ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021 ಫೈನಲ್: ಟೂರ್ನಿಯ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಋತುರಾಜ್ ಗಾಯಕ್ವಾಡ್

IPL 2021: CSK cricketer Ruturaj Gaikwad becomes the youngest Orange Cup winner in IPL history

ಐಪಿಎಲ್‌ನ ಫೈನಲ್ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ಮಧ್ಯೆ ನಡೆಯುತ್ತಿದೆ. ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟಾಸ್ ಸೋತಿದ್ದು ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಪಡೆದಿದೆ. ಈ ಸಂದರ್ಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಯುವ ಆಟಗಾರ ಋತುರಾಜ್ ಗಾಯಕ್ವಾಡ್ ವಿಶೇಷ ಸಾಧನೆಯೊಂದನ್ನು ಮಾಡಿದ್ದು ಹೊಸ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿ ಅಮೋಘ ಫಾರ್ಮ್ ಪ್ರದರ್ಶಿಸಿರುವ ಯುವ ಆಟಗಾರ ಋತುರಾಜ್ ಗಾಯಕ್ವಾಡ್ ಐಪಿಎಲ್ ಇತಿಹಾಸದಲ್ಲಿ ಆರೆಂಜ್ ಕ್ಯಾಪ್ ಧರಿಸಿದ ಅತ್ಯಂತ ಕಿರಿಯ ಕ್ರಿಕೆಟಿಗ ಎನಿಸಿದ್ದಾರೆ.ಕೆಕೆಆರ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಋತುರಾಜ್ ಗಾಯಕ್ವಾಡ್ ಈ ಸಾಧನೆ ಮಾಡಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಳ್ಳಲು ಫೈನಲ್ ಪಂದ್ಯದಲ್ಲಿ ಋತುರಾಜ್ ಗಾಯಕ್ವಾಡ್ 24 ರನ್‌ಗಳನ್ನು ಗಳಿಸಬೇಕಾಗುತ್ತು. ಇದನ್ನು ಮೀರಿನಿಂತ ಋತುರಾಜ್ ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ ಬಳಿಯಿದ್ದ ಆರೆಂಜ್ ಕ್ಯಾಪವನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.

ಐಪಿಎಲ್ 2021ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಇಯಾನ್ ಮಾರ್ಗನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿತ್ತು. ಹೀಗಾಗಿ ಆರಂಭಿನಾಗಿ ಋರುರಾಜ್ ಗಾಯಕ್ವಾಡ್ ಫಾಫ್ ಡು ಪ್ಲೆಸಿಸ್ ಜೊತೆಗೆ ಕಣಕ್ಕಿಳಿದರು. ಈ ಪಂದ್ಯದಲ್ಲಿ ಮತ್ತೊಮ್ಮೆ ಅದ್ಭುತವಾದ ಆರಂಭವನ್ನು ಸಿಎಸ್‌ಕೆ ಪರವಾಗಿ ನೀಡಿದ ಈ ಜೋಡಿ ಮೊದಲ ವಿಕೆಟ್‌ಗೆ 61 ರನ್‌ಗಳ ಕೊಡುಗೆಯನ್ನು ನೀಡಿದರು. ನಂತರ 27 ಎಸೆತಗಳಲ್ಲಿ 32 ರನ್‌ಗಳಿಸಿದ ಋತುರಾಜ್ ಗಾಯಕ್ವಾಡ್ ಸುನಿಲ್ ನರೈನ್‌ಗೆ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿದ್ದಾರೆ.

T20 World Cup: ಭಾರತದ ಅಪಾಯಕಾರಿ ಆಟಗಾರನ ಹೆಸರಿಸಿದ ಹೌರಿಟ್ಜ್T20 World Cup: ಭಾರತದ ಅಪಾಯಕಾರಿ ಆಟಗಾರನ ಹೆಸರಿಸಿದ ಹೌರಿಟ್ಜ್

ಕುತೂಹಲಕಾರಿ ಸಂಗತಿಯೆಂದರೆ ಐಪಿಎಲ್ ಇತಿಹಾಸದಲ್ಲಿ ಈವರೆಗೆ ಚಾಂಪಿಯನ್ ಎನಿಸಿದ ತಂಡದ ಆಟಗಾರ ಆರೆಂಜ್ ಕ್ಯಾಪ್ ಪಡೆದುಕೊಂಡ ದೃಷ್ಟಾಂತ ಕೇವಲ ಒಂದು ಬಾರಿ ಮಾತ್ರವೇ ನಡೆದಿದೆ. 2014ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಚಾಂಪಿಯನ್ ಪಟ್ಟಕ್ಕೇರಿದ್ದಾಗ ಅದೇ ತಂಡದಲ್ಲಿದ್ದ ರಾಬಿನ್ ಉತ್ತಪ್ಪ ಆರೆಂಜ್ ಕ್ಯಾಪ್ ಧರಿಸಿದ್ದರು.

ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರನಿಗೆ ಆರೆಂಜ್ ಕ್ಯಾಪ್ ನೀಡಲಾಗುತ್ತದೆ. ಟೂರ್ನಿಯುದ್ದಕ್ಕೂ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಫೀಲ್ಡಿಂಗ್ ವೇಳೆ ಆರೆಂಜ್ ಕ್ಯಾಪ್ ಧರಿಸಿದ್ದರೆ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಪರ್ಪಲ್ ಕ್ಯಾಪ್ ಧರಿಸುತ್ತಾರೆ.

ಐಪಿಎಲ್‌ನ ಚೊಚ್ಚಲ ಆವೃತ್ತಿಯಲ್ಲಿ ಆಸ್ಟ್ರೇಲಿಯಾದ ಆಟಗಾರ ಶಾನ್ ಮಾರ್ಶ್ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದರು. ಅದಾದ ಬಳಿಕ ವಿಶ್ವದ ಅನೇಕ ಪ್ರಮುಖ ಕ್ರಿಕೆಟ್ ತಾರೆಗಳು ಆರೆಂಜ್ ಕ್ಯಾಪ್ ತಮ್ಮದಾಸಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್, ಮ್ಯಾಥ್ಯೂ ಹೇಡನ್, ವಿರಾಟ್ ಕೊಹ್ಲಿ, ಡೇವಿಡ್ ವಾರ್ನರ್, ಕ್ರಿಸ್ ಗೇಲ್, ಕೇನ್ ವಿಲಿಯಮ್ಸನ್ ಸೇರಿದಂತೆ ಇನ್ನೂ ಕೆಲ ಆಟಗಾರರು ಆರೆಂಜ್ ಕ್ಯಾಪ್ ಧರಿಸಿದ್ದಾರೆ.

2020ರ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದ ಸಿಎಸ್‌ಕೆ ಅಂತಿಮ ಮೂರು ಪಂದ್ಯಗಳಲ್ಲಿ ಅದ್ಭುತ ಒ್ರದರ್ಶನ ನೀಡಿದ್ದ ಋತುರಾಜ್ ಗಾಯಕ್ವಾಡ್ ತಮಡದ ಏಕಮಾತ್ರ ಭರವಸೆಯಂತೆ ಭಾಸವಾಗಿದ್ದರು. ಗಾಯಜ್ವಾಡ್ ಈ ಪ್ರದರ್ಶನವನ್ನು 2021ರ ಐಪಿಎಲ್‌ನ ಆರಂಭದಿಮದಲೇ ಮುಂದುವರಿಸಿದ್ದರು. ಅನುಭವಿ ಫಾಪ್ ಡು ಪ್ಲೆಸಿಸ್ ಜೊತೆಗೆ ಆರಂಭಿಕನಾಗಿ ಕಣಕ್ಕಿಳಿದ ಋತುರಾಜ್ ಅಗ್ರ ಕ್ರಮಾಂಕದಲ್ಲಿ ಅದ್ಭುತ ಇನ್ನಿಂಗ್ಸ್ ಆಡಿದರು.

ಟಿ20 ವಿಶ್ವಕಪ್‌ನಲ್ಲಿ ಈತನೇ ಟೀಮ್ ಇಂಡಿಯಾಗೆ ಆಧಾರ: ಕನ್ನಡಿಗನ ಬಗ್ಗೆ ಬ್ರೇಟ್ ಲೀಗೆ ಭರವಸೆಟಿ20 ವಿಶ್ವಕಪ್‌ನಲ್ಲಿ ಈತನೇ ಟೀಮ್ ಇಂಡಿಯಾಗೆ ಆಧಾರ: ಕನ್ನಡಿಗನ ಬಗ್ಗೆ ಬ್ರೇಟ್ ಲೀಗೆ ಭರವಸೆ

KKR ತಂಡ ಕಡೆಗೆ 6 ಹೊಡೆದು ಗೆದ್ದು ಬೀಗಿದರು | Oneindia Kannada

ಕಳೆದ ಸೆಪ್ಟೆಂಬರ್ 19ರಿಂದ ಯುಎಇನಲ್ಲಿ ಎರಡನೇ ಚರಣದ ಪಂದ್ಯಗಳು ಆರಂಭವಾದ ಬಳಿಕ ಗಾಯಕ್ವಾಡ್ ನಿರಂತರವಾಗಿ ಉತ್ತಮ ಪ್ರದರ್ಶನ ನೀಡಿಕೊಂಡು ಬಂದಿದ್ದಾರೆ. 88*, 38, 40, 45 ಮತ್ತು 101* ರನ್‌ಗಳಿಸಿದ ಋತುರಾಜ್ ಗಾಯಕ್ವಾಡ್ ನಂತರದ ಎರಡು ಪಂದ್ಯಗಳಲ್ಲಿ 12 ಮತ್ತು 13 ರನ್ ಮಾತ್ರ ರನ್‌ಗಳಿಸಿದ್ದರು. ಆದರೆ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 70 ರನ್‌ಗಳಿಸುವ ಮೂಲಕ ಮತ್ತೆ ಫಾರ್ಮ್‌ಗೆ ಮರಳುವಲ್ಲಿ ಯಶಸ್ವಿಯಾಗಿದ್ದರು.

Story first published: Saturday, October 16, 2021, 11:26 [IST]
Other articles published on Oct 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X