ಅಹ್ಮದಾಬಾದ್: ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 25ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್ ಸುಲಭ ಜಯ ಗಳಿಸಿದೆ. ಆರಂಭಿಕ ಬ್ಯಾಟ್ಸ್ಮನ್ ಪೃಥ್ವಿ ಶಾ ಸ್ಫೋಟಕ ಅರ್ಧಶತಕದೊಂದಿಗೆ ಡೆಲ್ಲಿ 5ನೇ ಗೆಲುವು ದಾಖಲಿಸಿದೆ.
ಒಂದೇ ಓವರ್ನಲ್ಲಿ 6 ಬೌಂಡರಿ ಚಚ್ಚಿ ದಾಖಲೆ ಬರೆದ ಪೃಥ್ವಿ ಶಾ!
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಕೋಲ್ಕತ್ತಾ ನೈಟ್ ರೈಡರ್ಸ್, ನಿತೀಶ್ ರಾಣಾ 15, ಶುಬ್ಮನ್ ಗಿಲ್ 43 (38 ಎಸೆತ), ರಾಹುಲ್ ತ್ರಿಪಾಠಿ 19, ಆ್ಯಂಡ್ರೆ ರಸೆಲ್ 45 (27), ದಿನೇಶ್ ಕಾರ್ತಿಕ್ 14, ಪ್ಯಾಟ್ ಕಮಿನ್ಸ್ 11 ರನ್ನೊಂದಿಗೆ 20 ಓವರ್ಗೆ 6 ವಿಕೆಟ್ ಕಳೆದು 154 ರನ್ ಗಳಿಸಿತ್ತು.
ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್, ಪೃಥ್ವಿ ಶಾ 82 (41 ಎಸೆತ), ಶಿಖರ್ ಧವನ್ 46, ರಿಷಭ್ ಪಂತ್ 16, ಮಾರ್ಕಸ್ ಸ್ಟೋಯ್ನಿಸ್ 6 ರನ್ನೊಂದಿಗೆ 16.3 ಓವರ್ ಮುಕ್ತಾಯಕ್ಕೆ 3 ವಿಕೆಟ್ ಕಳೆದು 156 ರನ್ ಬಾರಿಸಿ ಗೆಲುವಿನ ನಗು ಚೆಲ್ಲಿತು.
ತನ್ನ ವಿವಾದಾತ್ಮಕ ಹೇಳಿಕೆಗೆ ಸ್ಪಷ್ಟನೆ ನೀಡಿದ ಆ್ಯಡಂ ಜಂಪಾ
ಕೋಲ್ಕತ್ತಾ ಇನ್ನಿಂಗ್ಸ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ನ ಅಕ್ಷರ್ ಪಟೇಲ್ 2, ಆವೇಶ್ ಖಾನ್ 1, ಲಲಿತ್ ಯಾದವ್ 2, ಮಾರ್ಕಸ್ ಸ್ಟೋಯ್ನಿಸ್ 1 ವಿಕೆಟ್ ಪಡೆದರೆ, ಡೆಲ್ಲಿ ಇನ್ನಿಂಗ್ಸ್ನಲ್ಲಿ ಕೋಲ್ಕತ್ತಾದ ಪ್ಯಾಟ್ ಕಮಿನ್ಸ್ 3 ವಿಕೆಟ್ನೊಂದಿಗೆ ಗಮನ ಸೆಳೆದರು. ಪೃಥ್ವಿ ಶಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.