ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಟ್ರೋಫಿ ಗೆಲ್ಲಬಹುದಾದ 2 ತಂಡಗಳನ್ನು ಹೆಸರಿಸಿದ ಸೆಹ್ವಾಗ್; ಬಲಿಷ್ಠ ತಂಡದ ಹೆಸರೇ ಇಲ್ಲ!

IPL 2021: DC and MI favorites to win this year’s IPL says Virender Sehwag

ಕಳೆದ ಏಪ್ರಿಲ್ ತಿಂಗಳಿನಲ್ಲಿ ಆರಂಭವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿ ಕೊರೋನಾವೈರಸ್ ಕಾರಣದಿಂದ ಟೂರ್ನಿ ಮಧ್ಯದಲ್ಲಿಯೇ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮರಳಿ ಬಂದಿದೆ.

ಆರ್‌ಸಿಬಿ ಪರ 200 ಪಂದ್ಯ ಪೂರೈಸಿದ ಕೊಹ್ಲಿಗೆ ಸ್ನೇಹಿತ ಎಬಿಡಿ ಕಡೆಯಿಂದ ಸಿಕ್ತು ವಿಶೇಷ ಉಡುಗೊರೆಆರ್‌ಸಿಬಿ ಪರ 200 ಪಂದ್ಯ ಪೂರೈಸಿದ ಕೊಹ್ಲಿಗೆ ಸ್ನೇಹಿತ ಎಬಿಡಿ ಕಡೆಯಿಂದ ಸಿಕ್ತು ವಿಶೇಷ ಉಡುಗೊರೆ

ಹೌದು ಕಳೆದ ಏಪ್ರಿಲ್ ತಿಂಗಳಿನಲ್ಲಿ ಭಾರತ ನೆಲದಲ್ಲಿ ಆರಂಭವಾಗಿದ್ದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 29 ಪಂದ್ಯಗಳು ಮುಗಿದ ನಂತರ ವಿವಿಧ ತಂಡಗಳ ಕೆಲ ಆಟಗಾರರು ಮತ್ತು ಸಿಬ್ಬಂದಿ ವರ್ಗದವರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ಕಾರಣ ಟೂರ್ನಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಮುಂದೂಡಲಾಗಿತ್ತು. ಹೀಗೆ ಮುಂದೂಡಲ್ಪಟ್ಟಿದ್ದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಯುಎಇಗೆ ಸ್ಥಳಾಂತರಗೊಂಡಿದ್ದು ಸೆಪ್ಟೆಂಬರ್ 19ರ ಭಾನುವಾರದಿಂದ ಪುನರಾರಂಭವಾಗಿದ್ದು ಪಂದ್ಯಗಳ ಕುರಿತು ಚರ್ಚೆಗಳು ಆರಂಭವಾಗಿವೆ.

ಐಪಿಎಲ್: ಮೈದಾನಕ್ಕೆ ತೆರಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೆಂಬಲಿಸಿದ ಸುದೀಪ್ ದಂಪತಿಐಪಿಎಲ್: ಮೈದಾನಕ್ಕೆ ತೆರಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೆಂಬಲಿಸಿದ ಸುದೀಪ್ ದಂಪತಿ

ಇನ್ನು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಯಾವ ತಂಡಗಳು ಸೆಮಿಫೈನಲ್ ಹಂತ ತಲುಪಲಿವೆ, ಯಾವ ತಂಡಗಳು ಫೈನಲ್ ಪಂದ್ಯವನ್ನು ತಲುಪಲಿವೆ ಮತ್ತು ಯಾವ ತಂಡ ಟ್ರೋಫಿಯನ್ನು ಗೆಲ್ಲಲಿದೆ ಎಂಬ ಊಹೆಗಳು ಈಗಾಗಲೇ ಆರಂಭವಾಗಿದ್ದು, ಹಲವಾರು ಮಾಜಿ ಕ್ರಿಕೆಟಿಗರು ಮತ್ತು ಕ್ರಿಕೆಟ್ ಪಂಡಿತರು ಈ ಬಾರಿಯ ಟೂರ್ನಿಯಲ್ಲಿ ಯಾವ ತಂಡ ವಿಜೇತರಾಗಿ ಹೊರಹೊಮ್ಮಲಿದೆ ಎಂಬುದರ ಕುರಿತು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸತೊಡಗಿದ್ದಾರೆ. ಈ ಸಾಲಿಗೆ ಇದೀಗ ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕೂಡ ಸೇರಿಕೊಂಡಿದ್ದು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಯಾವ ತಂಡ ಟ್ರೋಫಿಯನ್ನು ಗೆಲ್ಲಲಿದೆ ಎಂಬುದರ ಕುರಿತು ಈ ಕೆಳಕಂಡಂತೆ ತಮ್ಮ ಪಾಲಿನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಟ್ರೋಫಿ ಗೆಲ್ಲಬಹುದಾದ 2 ತಂಡಗಳನ್ನು ಹೆಸರಿಸಿದ ಸೆಹ್ವಾಗ್

ಟ್ರೋಫಿ ಗೆಲ್ಲಬಹುದಾದ 2 ತಂಡಗಳನ್ನು ಹೆಸರಿಸಿದ ಸೆಹ್ವಾಗ್

ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಮುನ್ನಡೆಸುತ್ತಿರುವ ಮುಂಬೈ ಇಂಡಿಯನ್ಸ್ ಅಥವಾ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಟ್ರೋಫಿ ಗೆಲ್ಲಬಹುದಾದ ತಂಡಗಳಾಗಿವೆ ಎಂದು ವಿರೇಂದ್ರ ಸೆಹ್ವಾಗ್ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಎರಡನೇ ಹಂತ ಯುಎಇಗೆ ಸ್ಥಳಾಂತರಿಸಲ್ಪಟ್ಟಿರುವ ಕಾರಣ ಮುಂಬೈ ಇಂಡಿಯನ್ಸ್ ಅಥವಾ ಡೆಲ್ಲಿ ಕ್ಯಾಪಿಟಲ್ಸ್ ಟ್ರೋಫಿ ಗೆಲ್ಲಬಹುದು ಎಂದೆನಿಸುತ್ತಿದೆ ಎಂದು ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ಬೆಂಗಳೂರು ಕಪ್ ಗೆಲ್ಲಬೇಕು ಎಂದ ವಿರೇಂದ್ರ ಸೆಹ್ವಾಗ್

ಬೆಂಗಳೂರು ಕಪ್ ಗೆಲ್ಲಬೇಕು ಎಂದ ವಿರೇಂದ್ರ ಸೆಹ್ವಾಗ್

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಅಥವಾ ಡೆಲ್ಲಿ ಕ್ಯಾಪಿಟಲ್ಸ್ ಟ್ರೋಫಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿರುವ ವಿರೇಂದ್ರ ಸೆಹ್ವಾಗ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆಲ್ಲಲಿ ಎಂದು ಆಶಿಸಿದ್ದಾರೆ. ಈ ಬಾರಿಯ ಐಪಿಎಲ್ ಟೂರ್ನಿ ನಂತರ ವಿರಾಟ್ ಕೊಹ್ಲಿ ಬೆಂಗಳೂರು ತಂಡದ ನಾಯಕ ಸ್ಥಾನದಿಂದ ಕೆಳಗಿಳಿಯಲಿರುವ ಕಾರಣ ಬೆಂಗಳೂರು ತಂಡ ಈ ಬಾರಿ ಕಪ್ ಗೆಲ್ಲಬೇಕು ಎಂದು ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ಬಲಿಷ್ಠ ಚೆನ್ನೈ ತಂಡದ ಹೆಸರನ್ನು ಕೈಬಿಟ್ಟ ವಿರೇಂದ್ರ ಸೆಹ್ವಾಗ್!

ಬಲಿಷ್ಠ ಚೆನ್ನೈ ತಂಡದ ಹೆಸರನ್ನು ಕೈಬಿಟ್ಟ ವಿರೇಂದ್ರ ಸೆಹ್ವಾಗ್!

3 ಬಾರಿ ಐಪಿಎಲ್ ಚಾಂಪಿಯನ್ಸ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹೆಸರನ್ನು ವೀರೇಂದ್ರ ಸೆಹ್ವಾಗ್ ಈ ಬಾರಿಯ ಟೂರ್ನಿಯಲ್ಲಿ ಕಪ್ ಗೆಲ್ಲಬಹುದಾದ ತಂಡಗಳ ಪಟ್ಟಿಯಿಂದ ಕೈಬಿಟ್ಟಿದ್ದಾರೆ. ಮುಂಬೈ ಅಥವಾ ಡೆಲ್ಲಿ ತಂಡ ಕಪ್ ಗೆಲ್ಲಲಿದೆ ಎಂದು ಹೇಳಿಕೆ ನೀಡಿರುವ ವಿರೇಂದ್ರ ಸೆಹ್ವಾಗ್ ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಸ್ತುತ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ಹೆಸರನ್ನು ಕೈಬಿಟ್ಟಿರುವುದು ಆಶ್ಚರ್ಯಕರವಾಗಿದೆ.ಸದ್ಯ (ಸೆಪ್ಟೆಂಬರ್ 21ರ ಸಮಯಕ್ಕೆ) ಚೆನ್ನೈ ಸೂಪರ್ ಕಿಂಗ್ಸ್ 8 ಪಂದ್ಯಗಳನ್ನಾಡಿದ್ದು 6 ಪಂದ್ಯಗಳಲ್ಲಿ ಜಯಗಳಿಸಿ, 2 ಪಂದ್ಯಗಳಲ್ಲಿ ಮಾತ್ರ ಸೋತು, 12 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.

Story first published: Tuesday, September 21, 2021, 18:38 [IST]
Other articles published on Sep 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X