ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಬೆಂಗಳೂರಿಗೆ ಬಂದ ಹರ್ಷಲ್ ಪಟೇಲ್, ಡೇನಿಯಲ್ ಸ್ಯಾಮ್ಸ್!

IPL 2021: Daniel Sams and Harshal Patel Traded To RCB

ಬೆಂಗಳೂರು: 2021ರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಸೀಸನ್‌ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಬಲಿಷ್ಠಗೊಳ್ಳುತ್ತಿದೆ. 14 ಆವೃತ್ತಿಯ ಐಪಿಎಲ್‌ಗಾಗಿ ಬುಧವಾರ (ಜನವರಿ 20) ಆರ್‌ಸಿಬಿ ತನ್ನಲ್ಲಿ ಉಳಿಸಿಕೊಳ್ಳುವ, ಬಿಟ್ಟುಕೊಡುವ ಆಟಗಾರರ ಪಟ್ಟಿ ಪ್ರಕಟಿಸಿದೆ. ಒಂದೇ ಒಂದು ಸಾರಿಯೂ ಕಪ್‌ ಗೆಲ್ಲದ ತಂಡಗಳ ಸಾಲಿನಲ್ಲಿರುವ ಆರ್‌ಸಿಬಿ ಈ ಬಾರಿ ತಂಡವನ್ನು ಇನ್ನಷ್ಟು ಬಲಗೊಳಿಸಿ ಸ್ಪರ್ಧೆಗಿಳಿಯುವ ಯೋಜನೆಯಲ್ಲಿದೆ.

ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಹೆಚ್ಚಿನ ಬದಲಾವಣೆಯಿಲ್ಲಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಹೆಚ್ಚಿನ ಬದಲಾವಣೆಯಿಲ್ಲ

ಹೀಗಾಗಿ ಈಗಾಗಲೇ ಆರ್‌ಸಿಬಿ ತಂಡ, ಆಟಗಾರರ ಕೊಡು-ಕೊಳ್ಳುವಿಕೆಗೂ ಮುಂದಾಗಿದೆ. ಇಬ್ಬರು ಆಟಗಾರರು ಆರ್‌ಸಿಬಿಗೆ ಬಂದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದ ಡೇನಿಯಲ್ ಸ್ಯಾಮ್ಸ್ ಮತ್ತು ಹರ್ಷಲ್ ಪಟೇಲ್ ಅವರನ್ನು ಆರ್‌ಸಿಬಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಐಪಿಎಲ್ 2021: ಮುಂಬೈ ಇಂಡಿಯನ್ಸ್‌ ಉಳಿಸಿಕೊಂಡಿರುವ, ಬಿಟ್ಟಿರುವ ಆಟಗಾರರ ಪಟ್ಟಿಐಪಿಎಲ್ 2021: ಮುಂಬೈ ಇಂಡಿಯನ್ಸ್‌ ಉಳಿಸಿಕೊಂಡಿರುವ, ಬಿಟ್ಟಿರುವ ಆಟಗಾರರ ಪಟ್ಟಿ

ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡೂ ಅಧಿಕೃತ ಟ್ವಿಟರ್ ಖಾತೆಗಳು ಸ್ಯಾಮ್ಸ್, ಪಟೇಲ್ ಆರ್‌ಸಿಬಿಗೆ ಮಾರಾಟವಾಗಿದ್ದನ್ನು ಖಾತರಿಪಡಿಸಿದೆ.

ಹರ್ಷಲ್ ಪಟೇಲ್ 46 ವಿಕೆಟ್

ಹರ್ಷಲ್ ಪಟೇಲ್ 46 ವಿಕೆಟ್

ಆಸ್ಟ್ರೇಲಿಯಾದ ಎಡಗೈ ಮಧ್ಯಮ ವೇಗಿಯಾದ ಡೇನಿಯಲ್ ಸ್ಯಾಮ್ಸ್ (28ರ ಹರೆಯ) 3 ಐಪಿಎಲ್‌ ಪಂದ್ಯಗಳನ್ನಾಡಿದ್ದಾರೆ. ಇನ್ನು ಬಲಗೈ ಮಧ್ಯಮ ವೇಗಿ, 30ರ ಹರೆಯದ ಹರ್ಷಲ್ ಪಟೇಲ್ 48 ಐಪಿಎಲ್ ಪಂದ್ಯಗಳಲ್ಲಿ 46 ವಿಕೆಟ್ ಪಡೆದುಕೊಂಡಿದ್ದಾರೆ.

ಆರ್‌ಸಿಬಿ ಬಿಟ್ಟುಕೊಟ್ಟಿರುವ ಆಟಗಾರರ ಪಟ್ಟಿ

ಆರ್‌ಸಿಬಿ ಬಿಟ್ಟುಕೊಟ್ಟಿರುವ ಆಟಗಾರರ ಪಟ್ಟಿ

ಕ್ರಿಸ್ ಮೋರಿಸ್, ಆ್ಯರನ್ ಫಿಂಚ್, ಮೊಯೀನ್ ಅಲಿ, ಇಸುರು ಉದಾನಾ, ಡೇಲ್ ಸ್ಟೇನ್, ಶಿವಮ್ ದೂಬೆ, ಉಮೇಶ್ ಯಾದವ್, ಪವನ್ ನೇಗಿ, ಗುರ್ಕೀರತ್ ಮನ್, ಪಾರ್ಥಿವ್ ಪಟೇಲ್.

ಆರ್‌ಸಿಬಿ ಉಳಿಸಿಕೊಂಡಿರುವ ಆಟಗಾರರು

ಆರ್‌ಸಿಬಿ ಉಳಿಸಿಕೊಂಡಿರುವ ಆಟಗಾರರು

ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಯುಜ್ವೇಂದ್ರ ಚಾಹಲ್, ದೇವದತ್ ಪಡಿಕ್ಕಲ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಆಡಮ್ ಜಂಪಾ, ಶಹಬಾಜ್ ಅಹ್ಮದ್, ಜೋಶ್ ಫಿಲಿಪ್, ಕೇನ್ ರಿಚರ್ಡ್ಸನ್, ಪವನ್ ದೇಶಪಾಂಡೆ.

Story first published: Thursday, January 21, 2021, 9:35 [IST]
Other articles published on Jan 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X