ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳಿಂದ ನಾವು ವಿಚಲಿತಗೊಳ್ಳಲಿಲ್ಲ: ದೀಪಕ್ ಚಾಹರ್

ipl 2021: Deepak Chahar explains how did team members face difficult situation

ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳು ತೀವ್ರವಾಗಿ ಏರಿಕೆ ಕಾಣುತ್ತಿದ್ದರೂ ಐಪಿಎಲ್ ಟೂರ್ನಿಯ ಮೊದಲಾರ್ಧ ಭಾಗ ಕಠಿಣ ಬಯೋಬಬಲ್‌ನಲ್ಲಿ ಯಶಸ್ವಿಯಾಗಿ ನಡೆದಿತ್ತು. ಆದರೆ ಟೂರ್ನಿ ಮಧ್ಯ ಭಾಗದಲ್ಲಿ ಬಯೋಬಬಲ್‌ನ ಒಳಗೆ ಕೊರೊನಾ ವೈರಸ್ ಪ್ರಕರಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಟೂರ್ನಿಯನ್ನು ಮುಂದೂಡಲಾಗಿದೆ. ಆದರೆ ಇಂತಾ ಸಂದರ್ಭದಲ್ಲಿ ಬಯೋಬಬಲ್‌ನಲ್ಲಿದ್ದ ಆಟಗಾರರ ಮನಸ್ಥಿತಿ ಹೇಗಿತ್ತು ಎಂಬುದನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗಿ ದೀಪಕ್ ಚಾಹರ್ ಪ್ರತಿಕ್ರಿಯಿಸಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಈ ಬಾರಿ ಟೂರ್ನಿ ಮುಂದೂಡುವ ನಿರ್ಧಾರ ಕೂಗೊಳ್ಳುವ ಮುನ್ನ ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿ ಹಾಗೂ ಬ್ಯಾಟಿಂಗ್ ಕೋಚ್ ಮೈಕಲ್ ಹಸ್ಸಿ ಅವರಿಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿತ್ತು. ಆದರೆ ಈ ಸಂದರ್ಭದಲ್ಲಿ ಯಾವುದೇ ಆಟಗಾರರು ವಿಚಲಿತಗೊಳ್ಳಲಿಲ್ಲ ಎಂದಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಡೆದ ಮೂರು ವಿಶೇಷ ಸಂಗತಿಗಳುಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಡೆದ ಮೂರು ವಿಶೇಷ ಸಂಗತಿಗಳು

"ವರದಿ ಪಾಸಿಟಿವ್ ಎಂದು ಬಂದಾಗ ಫ್ರಾಂಚೈಸಿ ನಾವೆಲ್ಲಾ ಪ್ರತ್ಯೇಕವಾಗಿರಲು ಸೂಚಿಸಿತು. ನಾವು ಪ್ರತಿ ದಿನವೂ ಪರೀಕ್ಷೆಗೆ ಒಳಪಡುತ್ತಿದ್ದೆವು ಹಾಗೂ ನಮ್ಮ ವರದಿ ನೆಗೆಟಿವ್ ಎಂದು ಬಂದಿತ್ತು. ಹೀಗಾಗಿ ನಾವು ನಿರಾಳರಾಗಿದ್ದೆವು. ಆದರೆ ಯಾವುದೇ ಆಟಗಾರ ಕೂಡ ವಿಚಲಿತಗೊಳ್ಳಲಿಲ್ಲ. ಎಲ್ಲರು ಕೂಡ ಉತ್ತಮ ರೀತಿಯಲ್ಲಿ ಆ ಸ್ಥಿತಿಯನ್ನು ಎದುರಿಸಿದರು" ಎಂದು ಚಾಹರ್ ಹೇಳಿದ್ದಾರೆ.

"ಎಲ್ಲಾ ನಿಯಮಗಳನ್ನು ಕೂಡ ಕಟ್ಟಿನಿಟ್ಟಾಗಿ ಪಾಲಿಸಲಾಗಿತ್ತು, ಆದರೆ ಖಂಡಿತವಾಗಿಯೂ ಎಲ್ಲ ತಪ್ಪಾಯಿತು ಎಂಬುದು ನನಗೆ ತಿಳಿದಿಲ್ಲ. ಅದನ್ನು ಹೇಳುವುದು ನಿಜಕ್ಕೂ ಕಷ್ಟವಿದೆ. ಯಾಕೆಂದರೆ ಎಲ್ಲಾ ಆಟಗಾರರು ಕೂಡ ಬಯೋಬಬಲ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು" ಎಂದು ಚಾಹರ್ ಹೇಳಿದ್ದಾರೆ.

Story first published: Friday, May 7, 2021, 9:42 [IST]
Other articles published on May 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X