ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ನಾಯಕತ್ವದ ನಿರ್ಧಾರಕ್ಕೆ ತುರ್ತು ಸಭೆ ಕರೆದ ಡೆಲ್ಲಿ ಕ್ಯಾಪಿಟಲ್ಸ್

IPL 2021: Delhi Capitals promoters call emergency meeting to decide captain for IPL 2021

14ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ಕೆಲವೇ ದಿನಗಳಿರುವಾಗ ಡೆಲ್ಲಿ ತಂಡ ಆಘಾತಕ್ಕೆ ಒಳಗಾಗಿದೆ. ಮುಂಬರುವ ಟೂರ್ನಿಯಿಂದ ಸಂಪೂರ್ಣವಾಗಿ ನಾಯಕ ಶ್ರೇಯಸ್ ಐಯ್ಯರ್ ಅವರ ಸೇವೆಯಿಂದ ಡೆಲ್ಲಿ ವಂಚಿತವಾಗಲಿದೆ. ಹೀಗಾಗಿ ಮುಂದಿನ ನಾಯಕತ್ವ ಯಾರಿಗೆ ವಹಿಸಬೇಕು ಎಂಬ ನಿರ್ಧಾರವನ್ನು ಡೆಲ್ಲಿ ಕೈಗೊಳ್ಳಬೇಕಿದ್ದು ಈ ಬಗ್ಗೆ ಶುಕ್ರವಾರ ತುರ್ತು ಸಭೆ ಕರೆಯಿತು.

ದೊರೆತಿರುವ ಮಾಹಿತಿಯ ಪ್ರಕಾರ ಡೆಲ್ಲಿ ತಂಡದ ಸಹ ಮಾಲೀಕರಾದ ಕಿರಣ್ ಕುಮಾರ್ ಗಾಂಧಿ ಮತ್ತು ಪಾರ್ಥ್ ಜಿಂದಾಲ್ ಕೋಚ್ ರಿಕಿ ಪಾಂಟಿಂಗ್ ಶುಕ್ರವಾರ ಕಾನ್ಫರೆನ್ಸ್ ಕರೆಯ ಮೂಲಕ ಚರ್ಚೆಯನ್ನು ನಡೆಸಲಿದ್ದಾರೆ. ಶುಕ್ರವಾರವೇ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

ಐಪಿಎಲ್ : ಮುಂಬೈ ಇಂಡಿಯನ್ಸ್ ಪರ ಕೇವಲ ಒಂದೇ ಒಂದು ಪಂದ್ಯ ಆಡಿರುವ ಆಟಗಾರರ ಪಟ್ಟಿಐಪಿಎಲ್ : ಮುಂಬೈ ಇಂಡಿಯನ್ಸ್ ಪರ ಕೇವಲ ಒಂದೇ ಒಂದು ಪಂದ್ಯ ಆಡಿರುವ ಆಟಗಾರರ ಪಟ್ಟಿ

ಗುರುವಾರ ಇನ್‌ಸೈಡ್ ಸ್ಪೋರ್ಟ್ ವರದಿ ಮಾಡಿದ ಪ್ರಕಾರ ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕರು ಯುವ ಕ್ರಿಕೆಟಿಗ ರಿಷಭ್ ಪಂತ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡುವ ಒಲವು ಹೊಂದಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಇಂದಿನ ಈ ತುರ್ತು ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳುವ ಸಾಧ್ಯತೆಯಿದೆ.

ರಿಷಭ್ ಪಂತ್ ಜೊತೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವಕ್ಕೆ ಹಲವು ಆಯ್ಕೆಗಳು ಫ್ರಾಂಚೈಸಿ ಮುಂದಿದೆ. ಅನುಭವಿಗಳಾದ ಆರ್ ಅಶ್ವಿನ್, ಅಜಿಂಕ್ಯ ರಹಾನೆ ಅಲ್ಲದೆ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆಸಿಸ್ ಮಾಜಿ ನಾಯಕ ಸ್ಟೀವ್ ಸ್ಮಿತ್ ಕೂಡ ಸೇರ್ಪಡೆಗೊಂಡಿದ್ದಾರೆ. ಹೀಗಾಗಿ ಯಾರನ್ನು ಆಯ್ಕೆ ಮಾಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

437 ದಿನಗಳ ನಂತರ ಏಕದಿನ ಕ್ರಿಕೆಟ್‌ಗೆ ಮರಳಿದ ರಿಷಭ್ ಪಂತ್437 ದಿನಗಳ ನಂತರ ಏಕದಿನ ಕ್ರಿಕೆಟ್‌ಗೆ ಮರಳಿದ ರಿಷಭ್ ಪಂತ್

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ಶ್ರೇಯಸ್ ಐಯ್ಯರ್ ಫೀಲ್ಡಿಂಗ್ ವೇಳೆ ಗಾಯಗೊಂಡಿದ್ದರು. ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದು ಇಂಗ್ಲೆಂಡ್ ವಿರುದ್ಧದ ಸರಣಿ ಮಾತ್ರವಲ್ಲದೆ ಮುಂಬರುವ ಐಪಿಎಲ್‌ನಿಂದಲೂ ಸಂಪೂರ್ಣವಾಗಿ ಹೊರಗುಳಿಯುವ ಅನಿವಾರ್ಯತೆ ಉಂಟಾಗಿದೆ

Story first published: Friday, March 26, 2021, 19:44 [IST]
Other articles published on Mar 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X