ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಹರಾಜು, ಟೂರ್ನಿ ಆರಂಭದ ಸಂಭಾವ್ಯ ದಿನಾಂಕ ಪ್ರಕಟ

IPL 2021 Date: BCCI will most likely decide to host the new edition after April 10

ನವದೆಹಲಿ: 2021ರ ಇಂಡಿಯನ್ ಪ್ರೀಮಿಯರ್ ಲೀಗ್‌ಗಾಗಿ ಆಟಗಾರರ ಹರಾಜು ಮತ್ತು ಟೂರ್ನಿ ಆರಂಭದ ಸಂಭಾವ್ಯ ದಿನಾಂಕ ಪ್ರಕಟವಾಗಿದೆ. ಭಾರತದ ಅದ್ದೂರಿ ಕ್ರಿಕೆಟ್ ಟೂರ್ನಿಯನ್ನು ಏಪ್ರಿಲ್ 10ರ ಬಳಿಕ ನಡೆಸಲು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಇನ್ ಇಂಡಿಯಾ ಆಲೋಚಿಸಿದೆ ಎನ್ನಲಾಗಿದೆ.

ಭಾರತ vs ಆಸ್ಟ್ರೇಲಿಯಾ: ವಿಶೇಷ ದಾಖಲೆ ಪಟ್ಟಿ ಸೇರಿದ ಶುಬ್ಮನ್ ಗಿಲ್ಭಾರತ vs ಆಸ್ಟ್ರೇಲಿಯಾ: ವಿಶೇಷ ದಾಖಲೆ ಪಟ್ಟಿ ಸೇರಿದ ಶುಬ್ಮನ್ ಗಿಲ್

14ನೇ ಆವೃತ್ತಿಯ ಐಪಿಎಲ್‌ಗೆ ಸಂಬಂಧಿಸಿ ಆಟಗಾರರ ಹರಾಜು ಫೆಬ್ರವರಿ 11ರಂದು ನಡೆಯುವ ನಿರೀಕ್ಷೆಯಿದೆ. ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಂಟು ತಂಡಗಳು ತನ್ನಲ್ಲೇ ಉಳಿಸಿಕೊಳ್ಳುವ ಆಟಗಾರರ ಬಗ್ಗೆ ಬಿಸಿಸಿಐಗೆ ಪತ್ರ ಸಲ್ಲಿಸಲು ಜನವರಿ 20 ಕಡೇಯ ದಿನವಾಗಿರಲಿದೆ. ಆಟಗಾರ ವ್ಯಾಪಾರಕ್ಕೆ ಫೆಬ್ರವರಿ 4 ಕೊನೇ ದಿನವಾಗಿರಲಿದೆ.

2022ರಲ್ಲಿ ಐಪಿಎಲ್‌ನಲ್ಲಿ 8ಕ್ಕೆ ಬದಲಾಗಿ 10 ತಂಡಗಳು ಕಾಣಿಸಿಕೊಳ್ಳಲಿವೆ. ಎರಡು ಹೆಚ್ಚುವರಿ ತಂಡಗಳಿಗಾಗಿ ಏಪ್ರಿಲ್‌ನಲ್ಲಿ ಬಿಸಿಸಿಐ ಟೆಂಡರ್ ಕರೆಯುವ ಸಾಧ್ಯತೆಯಿದೆ. ಹೊಸ ತಂಡಗಳ ಮೂಲ ಬೆಲೆ ಕನಿಷ್ಠ 1500 ಕೋ.ರೂ. ಆಗಿರಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಕ್ರಿಕೆಟ್ ದಂತಕತೆಗಳ ಹಿಂದಿಕ್ಕಿ ದಾಖಲೆ ನಿರ್ಮಿಸಿದ ಸ್ಟೀವ್ ಸ್ಮಿತ್!ಕ್ರಿಕೆಟ್ ದಂತಕತೆಗಳ ಹಿಂದಿಕ್ಕಿ ದಾಖಲೆ ನಿರ್ಮಿಸಿದ ಸ್ಟೀವ್ ಸ್ಮಿತ್!

2021ರ ಐಪಿಎಲ್ ಭಾರತದಲ್ಲಿ ನಡೆಯುತ್ತಾ ಇಲ್ಲ ಹಿಂದಿನ ಸೀಸನ್‌ನಂತೆ ಯುಎಇಯಲ್ಲಿ ನಡೆಯುತ್ತಾ ಅನ್ನೋದು ಸ್ಪಷ್ಟಗೊಂಡಿಲ್ಲ. ಇನ್ನೊಂದು ತಿಂಗಳು ಕೊರೊನಾ ಸ್ಥಿತಿಗತಿಗಳನ್ನು ಗಮನಿಸಿ ಆ ಬಳಿಕ ಟೂರ್ನಿಯ ತಾಣ ನಿರ್ಧರಿಸುತ್ತೇವೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.

Story first published: Friday, January 8, 2021, 22:52 [IST]
Other articles published on Jan 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X