಾಜ್ ಅದ್ಭುತ ಪ್ರದರ್ಶನದ ಹಿಂದಿನ ಸ್ಫೂರ್ತಿ ಈ ಆಟಗಾರರು

ಸನ್ ರೈಸರ್ಸ್ ಹೈದರಾಬಾದ್ ಇನ್ನಿಂಗ್ಸ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ನ ಸ್ಯಾಮ್ ಕರನ್ 1, ಲುಂಗಿ ಸಾನಿ ಎನ್‌ಗಿಡಿ 2 ವಿಕೆಟ್‌ ಪಡೆದರೆ, ಚೆನ್ನೈ ಇನ್ನಿಂಗ್ಸ್‌ನಲ್ಲಿ ಹೈದರಾಬಾದ್‌ನ ರಶೀದ್ ಖಾನ್ 3 ವಿಕೆಟ್‌ನಿಂದ ಗಮನ ಸೆಳೆದರು.

Story first published: Wednesday, April 28, 2021, 23:16 [IST]
Other articles published on Apr 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X