ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಪಂಜಾಬ್ ಪರ ಕಳಪೆ ಪ್ರದರ್ಶನದ ನಂತರ ಪೂರನ್‌ಗೆ ಕೈತಪ್ಪುತ್ತಾ ಅವಕಾಶ

IPL 2021: Could Nicholas Pooran get another chance in playing XI

ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ಟಿ20 ಕ್ರಿಕೆಟ್‌ನಲ್ಲಿ ಸಾಕಷ್ಟು ಖ್ಯಾತಿಯನ್ನು ಹೊಂದಿದ ಆಟಗಾರ. ವೆಸ್ಟ್‌ಇಂಡೀಸ್ ತಂಡದ ಪರವಾಗಿ ಅಲ್ಲದೆ ವಿಶ್ವಾದ್ಯಂತ ಹಲವಾರು ಲೀಗ್‌ ಕ್ರಿಕೆಟ್‌ಗಳಲ್ಲಿ ಆಡುತ್ತಿರುವ ಪೂರನ್ ತಮ್ಮ ಅದ್ಭುತವಾದ ಬ್ಯಾಟಿಂಗ್ ಪ್ರದರ್ಶನದಿಂದಾಗಿ ತಂಡಕ್ಕೆ ನೆರವಾಗಿದ್ದಾರೆ. ಕಳೆದ ಬಾರಿಯ ಐಪಿಎಲ್ ಆವೃತ್ತಿಯಲ್ಲಿಯೂ ಪೂರನ್ ಪಂಜಾಬ್ ತಂಡಕ್ಕೆ ಉತ್ತಮ ರನ್ ಕೊಡುಗೆಯನ್ನು ನೀಡಿದ್ದರು.

ಆದರೆ ನಿಕೋಲಸ್ ಪೂರನ್‌ಗೆ ಈ ಬಾರಿಯ ಐಪಿಎಲ್ ಅತ್ಯಂತ ಕಠಿಣ ಸಂದರ್ಭವಾಗಿದೆ. ಪಂಜಾಬ್ ಕಿಂಗ್ಸ್ ಪರವಾಗಿ ಆಡುತ್ತಿರುವ ಪೂರನ್ ಪ್ರತೀ ಪಂದ್ಯದಲ್ಲಿಯೂ ವಿಫಲರಾಗುತ್ತಿದ್ದಾರೆ. ಪೂರನ್ ಅವರ ಈ ಕಳಪೆ ಪ್ರದರ್ಶನದಿಂದಾಗಿ ಕೆಎಲ್ ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ಸಾಕಷ್ಟು ಸಂಕಷ್ಟವನ್ನು ಅನುಭವಿಸುತ್ತಿದೆ.

RCB vs PBKS, Preview: ಬೆಂಗಳೂರು vs ಪಂಜಾಬ್, ಸಂಭಾವ್ಯ ತಂಡ ಹಾಗೂ ಪಂದ್ಯದ ಮಾಹಿತಿRCB vs PBKS, Preview: ಬೆಂಗಳೂರು vs ಪಂಜಾಬ್, ಸಂಭಾವ್ಯ ತಂಡ ಹಾಗೂ ಪಂದ್ಯದ ಮಾಹಿತಿ

ಪಂಜಾಬ್ ಕಿಂಗ್ಸ್ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಪ್ರಬಲ ಶಕ್ತಿಯಾಗಬೇಕಿದ್ದ ನಿಕೋಲಸ್ ಪೂರನ್ ಈಗ ಹೊರೆಯಾಗುತ್ತಿದ್ದಾರೆ. ರನ್‌ಗಳಿಸಲು ನಿರಂತರವಾಗಿ ವಿಫಲರಾಗುತ್ತಿರುವುದರಿಂದಾಗಿ ಇತರ ಅರ್ಹ ಆಟಗಾರರಿಗೂ ಅವಕಾಶ ದೊರೆಯದಂತಾಗಿದೆ. ಹೀಗಾಗಿ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಪೂರನ್ ಬೆಂಚ್‌ಕಾದರೆ ಅಚ್ಚರಿಯಿಲ್ಲ.

ಪಂಜಾಬ್ ಕಿಂಗ್ಸ್ ಆಡಿದ ಆರು ಪಂದ್ಯಗಳ ಪೂಕಿ ಪೂರನ್ 5 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ನಡೆಸುವ ಅವಕಾಶ ಪಡೆದುಕೊಂಡಿದ್ದಾರೆ. ಆದರೆ ಅವರು ಗಳಿಸಿದ ಒಟ್ಟು ರನ್ ಕೇವಲ 28. ಇದರಲ್ಲಿ ಮೂರು ಪಂದ್ಯಗಳಲ್ಲಿ ಪೂರನ್ ಶೂನ್ಯ ಸುತ್ತಿದ್ದಾರೆ. ಒಂದು ಪಂದ್ಯದಲ್ಲಿ 9 ರನ್‌ಗಳಿಸಿದರೆ ಕೊಲ್ಕತ್ತಾ ವಿರುದ್ಧದ ಪಂದ್ಯದಲ್ಲಿ 19 ರನ್‌ಗಳಿಸಿದ್ದಾರೆ. ಹೀಗಾಗಿ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ನಿಕೋಲಸ್ ಪೂರನ್ ಅವರನ್ನು ಆಡುವ ಬಳಗದಿಂದ ಕೈಬಿಟ್ಟು ಡೇವಿಡ್ ಮಲನ್‌ಗೆ ಅವಕಾಶ ನೀಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

Story first published: Friday, April 30, 2021, 14:25 [IST]
Other articles published on Apr 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X