ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡೆಲ್ಲಿ ಕ್ಯಾಪಿಟಲ್ಸ್‌ಗೆ ಹಿನ್ನಡೆ, ಪ್ರಮುಖ ಆಟಗಾರನಿಗೆ ಕೊರೊನಾ ಪಾಸಿಟಿವ್

IPL 2021: Delhi Capitals Axar Patel tested positive for COVID-19

ನವದೆಹಲಿ: 14ನೇ ಆವೃತ್ತಿಯ ಇಂಡಿಯನ ಪ್ರೀಮಿಯರ್ ಲೀಗ್‌ (ಐಪಿಎಲ್‌) ಆರಂಭಕ್ಕೂ ಮುನ್ನವೇ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಹಿನ್ನಡೆಯ ಸಂಗತಿಯೊಂದು ಕೇಳಿ ಬಂದಿದೆ. ಬೌಲಿಂಗ್‌ ಆಲ್ ರೌಂಡರ್ ಅಕ್ಷರ್ ಪಟೇಲ್‌ಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ.

ಕಾರ್ಲೋಸ್ ಬ್ರಾಥ್‌ವೇಟ್ ಜಗತ್ತಿಗೆ ಪರಿಚಯವಾದ ದಿನವಿದು!ಕಾರ್ಲೋಸ್ ಬ್ರಾಥ್‌ವೇಟ್ ಜಗತ್ತಿಗೆ ಪರಿಚಯವಾದ ದಿನವಿದು!

27ರ ಹರೆಯದ ಅಕ್ಷರ್ ಪಟೇಲ್‌ಗೆ ಕೋವಿಡ್-19 ಪಾಸಿಟಿವ್ ಬಂದಿರುವ ಸಂಗತಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ತಿಳಿಸಿದೆ. ಪಾಸಿಟಿವ್ ಬಂದಿರುವ ಅಕ್ಷರ್ ಸದ್ಯ ಐಸೊಲೇಶನ್‌ನಲ್ಲಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್‌ನ ನಿತೀಶ್ ರಾಣಾಗೆ ಕೊರೊನಾ ಪಾಸಿಟಿವ್ ಬಂದ ಬಳಿಕ ಕೊರೊನಾ ಸೋಂಕು ಪತ್ತೆಯಾದ ಎರಡನೇ ಆಟಗಾರ ಅಕ್ಷರ್.

'ದುರದೃಷ್ಟಕರವಾಗಿ ಡೆಲ್ಲಿಯ ಅಕ್ಷರ್ ಪಟೇಲ್‌ಗೆ ಕೊರೊನಾವೈರಸ್ ಪಾಸಿಟಿವ್ ಬಂದಿದೆ. ಅವರೀಗ ಐಸೊಲೇಶನ್‌ನಲ್ಲಿದ್ದಾರೆ ಮತ್ತು ಎಲ್ಲಾ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುತ್ತಿದ್ದಾರೆ,' ಎಂದು ಎಎನ್‌ಐ ಜೊತೆ ಮಾತನಾಡಿದ ಡಿಸಿ ಮಾಹಿತಿ ನೀಡಿದೆ.

ಈ ಬಾರಿಯ ಎಲ್ಲಾ 8 ಫ್ರಾಂಚೈಸಿಗಳ ವಿನಾಶಕಾರಿ ಆರಂಭಿಕ ಬ್ಯಾಟ್ಸ್‌ಮನ್‌ಗಳಿವರು!ಈ ಬಾರಿಯ ಎಲ್ಲಾ 8 ಫ್ರಾಂಚೈಸಿಗಳ ವಿನಾಶಕಾರಿ ಆರಂಭಿಕ ಬ್ಯಾಟ್ಸ್‌ಮನ್‌ಗಳಿವರು!

ಏಪ್ರಿಲ್ 9ರಂದು ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ಸೆಣಸಾಡಲಿವೆ. ಏಪ್ರಿಲ್ 10ರಂದು ಚೆನ್ನೈ ಸೂಪರ್ ಕಿಂಗ್ಸ್‌ ಮತ್ತು ಹಾಲಿ ರನ್ನರ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸ್ಪರ್ಧಿಸಲಿವೆ.

Story first published: Saturday, April 3, 2021, 16:49 [IST]
Other articles published on Apr 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X