ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಸಿಎಸ್‌ಕೆ ವಿರುದ್ಧ ಕೆಎಲ್ ರಾಹುಲ್ ಅಬ್ಬರದಾಟಕ್ಕೆ ತಲೆದೂಗಿದ ನೆಟ್ಟಿಗರು

IPL 2021, CSK vs PBKS, twitter reaction after KL Rahul 98 runs just 42 balls
KL Rahul ಪಂದ್ಯ ಮುಗಿದಾದ ನಂತರ ಹೇಳಿದ್ದೇನು | Oneindia Kannada

ಐಪಿಎಲ್‌ನ ಲೀಗ್ ಹಂತದ ಅಂತಿಮ ಘಟ್ಟ ಅತ್ಯಂತ ರೋಚಕವಾಗಿ ನಡೆಯುತ್ತಿದೆ. ಪ್ಲೇಆಫ್‌ ಸುತ್ತಿಗೇರಲು ಇರುವ ಒಂದು ಸ್ಥಾನಕ್ಕೆ ಮೂರು ತಂಡಗಳು ತೀವ್ರ ಪೈಪೋಟಿಗೆ ಇಳಿದಿವೆ. ಹೀಗಾಗಿ ಈ ಕದನ ಈಗ ಮತ್ತಷ್ಟು ರೋಚಕ ಹಂತಕ್ಕೆ ತಲುಪಿದೆ. ಟೂರ್ನಿಯಿಂದ ಬಹುತೇಕ ಹೊರಬಿದ್ದಿದ್ದ ಕೆಎಲ್ ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ಟೂರ್ನಿಯಲ್ಲಿ ಮುಂದುವರಿಯಲು ಅಂತಿಮ ಪಂದ್ಯದಲ್ಲಿ ಏನು ಮಾಡಬೇಕಿತ್ತೋ ಅದನ್ನು ಮಾಡುವಲ್ಲಿ ಯಶಸ್ವಿಯಾಗಿದೆ. ಈಗ ಪಂಜಾಬ್ ತಂಡದ ಭವಿಷ್ಯ ಕೆಕೆಆರ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಫಲಿತಾಂಶದ ಮೇಲೆ ನಿರ್ಧಾರವಾಗಲಿದೆ.

ಇನ್ನು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ ಅಮೋಘ ಆಟವನ್ನು ಪ್ರದರ್ಶಿಸಿದರು. ಕೇವಲ 42 ಎಸೆತಗಳನ್ನು ಎದುರಿಸಿದ ಕೆಎಲ್ ರಾಹುಲ್ ಭರ್ಜರಿ 98 ರನ್‌ಗಳಿಸಿ ಅಜೇಯವಾಗುಳಿಯುವ ಮೂಲಕ ಪಂದ್ಯವನ್ನು ಗೆಲ್ಲಿಸಿದರು. ಈ ಪ್ರದರ್ಶನದಿಂದಾಗಿ ಪಂಜಾಬ್ ಕಿಂಗ್ಸ್ ತಂಡ 135 ರನ್‌ಗಳ ಗುರಿಯನ್ನು ಕೇವಲ 13 ಓವರ್‌ಗಳನ್ನು ತಲುಪಿ ಅದದಭುತ ಗೆಲುವು ಸಾಧಿಸಿದೆ.

ಭರ್ಜರಿ ಸಿಕ್ಸರ್‌ಗಳಿಗಾಗಿ ಅಪರೂಪದ ದಾಖಲೆ ಬರೆದ ಎಬಿ ಡಿ ವಿಲಿಯರ್ಸ್ಭರ್ಜರಿ ಸಿಕ್ಸರ್‌ಗಳಿಗಾಗಿ ಅಪರೂಪದ ದಾಖಲೆ ಬರೆದ ಎಬಿ ಡಿ ವಿಲಿಯರ್ಸ್

ಈ ಪಂದ್ಯವನ್ನು ಕೆಎಲ್ ರಾಹುಲ್ ಅಕ್ಷರಶಃ ಏಕಾಂಗಿಯಾಗಿ ಗೆಲ್ಲಿಸಿದ್ದಾರೆ. ತಂಡ ಗಳಿಸಿದ 139 ರನ್‌ಗಳ ಪೈಕಿ ಕೆಎಲ್ ರಾಹುಲ್ ಒಬ್ಬರೇ 98 ರನ್‌ಗಳಿಸಿದ್ದರು. ಈ ಸ್ಪೋಟಕ ಇನ್ನಿಂಗ್ಸ್‌ನಲ್ಲಿ 8 ಸಿಕ್ಸರ್ ಹಾಗೂ 7 ಬೌಂಡರಿ ಸಿಡಿಸಿದ್ದಾರೆ. ಭರ್ಜರಿ 233 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ ರಾಹುಲ್.

ಇನ್ನು ಕೆಎಲ್ ರಾಹುಲ್ ನೀಡಿದ ಈ ಪ್ರದರ್ಶನಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅದರಲ್ಲೂ ಟ್ವಿಟ್ಟರ್‌ನಲ್ಲಿ ಕ್ರಿಕೆಟ್ ಅಭಿಮಾನಿಗಳು ರಾಹುಲ್ ಆಟವನ್ನು ಕೊಂಡಾಡಿದ್ದಾರೆ. ರಾಹುಲ್ ಮೆಚ್ಚಿ ಸಾವಿರಾರು ಮೀಮ್‌ಗಳು ಟ್ವಿಟ್ಟರ್‌ನಲ್ಲಿ ಹರಿದಾಡುತ್ತಿದೆ.

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ XI: ಕೆಎಲ್ ರಾಹುಲ್ (ನಾಯಕ/ ವಿಕೆಟ್ ಕೀಪರ್), ಮಯಾಂಕ್ ಅಗರ್ವಾಲ್, ಐಡೆನ್ ಮಾರ್ಕ್ರಮ್, ಸರ್ಫರಾಜ್ ಖಾನ್, ಶಾರುಖ್ ಖಾನ್, ಮೊಯಿಸ್ ಹೆನ್ರಿಕ್ಸ್, ಕ್ರಿಸ್ ಜೋರ್ಡಾನ್, ಹರಪ್ರೀತ್ ಬ್ರಾರ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್
ಬೆಂಚ್: ಆದಿಲ್ ರಶೀದ್, ಮನ್ ದೀಪ್ ಸಿಂಗ್, ಜಲಜ್ ಸಕ್ಸೇನಾ, ದೀಪಕ್ ಹೂಡಾ, ಫ್ಯಾಬಿಯನ್ ಅಲೆನ್, ಸೌರಭ್ ಕುಮಾರ್, ಇಶಾನ್ ಪೊರೆಲ್, ಉತ್ಕರ್ಷ ಸಿಂಗ್, ದರ್ಶನ್ ನಲ್ಕಂಡೆ, ಪ್ರಭಸಿಮ್ರಾನ್ ಸಿಂಗ್, ನಾಥನ್ ಎಲ್ಲಿಸ್, ಮುರುಗನ್ ಅಶ್ವಿನ್, ನಿಕೋಲಸ್ ಪೂರನ್

ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ XI: ಋತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ರಾಬಿನ್ ಉತ್ತಪ್ಪ, ಮೊಯೀನ್ ಅಲಿ, ಅಂಬಟಿ ರಾಯುಡು, ಎಂಎಸ್ ಧೋನಿ (ವಿಕೆಟ್ ಕೀಪರ್/ ನಾಯಕ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಜೋಶ್ ಹ್ಯಾಜಲ್‌ವುಡ್
ಬೆಂಚ್: ಸುರೇಶ್ ರೈನಾ, ಚೇತೇಶ್ವರ ಪೂಜಾರ, ಕರ್ನ್ ಶರ್ಮಾ, ಇಮ್ರಾನ್ ತಾಹಿರ್, ಜೇಸನ್ ಬೆಹ್ರೆಂಡೋರ್ಫ್, ಕೃಷ್ಣಪ್ಪ ಗೌತಮ್, ಲುಂಗಿ ನ್ಗಿಡಿ, ಮಿಚೆಲ್ ಸ್ಯಾಂಟ್ನರ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಹರಿ ನಿಶಾಂತ್, ಎನ್ ಜಗದೀಶನ್, ಕೆಎಂ ಆಸಿಫ್, ಹರಿಶಂಕರ್ ರೆಡ್ಡಿ, ಭಗತ್ ವರ್ಮ

Story first published: Friday, October 8, 2021, 9:58 [IST]
Other articles published on Oct 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X