ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸನ್‌ರೈಸರ್ಸ್ ತಂಡದೊಳಗೆ ಆಗಬಾರದ್ದೇನೋ ಆಗಿದೆ: ಡೇಲ್ ಸ್ಟೈನ್

IPL 2021: Dale Steyn says David Warner might leave SRH
David Warner ಅವರನ್ನು ಹೀಗೆ ನೋಡಿ ನೊಂದ ಅಭಿಮಾನಿಗಳು | Oneindia Kannada

ಈ ಬಾರಿಯ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಅತ್ಯಂತ ಕಳಪೆ ಪ್ರದರ್ಶನವನ್ನು ನೀಡಿದೆ. ಹೀಗಾಗಿ ಸನ್‌ರೈಸರ್ಸ್ ತಂಡದ ಮ್ಯಾನೇಜ್‌ಮೆಂಟ್ ನಾಯಕನ್ನು ಇದ್ದಕ್ಕಿದ್ದಂತೆ ಬದಲಾಯಿಸಿದೆ. ನಾಯಕನಾಗಿದ್ದ ಡೇವಿಡ್ ವಾರ್ನರ್ ಅವರನ್ನು ನಾಯಕತ್ವದಿಂದ ಕೆಳಗಿಸಿದ್ದು ಮಾತ್ರವಲ್ಲದೆ ಆಡುವ ಬಳಗದಿಂದಲೂ ವಾರ್ನರ್ ಹೊರಬಿದ್ದಿದ್ದಾರೆ.

ನಾಯಕತ್ವ ಬದಲಾವಣೆಯ ನಂತರವೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ಅದೃಷ್ಟ ಬದಲಾಗಿಲ್ಲ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ನೇತೃತ್ವದಲ್ಲಿ ಹೈದರಾಬಾದ್ ಬಳಗ ಹೀನಾಯವಾಗಿ ಸೋಲು ಕಂಡಿದೆ. ಈ ಬೆಳವಣಿಗೆ ನಂತರ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ವೇಗಿ ಡೇಲ್ ಸ್ಟೈನ್ ಪ್ರತಿಕ್ರಿಯಿಸಿದ್ದು ತಂಡದ ಒಳಗೆ ಆಗಬಾರದ್ದೇನೋ ನಡೆದಿದೆ ಎನ್ನುವ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.

ಐಪಿಎಲ್ 2021 : ಕೊಲ್ಕತ್ತಾ vs ಬೆಂಗಳೂರು ಇಂದಿನ ಪಂದ್ಯ ಮುಂದೂಡಿಕೆಐಪಿಎಲ್ 2021 : ಕೊಲ್ಕತ್ತಾ vs ಬೆಂಗಳೂರು ಇಂದಿನ ಪಂದ್ಯ ಮುಂದೂಡಿಕೆ

ನಾಯಕತ್ವದ ಬದಲಾವಣೆ ಓಕೆ

ನಾಯಕತ್ವದ ಬದಲಾವಣೆ ಓಕೆ

ಸತತವಾಗಿ ಸೋಲನ್ನು ಕಂಡ ನಂತರ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವವನ್ನು ಬದಲಾವಣೆ ಮಾಡಿ ಕೇನ್ ವಿಲಿಯಮ್ಸನ್‌ಗೆ ನೀಡಿದ ಬಗ್ಗೆ ಸಮ್ಮತಿಯನ್ನು ಸೂಚಿಸಿದ್ದಾರೆ ಡೇಲ್ ಸ್ಟೈನ್. ಕೇನ್ ವಿಲಿಯಮ್ಸನ್ ಅವರನ್ನು ನಾಯಕನನ್ನಾಗಿ ಮಾಡಿದ್ದರೂ ಆಡುವ ಬಳಗದಲ್ಲಿ ಡೇವಿಡ್ ವಾರ್ನರ್‌ಗೆ ಸ್ಥಾನವಿರಬೇಕಾಗಿತ್ತು ಎಂದಿದ್ದಾರೆ ಆಫ್ರಿಕಾದ ವೇಗಿ.

ವಿಚಿತ್ರ ನಿರ್ಧಾರ ಎಂದ ಸ್ಟೈನ್

ವಿಚಿತ್ರ ನಿರ್ಧಾರ ಎಂದ ಸ್ಟೈನ್

ನಾಯಕತ್ವದಿಂದ ಕೆಳಗಿಳಿಸಿದ ನಂತರ ಡೇವಿಡ್ ವಾರ್ನರ್ ಅವರನ್ನು ತಂಡದ ಆಡುವ ಬಳಗದಿಂದ ಹೊರಗಿಡುವ ತಂಡದ ನಿರ್ಧಾರ ವಿಚಿತ್ರವಾದದ್ದು ಎಂದು ಡೇಲ್ ಸ್ಟೇನ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಐಪಿಎಲ್‌ನಲ್ಲಿ ವಾರ್ನರ್ ಅದ್ಭುತ ದಾಖಲೆಯನ್ನು ಹೊಂದಿದ್ದಾರೆ. ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪೈಕಿ ವಾರ್ನರ್ ಐದನೇ ಸ್ಥಾನದಲ್ಲಿದ್ದಾರೆ. ಐಪಿಎಲ್‌ನಲ್ಲಿ ಅರ್ಧ ಶತಕಗಳ ಅರ್ಧ ಶತಕ ದಾಖಲಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಯನ್ನು ಸ್ಟೇಯ್ನ್ ಹೊಂದಿದ್ದಾರೆ.

ಅದ್ಭುತವಾದ ಆಟಗಾರ

ಅದ್ಭುತವಾದ ಆಟಗಾರ

"ಆಡುವ ಬಳಗದಿಂದ ವಾರ್ನರ್ ಹೊರಗಿಟ್ಟಿರುವುದು ವಿಚಿತ್ರವಾದ ನಿರ್ಧಾರ. ನಾಯಕತ್ವದ ಬದಲಾವಣೆ ಮಾಡಿ ಕೇನ್‌ಗೆ ಅವಕಾಶವನ್ನು ನೀಡಿರುವುದು ಒಪ್ಪಿಕೊಳ್ಳಬಹುದು. ಆದರೆ ಆಟಗಾರನಾಗಿ ವಾರ್ನರ್ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. ಆತನನ್ನ ಆಡುವ ಬಳಗದಲ್ಲಿರುವುದನ್ನು ನೋಡಲು ನಾನು ಬಯಸುತ್ತೇನೆ. ಆದರೆ ಇದು ವಾರ್ನರ್ ಅವರನ್ನು ಕಿತ್ತಳೆ ಸೇನೆಯಲ್ಲಿ ನೋಡಲು ಇರುವ ಕೊನೆಯ ಅವಕಾಶವೆನಿಸುತ್ತದೆ" ಎಂದು ಸ್ಟೇಯ್ನ್ ಅಭಿಪ್ರಾಯಪಟ್ಟಿದ್ದಾರೆ.

ಹೊರಗಡೆ ತಿಳಿಯಂತೆ ಆಂತರಿಕವಾಗಿ ಏನೋ ನಡೆದಿದೆ

ಹೊರಗಡೆ ತಿಳಿಯಂತೆ ಆಂತರಿಕವಾಗಿ ಏನೋ ನಡೆದಿದೆ

ಮನೀಶ್ ಪಾಂಡೆಯನ್ನು ಹೊರಗಿಟ್ಟ ನಂತರ ಬಹುಶಃ ಡೇವಿಡ್ ವಾರ್ನರ್ ಪ್ರಶ್ನಿಸಿರಬಹುದು. ಇದು ಮ್ಯಾನೇಜ್‌ಮೆಂಟ್‌ಗೆ ಸರಿಯೆನಿಸದಿರಲೂಬಹುದು. ಆದರೆ ತಂಡದ ನಾಯಕನಾದವನು ಆಡುವ ಬಳಗದ ಆಯ್ಕೆ ಂಆಡುವ ಅಧಿಕಾರವನ್ನು ಹೊಂದಿರಬೇಕು. ಇದೇ ವಿಚಾರವಾಗಿ ಖಂಡಿತಾ ನಾಲ್ಕು ಕೋಣೆಗಳ ಮಧ್ಯೆ ಏನೋ ನಡೆದಿರುವ ಸಾಧ್ಯತೆಯಿದೆ. ಇದು ಸಾರ್ವಜನಿಕರ ಅರಿಗೆ ಬಂದಿರುವುದಿಲ್ಲ" ಎಂದು ಡೇಲ್ ಸ್ಟೇಯ್ನ್ ಹೇಳಿದ್ದಾರೆ.

Story first published: Monday, May 3, 2021, 17:38 [IST]
Other articles published on May 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X