ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಉಳಿದ ಪಂದ್ಯಗಳಿಂದ ಹೊರಗುಳಿಯುವ ನಿರ್ಧಾರ ತೆಗೆದುಕೊಂಡ ಕ್ರಿಸ್ ಗೇಲ್

IPL 2021: Chris Gayle withdrawn from IPL 2021 citing bubble fatigue
ಕಷ್ಟದಲ್ಲಿರೋ ರಾಹುಲ್ ತಂಡವನ್ನು ಗೇಲ್ ಅರ್ಧದಲ್ಲೇ ಕೈಬಿಟ್ಟಿದ್ದು ಯಾಕೆ? | Oneindia Kannada

ಟಿ20 ಕ್ರಿಕೆಟ್‌ನ ದಿಗ್ಗಜ ಆಟಗಾರ ಕ್ರಿಸ್ ಗೇಲ್ ಈ ಬಾರಿಯ ಐಪಿಎಲ್‌ನ ಉಳಿದ ಪಂದ್ಯಗಳಿಂದ ಹೊರಗುಳಿಯುವ ನಿರ್ಧಾರ ಪ್ರಕಟಿಸಿ ಅಚ್ಚರಿ ಮೂಡಿಸಿದ್ದಾರೆ. ಬಯೋಬಬಲ್‌ನ ಬಳಲಿಕೆಯಿಂದ ಈ ನಿರ್ಧಾರವನ್ನು ಮಾಡಿರುವುದಾಗಿ ಗೇಲ್ ತಿಳಿಸಿದ್ದಾರೆ. ಹೀಗಾಗಿ ಪಂಜಾಬ್ ಕಿಂಗ್ಸ್ ತಂಡದ ಪರವಾಗಿ ಈ ದಿಗ್ಗಜ ಆಟಗಾರ ಈ ಆವೃತ್ತಿಯ ಮುಂದಿನ ಪಂದ್ಯಗಳಲ್ಲಿ ಕಣಕ್ಕಿಳಿಯುವುದಿಲ್ಲ.

ಈ ಬಾರಿಯ ಐಪಿಎಲ್ ಆವೃತ್ತಿಯ ಯುಎಇ ಚರಣದಲ್ಲಿ ಕ್ರಿಸ್ ಗೇಲ್ ಪಂಜಾಬ್ ತಂಡದ ಪರವಾಗಿ ಎರಡು ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿದಿದ್ದರು. ಈಗ ಮುಂಬರುವ ಟಿ20 ವಿಶ್ವಕಪ್‌ನ ದೃಷ್ಟಿಯಿಂದ ಹೊಸತನದೊಂದಿಗೆ ಮರಳುವ ನಿರ್ಧಾರವನ್ನು ಮಾಡಿದ್ದಾರೆ. ಕ್ರಿಸ್ ಗೇಲ್ ಅವರ ಈ ನಿರ್ಧಾರಕ್ಕೆ ಪಂಜಾಬ್ ಕಿಂಗ್ಸ್ ಪ್ರಾಂಚೈಸಿ ಕೂಡ ಒಪ್ಪಿಗೆ ಸೂಚಿಸಿದೆ.

ಟಿ20 ವಿಶ್ವಕಪ್ ಬಿಡಿ, ನಿಮ್ಮ ಐಪಿಎಲ್ ತಂಡಕ್ಕೆ ಮೊದಲು ಆಸರೆಯಾಗಿ; ಆಟಗಾರರಿಗೆ ಲಾರಾ ಬುದ್ಧಿಮಾತುಟಿ20 ವಿಶ್ವಕಪ್ ಬಿಡಿ, ನಿಮ್ಮ ಐಪಿಎಲ್ ತಂಡಕ್ಕೆ ಮೊದಲು ಆಸರೆಯಾಗಿ; ಆಟಗಾರರಿಗೆ ಲಾರಾ ಬುದ್ಧಿಮಾತು

ಐಪಿಎಲ್ ಆರಂಭಕ್ಕೂ ಮುನ್ನ ಕ್ರಿಸ್ ಗೇಲ್ ಕೆರೀಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭಾಗಿಯಾಗಿದ್ದರು. ಈ ಸಿಪಿಎಲ್‌ನ ಬಯೋಬಬಲ್‌ನಿಂದ ಅವರು ನೇರವಾಗಿ ಐಪಿಎಲ್ ಬಬಲ್‌ಗೆ ಸೇರ್ಪಡೆಗಾಗಿದ್ದರು. ಈಗ ಐಪಿಎಲ್ ಅಂತ್ಯವಾಗುತ್ತಿದ್ದಂತೆಯೇ ಟಿ20 ವಿಶ್ವಕಪ್ ಆರಂಭವಾಗಲಿರುವ ಕಾರಣದಿಂದಾಗಿ ಕೆಲ ಕಾಲ ಬಯೋಬಬಲ್‌ನಿಂದ ಹೊರಗುಳಿದು ಟಿ20 ವಿಶ್ವಕಪ್‌ಗೆ ಸಜ್ಜಾಗಲು ನಿರ್ಧರಿಸಿದ್ದಾರೆ.

ಟಿ20 ವಿಶ್ವಕಪ್‌ನತ್ತ ಚಿತ್ತ

ಟಿ20 ವಿಶ್ವಕಪ್‌ನತ್ತ ಚಿತ್ತ

"ನಾನೀಗ ವೆಸ್ಟ್ ಇಂಡೀಸ್ ತಂಡಕ್ಕೆ ಸಹಾಯಮಾಡಲು ಚಿತ್ತನೆಡುತ್ತಿದ್ದು ಅದಕ್ಕಾಗಿ ಗಮನಹರಿಸಲಿದ್ದೇನೆ. ದುಬೈನಲ್ಲಿ ನಾನು ಈಗ ವಿರಾಮವನ್ನು ಪಡೆಯಲು ಬಯಸಿದ್ದೇನೆ. ನನಗೆ ಇದಕ್ಕಾಗಿ ಸಮಯವನ್ನು ನೀಡಿದ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಗೆ ನಾನು ಧನ್ಯವಾದವನ್ನು ಸಲ್ಲಿಸುತ್ತೇನೆ. ತಂಡದ ಪರವಾಗಿ ನನ್ನ ಹಾರೈಕೆ ಹಾಗೂ ಭರವಸೆಯಿರುತ್ತದೆ. ಮುಂಬರುವ ಪಂದ್ಯಗಳಿಗೆ ಆಲ್‌ ದಿ ಬೆಸ್ಟ್" ಎಂದು ಕ್ರಿಸ್ ಗೇಲ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗೇಲ್ ಮನವಿಗೆ ಸಮ್ಮತಿ ಸೂಚಿಸಿದ ಪಂಜಾಬ್ ಫ್ರಾಂಚೈಸಿ

ಗೇಲ್ ಮನವಿಗೆ ಸಮ್ಮತಿ ಸೂಚಿಸಿದ ಪಂಜಾಬ್ ಫ್ರಾಂಚೈಸಿ

ಇನ್ನು ಕ್ರಿಸ್ ಗೇಲ್ ತೆಗೆದುಕೊಂಡಿರುವ ಈ ನಿರ್ಧಾರಕ್ಕೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಸಮ್ಮಿತಿಯನ್ನು ಸೂಚಿಸಿದೆ. ಈ ಬಗ್ಗೆ ಟ್ವೀಟ್ ಮೂಲಕ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಅಧಿಕೃತವಾಗಿ ಹೇಳಿಕೆ ನೀಡಿದೆ. "ಕ್ರಿಸ್ ಗೇಲ್ ಅವರ ನಿರ್ಧಾರವನ್ನು ಪಂಜಾಬ್ ಕಿಂಗ್ಸ್ ಗೌರವಿಸುತ್ತದೆ ಹಾಗೂ ಬೆಂಬಲಿಸುತ್ತದೆ. ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಅವರಿಗೆ ಯಶಸ್ಸು ದೊರೆಯಲಿ ಎಂದು ನಾವು ಹಾರೈಸುತ್ತೇವೆ" ಎಂದು ಪಂಜಾಬ್ ಕಿಂಗ್ಸ್ ಟ್ವೀಟ್‌ನಲ್ಲಿ ತಿಳಿಸಿದೆ.

ಟಿ20 ವಿಶ್ವಕಪ್‌ನಲ್ಲಿದ್ದಾರೆ ಕ್ರಿಸ್ ಗೇಲ್

ಟಿ20 ವಿಶ್ವಕಪ್‌ನಲ್ಲಿದ್ದಾರೆ ಕ್ರಿಸ್ ಗೇಲ್

ಈ ಬಾರಿಯ ಟಿ20 ವಿಶ್ವಕಪ್ ತಂಡದಲ್ಲಿ ಅನುಭವಿ ಕ್ರಿಸ್ ಗೇಲ್ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅತ್ಯಂತ ಸ್ಪೋಟಕ ಆಟಗಾರರ ಪಡೆಯನ್ನು ಹೊಂದಿರುವ ವೆಸ್ಟ್ ಇಂಡೀಸ್ ತಂಡ ಈ ಬಾರಿಯ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡುವ ಗುರಿ ಹೊಂದಿದೆ. ವೆಸ್ಟ್ ಇಂಡೀಸ್ ತಂಡ ಹಾಲಿ ಚಾಂಪಿಯನ್ ತಂಡ ಕೂಡ ಆಗಿದ್ದು ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ಪ್ರಯತ್ನ ನಡೆಸಲಿದೆ. ಆ ನಿಟ್ಟಿನಲ್ಇ ಕ್ರಿಸ್ ಗೇಲ್ ಪಾತ್ರ ಕೂಡ ವಿಂಡೀಸ್ ಪಾಲಿಗೆ ನಿರ್ಣಾಯಕವಾಗಿದೆ. ವೆಸ್ಟ್ ಇಂಡೀಸ್ ತಂಡವನ್ನು ಕಿರಾನ್ ಪೊಲಾರ್ಡ್ ಮುನ್ನಡೆಸಲಿದ್ದಾರೆ.

ವಿಶ್ವಕಪ್‌ನಲ್ಲಿ ಭಾಗಿಯಾಗುವ ವೆಸ್ಟ್ ಇಂಡೀಸ್ ತಂಡ

ವಿಶ್ವಕಪ್‌ನಲ್ಲಿ ಭಾಗಿಯಾಗುವ ವೆಸ್ಟ್ ಇಂಡೀಸ್ ತಂಡ

ಕೀರನ್ ಪೊಲಾರ್ಡ್ (ನಾಯಕ), ನಿಕೋಲಸ್ ಪೂರನ್ (ಉಪ ನಾಯಕ), ಫ್ಯಾಬಿಯನ್ ಅಲೆನ್, ಡ್ವೇನ್ ಬ್ರಾವೊ, ರೋಸ್ಟನ್ ಚೇಸ್, ಆಂಡ್ರೆ ಫ್ಲೆಚರ್, ಕ್ರಿಸ್ ಗೇಲ್, ಶಿಮ್ರಾನ್ ಹೆಟ್ಮೀರ್, ಎವಿನ್ ಲೂಯಿಸ್, ಓಬೇಡ್ ಮೆಕಾಯ್, ಲೆಂಡಲ್ ಸಿಮನ್ಸ್, ರವಿ ರಾಂಪಾಲ್, ಆಂಡ್ರೆ ರಸೆಲ್, ಓಶನ್ ಥಾಮಸ್, ಹೇಡನ್ ವಾಲ್ಷ್ ಜೂನಿಯರ್
ಮೀಸಲು ಆಟಗಾರರು: ಡ್ಯಾರೆನ್ ಬ್ರಾವೊ, ಶೆಲ್ಡನ್ ಕಾಟ್ರೆಲ್, ಜೇಸನ್ ಹೋಲ್ಡರ್, ಅಕೆಲ್ ಹೊಸೈನ್
ವೆಸ್ಟ್ ಇಂಡೀಸ್ ತಂಡದ ವೇಳಾಪಟ್ಟಿ: 24 ಅಕ್ಟೋಬರ್‌ vs ಇಂಗ್ಲೆಂಡ್, 26 ಅಕ್ಟೋಬರ್‌ vs ದಕ್ಷಿಣ ಆಫ್ರಿಕಾ, 29 ಅಕ್ಟೋಬರ್‌ vs ಬಿ2, 5 ನವೆಂಬರ್ vs ಎ1, 6 ನವೆಂಬರ್‌ vs ಆಸ್ಟ್ರೇಲಿಯಾ

Story first published: Friday, October 1, 2021, 11:53 [IST]
Other articles published on Oct 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X