ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಸ್‌ಗೇಲ್‌ರನ್ನು ಪಂಜಾಬ್ ಕಿಂಗ್ಸ್ ಬಳಸಿ ಎಸೆದಿದೆ: ಕೆವಿನ್ ಪೀಟರ್ಸನ್

IPL 2021: Chris Gayle withdrawn from IPL 2021 Kevin pietersen reaction

ಈ ಬಾರಿಯ ಐಪಿಎಲ್ ಮುಕ್ತಾಯಕ್ಕೆ ಇನ್ನೂ ಕೆಲ ದಿನಗಳಿರುವಾಗಲೇ ಪಂಜಾಬ್ ಕಿಂಗ್ಸ್ ತಂಡದ ಅನುಭವಿ, ಟಿ20 ಕ್ರಿಕೆಟ್‌ನ ದಿಗ್ಗಜ ಆಟಗಾರ ಕ್ರಿಸ್ ಗೇಲ್ ಈ ಬಾರಿಯ ಐಪಿಎಲ್‌ನಿಂದ ಹೊರಗುಳಿಯುವ ನಿರ್ಧಾರ ತೆಗೆದುಕೊಂಡಿದ್ದಾರೆ. ಇದ್ದಕ್ಕಿದ್ದಂತೆ ಗೇಲ್ ತೆಗೆದುಕೊಂಡಿರುವ ಈ ನಿರ್ಧಾರ ಐಪಿಎಲ್ ಪ್ರೇಮಿಗಳಿಗೆ ಅಚ್ಚರಿ ಮೂಡಿಸಿದೆ. ಆದರೆ ಮುಂಬರುವ ಟಿ20 ವಿಶ್ವಕಪ್‌ನ ದೃಷ್ಟಿಯಿಂದಾಗಿ ಕೆಲ ಕಾಲ ಬಯೋಬಬಲ್‌ನಿಂದ ಬಿಡುಗಡೆ ಬೇಕೆಂಬುದಾಗಿ ಬಯಸಿರುವುದನ್ನು ಕ್ರಿಸ್ ಗೇಲ್ ಹೇಳಿಕೊಂಡಿದ್ದಾರೆ. ಈ ಬೆಳವಣಿಗೆಉ ನಂತರ ಮಾಜಿ ಕ್ರಿಕೆಟಿಗ ಹಾಲಿ ಕಾಮೆಂಟೇಟರ್ ಕೆವಿನ್ ಪೀಟರ್ಸನ್ ಪ್ರತಿಕ್ರಿಯಿಸಿದ್ದಾರೆ.

ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಹಿರಿಯ ಆಟಗಾರ ಕ್ರಿಸ್ ಗೇಲ್ ಅವರನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಸೂಕ್ತ ರೀತಿಯಲ್ಲಿ ನಡೆಸಿಕೊಂಡಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಪಂಜಾಬ್ ಕಿಂಗ್ಸ್ ಕ್ರಿಸ್‌ಗೇಲ್‌ರನ್ನು ಉತ್ತಮವಾಗಿ ಬಳಸಿಕೊಂಡು ನಂತರ ಅವರನ್ನು ಎಸೆದಿದೆ ಎಂಬ ಭಾವನೆ ಕ್ರಿಸ್ ಗೇಲ್‌ಗೆ ಬಂದಿದೆ. ಹೀಗಾಗಿ ಅವರು ಈ ನಿರ್ಧಾರವನ್ನು ತೆಗೆದುಕೊಂಡಿರಬಹುದು ಎಂದಿದ್ದಾರೆ ಕೆವಿನ್ ಪೀಟರ್ಸನ್.

ಐಪಿಎಲ್‌ನಲ್ಲಿ ಒಂದು ತಂಡದೆದುರು ಹೆಚ್ಚು ಪಂದ್ಯ ಗೆದ್ದಿರುವ ತಂಡಗಳ ಪಟ್ಟಿಐಪಿಎಲ್‌ನಲ್ಲಿ ಒಂದು ತಂಡದೆದುರು ಹೆಚ್ಚು ಪಂದ್ಯ ಗೆದ್ದಿರುವ ತಂಡಗಳ ಪಟ್ಟಿ

ಇನ್ನು ಈ ಸಂದರ್ಭದಲ್ಲಿ ಕೆವಿನ್ ಪೀಟರ್ಸನ್ ಕಳೆದ ತಿಂಗಳು ಕ್ರಿಸ್ ಗೇಲ್ ಅವರ 42ನೇ ಹುಟ್ಟುಹಬ್ಬದ ದಿನ ಆಡುವ ಅವಕಾಶ ನೀಡಿರಲಿಲ್ಲ ಎಂಬುದನ್ನು ಬಿಟ್ಟು ಮಾಡಿದ್ದಾರೆ. ಈ ಬಾರಿಯ ಯುಎಇ ಚರಣದಲ್ಲಿ ಕ್ರಿಸ್ ಗೇಲ್ ಪಂಜಾಬ್ ಕಿಂಗ್ಸ್ ಆಡಿದ ಮೂರು ಪಂದ್ಯಗಳ ಪೈಕಿ ಎರಡಲ್ಲಿ ಮಾತ್ರವೇ ಆಡಿದ್ದರು. ಈ ಸಿಕ್ಕ ಅವಕಾಶವನ್ನು ಕೂಡ ವೆಸ್ಟ್ ಇಂಡೀಸ್‌ನ ಈ ದಿಗ್ಗಜ ಆಟಗಾರ ಉತ್ತಮವಾಗಿ ಬಳಸಿಕೊಂಡಿರಲಿಲ್ಲ. ಒಂದು ಪಂದ್ಯದಲ್ಲಿ 1 ರನ್‌ಗಳಿಸಿದ್ದರೆ ಮತ್ತೊಂದು ಪಂದ್ಯದಲ್ಲಿ 14 ರನ್‌ಗಳಿಸಿದ್ದರು.

ಟಿ20 ವಿಶ್ವಕಪ್ ಬಿಡಿ, ನಿಮ್ಮ ಐಪಿಎಲ್ ತಂಡಕ್ಕೆ ಮೊದಲು ಆಸರೆಯಾಗಿ; ಆಟಗಾರರಿಗೆ ಲಾರಾ ಬುದ್ಧಿಮಾತುಟಿ20 ವಿಶ್ವಕಪ್ ಬಿಡಿ, ನಿಮ್ಮ ಐಪಿಎಲ್ ತಂಡಕ್ಕೆ ಮೊದಲು ಆಸರೆಯಾಗಿ; ಆಟಗಾರರಿಗೆ ಲಾರಾ ಬುದ್ಧಿಮಾತು

"ಕ್ರಿಸ್ ಗೇಲ್‌ಗೆ ಅವರನ್ನು ಸೂಕ್ತ ರೀತಿಯಲ್ಲಿ ನಡೆಸಿಕೊಂಡಿಲ್ಲ. ಅವರಿಗೆ ಈಗ ತಂಡ ತನ್ನನ್ನು ಚೆನ್ನಾಗಿ ಬಳಸಿಕೊಂಡ ನಂತರ ಎಸೆದ ರೀತಿಯ ಅನುಭವವಾಗಿದೆ. ಅವರ ಹುಟ್ಟುಹಬ್ಬದ ದಿನವೇ ಆವರು ಆಡಿರಲಿಲ್ಲ. ಅವರಿಗೆ ಈಗ 42 ವರ್ಷ, ಅವರಿಗೆ ಇಷ್ಟವಿಲ್ಲದಿದ್ದರೆ ಅವರಿಗೆ ಇಷ್ಟವಾಗುವುದನ್ನು ಮಾಡಲು ಬಿಡಿ" ಎಂದಿದ್ದಾರೆ ಕೆವಿನ್ ಪೀಟರ್ಸನ್.

ಐಪಿಎಲ್ ಆರಂಭಕ್ಕೂ ಮುನ್ನ ಕ್ರಿಸ್ ಗೇಲ್ ಕೆರೀಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭಾಗಿಯಾಗಿದ್ದರು. ಈ ಸಿಪಿಎಲ್‌ನ ಬಯೋಬಬಲ್‌ನಿಂದ ಅವರು ನೇರವಾಗಿ ಐಪಿಎಲ್ ಬಬಲ್‌ಗೆ ಸೇರ್ಪಡೆಗಾಗಿದ್ದರು. ಈಗ ಐಪಿಎಲ್ ಅಂತ್ಯವಾಗುತ್ತಿದ್ದಂತೆಯೇ ಟಿ20 ವಿಶ್ವಕಪ್ ಆರಂಭವಾಗಲಿರುವ ಕಾರಣದಿಂದಾಗಿ ಕೆಲ ಕಾಲ ಬಯೋಬಬಲ್‌ನಿಂದ ಹೊರಗುಳಿದು ಟಿ20 ವಿಶ್ವಕಪ್‌ಗೆ ಸಜ್ಜಾಗಲು ನಿರ್ಧರಿಸಿದ್ದಾರೆ.

ಐಪಿಎಲ್ 2021: ಪ್ಲೇಆಫ್ಸ್‌ಗೆ ಪ್ರವೇಶಿಸಿದ ಮೊದಲ ತಂಡ ಚೆನ್ನೈ ಸೂಪರ್ ಕಿಂಗ್ಸ್ಐಪಿಎಲ್ 2021: ಪ್ಲೇಆಫ್ಸ್‌ಗೆ ಪ್ರವೇಶಿಸಿದ ಮೊದಲ ತಂಡ ಚೆನ್ನೈ ಸೂಪರ್ ಕಿಂಗ್ಸ್

"ಕಳೆದ ಕೆಲ ತಿಂಗಳಿನಿಂದ ನಾನು ಕ್ರಿಕೆಟ್ ವೆಸ್ಟ್ ಇಂಡೀಸ್‌ನ ಬಯೋಬಬಲ್‌ನಲ್ಲಿದ್ದೆ. ಸಿಪಿಎಲ್ ಬಯೋಬಬಲ್‌ನ ಬಳಿಕ ಐಪಿಎಲ್ ಬಬಲ್‌ಗೆ ಬಂದಿದ್ದೇನೆ. ಈಗ ನಾನು ಮಾನಸಿಕ ರೀಚಾರ್ಜ್ ಬಯಸಿದ್ದು ನನ್ನನ್ನು ನಾನು ತಾಜಾತನದಿಂದ ಕೂಡಿರುವಂತೆ ಮಾಡಬೇಕಿದೆ" ಎಂಬ ಕ್ರಿಸ್ ಗೇಲ್ ಪ್ರಕಟಣೆಯನ್ನು ಪಂಜಾಬ್ ಕಿಂಗ್ಸ್ ಬಿಡುಗಡೆಗೊಳಿಸಿದೆ.

Story first published: Friday, October 1, 2021, 20:09 [IST]
Other articles published on Oct 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X