ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಮಾರ್ಚ್ 11ರಿಂದ CSK ಶಿಬಿರ ಆರಂಭ, ಧೋನಿ ಭಾಗಿ

IPL 2021: CSK training camp will start in Chennai from Mar 11; Dhoni will attend

ಮುಂಬರುವ ಐಪಿಎಲ್ ಆವೃತ್ತಿಗೆ ಸಿದ್ಧತೆಯನ್ನು ನಡೆಸಲು ಎಲ್ಲಾ ಆಟಗಾರರು ಹಾಗೂ ಫ್ರಾಂಚೈಸಿಗಳು ಇನ್ನು ಸಿದ್ಧತೆಯನ್ನು ಆರಂಭಿಸಲಿದ್ದಾರೆ. ಈ ಬಾರಿಯ ಐಪಿಎಲ್ ಆರಂಭದ ದಿನಾಂಕ ಇನ್ನಷ್ಟೇ ಘೋಷಣೆಯಾಗಬೇಕಿದ್ದು ಏಪ್ರಿಲ್‌ನಿಂದ ಜೂನ್‌ವರೆಗೆ ಈ ಟೂರ್ನಿ ನಡೆಯುವುದು ಖಚಿತವಾಗಿದೆ. ಈ ಮಹತ್ವದ ಟೂರ್ನಿಗೆ ಚೆನ್ನೈ ಸೂಪರ್ ಕಿಂಗ್ಸ್ ಕೆಲವೇ ದಿನಗಳಲ್ಲಿ ಸಿದ್ಧತೆಯನ್ನು ನಡೆಸಲಿದೆ.

ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯ ಐಪಿಎಲ್‌ನಲ್ಲಿ ಆಡುವ ಹಿನ್ನೆಲೆಯಲ್ಲಿ ಮಾರ್ಚ್ 11ರಿಂದ ತರಬೇತಿ ಶಿಬಿರವನ್ನು ಆರಂಭಿಸಲಿದೆ. ಈ ಶಿಬಿರದಲ್ಲಿ ನಾಯಕ ಎಂಎಸ್ ಧೋನಿ ಕೂಡ ಶಿಬಿರದ ಆರಂಭದ ದಿನದಿಂದಲೂ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.

ಭಾರತ vs ಇಂಗ್ಲೆಂಡ್: ಟಿ20 ಸರಣಿಗೆ ಮತ್ತೆ ವರುಣ್ ಚಕ್ರವರ್ತಿ ಅನುಮಾನ!ಭಾರತ vs ಇಂಗ್ಲೆಂಡ್: ಟಿ20 ಸರಣಿಗೆ ಮತ್ತೆ ವರುಣ್ ಚಕ್ರವರ್ತಿ ಅನುಮಾನ!

ಯಶಸ್ವಿಯಾಗಿ ಆರಂಭವಾಗುವ ನಿರೀಕ್ಷೆ

ಯಶಸ್ವಿಯಾಗಿ ಆರಂಭವಾಗುವ ನಿರೀಕ್ಷೆ

"ನಾವು ಎಲ್ಲಾ ಆಟಗಾರರು ಬ್ಯಾಚ್‌ಗಳ ಪ್ರಕಾರ ಬರಲಿದ್ದಾರೆ ಎಂದು ನಿರೀಕ್ಷಿಸಿದ್ದೇವೆ. ನಾಯಕ ಎಂಎಸ್ ಧೋನಿ ಕೂಡ ಆರಂಭಿಕ ದಿನದಿಂದಲೂ ತಬೇತಿ ಶಿಬಿರದಲ್ಲಿ ಪಾಳ್ಗೊಳ್ಳಲಿದ್ದಾರೆ. ಆಟಗಾರರ ಲಭ್ಯತೆ ಸಂಗತಿಯಾಗುವುದಿಲ್ಲ. ಈ ಶಿಬಿರ ಯಶಸ್ವಿಯಾಗಿ ಆರಂಭವಾಗಲಿದೆ ಎಂದು ನಾವು ವಿಶ್ವಾಸವನ್ನು ಹೊಂದಿದ್ದೇವೆ" ಎಂದು ಚೆನ್ನೈ ತಂಡದ ಉನ್ನತ ಮೂಲಗಳು ಇನ್‌ಸೈಡ್ ಸ್ಪೋರ್ಟ್‌ಗೆ ಮಾಹಿತಿಯನ್ನು ನೀಡಿದೆ.

ಪ್ರೊಟೋಕಾಲ್ ಪಾಲಿಸಲಾಗುತ್ತದೆ

ಪ್ರೊಟೋಕಾಲ್ ಪಾಲಿಸಲಾಗುತ್ತದೆ

"ಇನ್ನು ಈ ತರಬೇತಿ ಶಿಬಿರದಲ್ಲಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಬಯೋ ಬಬಲ್ ಪ್ರೊಟೋಕಾಲ್‌ಗಳನ್ನು ಕಠಿಣವಾಗಿ ಪಾಲಿಸಲಾಗುತ್ತದೆ. ಈ ಹಂತದಲ್ಲಿ ಉಳಿದಂತೆ ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಎಲ್ಲಾ ಆಟಗಾರರು ಕಡ್ಡಾಯ ಕೋವಿಡ್ ಪರೀಕ್ಷೆಗಳಿಗೆ ಒಳಗಾಗಲಿದ್ದಾರೆ" ಎಂದು ಚೆನ್ನೈ ತಂಡದ ಅಧಿಕಾರಿ ಮಾಹಿತಿಯನ್ನು ನೀಡಿದ್ದಾರೆ.

ಕಳೆದ ಆವೃತ್ತಿಯ ಕಹಿ ನೆನಪು

ಕಳೆದ ಆವೃತ್ತಿಯ ಕಹಿ ನೆನಪು

ಕಳೆದ ಬಾರಿಯ ಐಪಿಎಲ್‌ಗೂ ಚೆನ್ನೈನಲ್ಲಿ ತರಬೇತಿ ಮುಗಿಸಿ ಯುಎಇಗೆ ತೆರಳಿದ್ದ ಸಿಎಸ್‌ಕೆ ಆಟಗಾರರು ಕ್ವಾರಂಟೈನ್ ಮುಕ್ತಾಯದ ಹಂತದಲ್ಲಿ ಪರೀಕ್ಷೆಗೆ ಒಳಪಟ್ಟಾಗ ಇಬ್ಬರು ಆಟಗಾರರು ಕೊರೊನಾ ವೈರಸ್‌ಗೆ ತುತ್ತಾಗಿದ್ದರು. ಇದು ಸಿಎಸ್‌ಕೆ, ಬಿಸಿಸಿಐ ಹಾಗೂ ಇತರೆ ಫ್ರಾಂಚೈಸಿಗಳಲ್ಲಿಯೂ ಆತಂಕಕ್ಕೆ ಕಾರಣವಾಗಿತ್ತು. ಹೀಗಾಗಿ ಬಿಸಿಸಿಐ ಹಾಗೂ ಐಪಿಎಲ್ ಪ್ರೊಟೋಕಾಲ್‌ಗಳನ್ನು ಪಾಲಿಸುವಂತೆ ಮಾಡುವುದು ಫ್ರಾಂಚೈಸಿಗಳ ಜವಾಬ್ಧಾರಿ ಎಂದು ತಿಳಿಸಿತ್ತು.

ಇಂಗ್ಲೆಂಡ್ ಸರಣಿ ಮುಕ್ತಾಯದ ಬಳಿಕ ಐಪಿಎಲ್

ಇಂಗ್ಲೆಂಡ್ ಸರಣಿ ಮುಕ್ತಾಯದ ಬಳಿಕ ಐಪಿಎಲ್

ಸದ್ಯ ಭಾರತ ಹಾಗೂ ಇಂಗ್ಲೆಂಡ್ ನಡುವೆ ಟೆಸ್ಟ್ ಸರಣಿ ನಡೆಯುತ್ತಿದ್ದು ಬಳಿಕ ಸೀಮಿತ ಓವರ್‌ಗಳ ಸರಣಿ ನಡೆಯಲಿದೆ. ಅದಾದ ಬಳಿಕ ಮುಂದಿನ ಏಪ್ರಿಲ್ ತಿಂಗಳಿನಲ್ಲಿ ಐಪಿಎಲ್ ಆರಂಭವಾಗಲಿದೆ.

Story first published: Monday, March 1, 2021, 23:37 [IST]
Other articles published on Mar 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X