ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹರಾಜಿನ ನಂತರ ಸನ್ ರೈಸರ್ಸ್ ಹೈದರಾಬಾದ್ ಪೂರ್ಣ ತಂಡ

IPL 2021: Complete list of Sunrisers Hyderabad Players after Auction

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ಹರಾಜಿಗೂ ಮುನ್ನ ಪ್ರಮುಖ ಆಟಗಾರರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ ಉಳಿಸಿಕೊಂಡಿತ್ತು. ಹೀಗಾಗಿ, ಮಿನಿ ಹರಾಜಿನಲ್ಲಿ ಹೆಚ್ಚಿನ ಬಿಡ್ ಸಲ್ಲಿಸಲು ಹೆಚ್ಚಿನ ಮೊತ್ತವನ್ನು ಹೊಂದಿರದಿದ್ದರೂ ಆಕರ್ಷಕ ಖರೀದಿಯನ್ನು ಸಾಧಿಸಿಕೊಂಡಿದೆ.

ಡೇವಿಡ್ ವಾರ್ನರ್ ನೇತೃತ್ವದ ಹೈದರಾಬಾದ್ ತಂಡಕ್ಕಾಗಿ ತಂಡದ ಮಾರ್ಗದರ್ಶಕ ವಿವಿಎಸ್ ಲಕ್ಷ್ಮಣ್ ಅವರು ಪ್ರಮುಖವಾಗಿ ಮೂವರನ್ನು ಆಯ್ಕೆ ಮಾಡಿಕೊಂಡರು. 10.75 ಕೋಟಿ ರು ಉಳಿಸಿಕೊಂಡಿದ್ದ ಹೈದರಾಬಾದ್ ತಂಡಕ್ಕೆ ಕೇದಾರ್ ಜಾಧವ್, ಜೆ ಸುಚಿತ್ ಹಾಗೂ ಮುಜೀಬ್ ಉರ್ ರಹ್ಮಾನ್ ಸೇರ್ಪಡೆಯಾಗಿದ್ದಾರೆ.

ಐಪಿಎಲ್ 2021: ಹರಾಜಿನ ನಂತರ ಬೆಂಗಳೂರು ತಂಡ ಹೀಗಿದೆಐಪಿಎಲ್ 2021: ಹರಾಜಿನ ನಂತರ ಬೆಂಗಳೂರು ತಂಡ ಹೀಗಿದೆ

ಚೆನ್ನೈ ತಂಡದಿಂದ ಕೈ ಬಿಟ್ಟ ಬಳಿಕ ಹರಾಜಿಗೆ ಲಭ್ಯವಾಗಿದ್ದ ಕೇದಾರ್ ಜಾಧವ್ ಅವರನ್ನು ಹೈದರಾಬಾದ್ ತಂಡಕ್ಕೆ 2 ಕೋಟಿ ರು ನೀಡಿ ಖರೀದಿಸಿತು. ಕರ್ನಾಟಕದ ಸ್ಪಿನ್ನರ್ ಬ್ಯಾಟ್ಸ್ ಮನ್ ಜೆ ಸುಚಿತ್ ಅವರಿಗೆ 30 ಲಕ್ಷ ರು ಹಾಗೂ ಅಫ್ಘಾನಿಸ್ತಾನದ ಕ್ರಿಕೆಟರ್ ಮುಜೀಬ್ ಉರ್ ರಹ್ಮಾನ್ ಅವರಿಗೆ 1.5 ಕೋಟಿ ರು ಕೊಟ್ಟು ಖರೀದಿಸಲಾಗಿದೆ.

2016ರಲ್ಲಿ ಕಪ್ ಎತ್ತಿ ಹಿಡಿದಿದ್ದ ಹೈದರಾಬಾದ್ ತಂಡ ಕಳೆದ ಬಾರಿ ಕ್ವಾಲಿಫೈಯರ್ 2ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲು ಕಂಡಿತ್ತು.

ಸನ್ ರೈಸರ್ಸ್ ಹೈದರಾಬಾದ್ ತಂಡ:
ಉಳಿಸಿಕೊಂಡ ಆಟಗಾರರು:
ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್, ವಿರಾಟ್ ಸಿಂಗ್, ಮನೀಶ್ ಪಾಂಡೆ, ಪ್ರಿಯಂ ಗರ್ಗ್, ವೃದ್ಧಿಮಾನ್ ಸಹಾ, ಜಾನಿ ಬೈರ್ಸ್ಟೊ, ಶ್ರೀವತ್ಸ್ ಗೋಸ್ವಾಮಿ, ವಿಜಯ್ ಶಂಕರ್, ಮಿಚೆಲ್ ಮಾರ್ಷ್, ಮೊಹಮ್ಮದ್ ನಬಿ, ಜಾಸನ್ ಹೋಲ್ಡರ್, ಅಭಿಶೇಕ್ ಶರ್ಮ, ಅಬ್ದುಲ್ ಸಮದ್, ಭುವನೇಶ್ವರ್ ಕುಮಾರ್, ರಶೀದ್ ಖಾನ್, ಟಿ ನಟರಾಜನ್, ಸಂದೀಪ್ ಶರ್ಮ, ಖಲೀಲ್ ಅಹ್ಮದ್, ಸಿದ್ದಾರ್ಥ್ ಕೌಲ್, ಬಸಿಲ್ ಥಂಪಿ, ಶಾಬಾದ್ ನದೀಂ.

ಹರಾಜಿನಲ್ಲಿ ಖರೀದಿ: ಕೇದಾರ್ ಜಾಧವ್ (2 ಕೋಟಿ), ಜೆ ಸುಚಿತ್ (30 ಲಕ್ಷ), ಮುಜೀಬ್ ಉರ್ ರಹ್ಮಾನ್ (1.5 ಕೋಟಿ ರು)

ಒಟ್ಟು ಆಟಗಾರರು: 25, ವಿದೇಶಿ ಆಟಗಾರರು: 8

ಕೈಲಿರುವ ಒಟ್ಟು ಮೊತ್ತ: ₹6,95,00,000.

Story first published: Friday, February 19, 2021, 9:44 [IST]
Other articles published on Feb 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X