ಐಪಿಎಲ್ 2021: ಡೆಲ್ಲಿ vs ಹೈದರಾಬಾದ್, ಟಾಸ್ ವರದಿ, ಪ್ಲೇಯಿಂಗ್ XI

ದುಬೈ, ಸೆಪ್ಟೆಂಬರ್ 22: ಐಪಿಎಲ್‌ನಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದ ಟಾಸ್ ಪ್ರಕ್ರಿಯೆ ಮುಕ್ತಾಯವಾಗಿದ್ದು ಸನ್‌ರೈಸರ್ಸ್ ಹೈದರಾಬಾದ್ ತಂಡ ಟಾಸ್ ಗೆದ್ದಿದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಈ ಬಾರಿಯ ಐಪಿಎಲ್‌ನಲ್ಲಿ ಸೋಲಿನ ಮೇಲೆ ಸೋಲು ಕಂಡಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಪ್ರತಿ ಪಂದ್ಯವೂ ನಿರ್ಣಾಯಕವಾಗಿದೆ. ಮುಂದಿನ ಎಲ್ಲಾ ಪಂದ್ಯಗಳನ್ನು ಗೆಲ್ಲುತ್ತಾ ಸಾಗಿದರೆ ಮಾತ್ರವೇ ಪ್ಲೇಆಪ್ ಹಂತಕ್ಕೇರಲು ಸನ್‌ರೈಸರ್ಸ್‌ಗೆ ಅವಕಾಶವಿದೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯ ಹೈದರಾಬಾದ್ ತಂಡದ ಪಾಲಿಗೆ ಮಹತ್ವದ್ದಾಗಿದೆ. ಇನ್ನು ಈ ಪಂದ್ಯದಲ್ಲಿ ಜೇಸನ್ ಹೋಲ್ಡರ್, ರಶೀದ್ ಖಾನ್, ದೇವಿಡ್ ವಾರ್ನರ್ ಹಾಗೂ ನಾಯಕ ಕೇನ್ ವಿಲಿಯಮ್ಸನ್ ಆಡುವ ಕಣದಲ್ಲಿರುವ ವಿದೇಶಿ ಆಟಗಾರರಾಗಿದ್ದಾರೆ.

ತಂಡದಲ್ಲಿ ಬೇರೆ ಒಳ್ಳೊಳ್ಳೆ ಆಟಗಾರರಿದ್ದಾರೆ; ಕೊಹ್ಲಿ ನಾಯಕತ್ವ ತ್ಯಜಿಸುತ್ತಿರುವುದರ ಬಗ್ಗೆ ಸುದೀಪ್ ಮಾತುತಂಡದಲ್ಲಿ ಬೇರೆ ಒಳ್ಳೊಳ್ಳೆ ಆಟಗಾರರಿದ್ದಾರೆ; ಕೊಹ್ಲಿ ನಾಯಕತ್ವ ತ್ಯಜಿಸುತ್ತಿರುವುದರ ಬಗ್ಗೆ ಸುದೀಪ್ ಮಾತು

ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ತಂಡಗಳಲ್ಲಿ ಒಂದಾಗಿದೆ. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಪಂತ್ ಪಡೆ ಈ ಪಂದ್ಯದಲ್ಲಿ ಗೆದ್ದು ತಮ್ಮ ಸ್ಥಾನವನ್ನು ಉತ್ತಮಪಡಿಸಿಕೊಳ್ಳಲು ಪ್ರಯತ್ನಿಸಲಿದೆ.

ಇನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡ ನೀಡಿದ 135 ರನ್‌ಗಳ ಗುರಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಸುಲಭವಾಗಿ ಬೆನ್ನಟ್ಟಿದೆ. ತಂಡದ ಮೊತ್ತ 20 ರನ್‌ಗಳಾಗುವಷ್ಟರಲ್ಲಿ ಆರಂಭೀಕ ಆಟಗಾರ ಪೃಥ್ವಿ ಶಾ ಔಟಾಗಿ ಫೆವಿಲಿಯನ್ ಸೇರಿದ್ದರು. ಆದರೆ ನಂತರ ಡೆಲ್ಲಿ ಬ್ಯಾಟ್ಸ್‌ಮನ್‌ಗಳ ವಿರುದ್ಧ ಮೇಲುಗೈ ಸಾಧಿಸಲು ಹೈದರಾಬಾದ್ ತಂಡ ಸಂಪೂರ್ಣ ವಿಫಲವಾಯಿತು. ಡೆಲ್ಲಿ ತಂಡದ ಸ್ಕೋರ್ 72 ರನ್‌ಗಳಾಗುವಷ್ಟರಲ್ಲಿ ಆ ರಂಭೀಕ ಆಟಗಾರ ಶಿಖರ್ ಧವನ್ ರಶೀದ್ ಖಾನ್‌ಗೆ ವಿಕೆಟ್ ಒಪ್ಪಿಸಿದ್ದರು. ಬಳಿಕ ಜೊತೆಯಾದ ಶ್ರೇಯಸ್ ಐಯ್ಯರ್ ಹಾಗೂ ರಿಷಭ್ ಪಂತ್ ಜೋಡಿ ತಂಡಕ್ಕೆ ಯಾವುದೇ ಹಿನ್ನಡೆಯಾಗದಂತೆ ನೋಡಿಕೊಂಡರು.

ಈ ಜೋಡಿ ಇನ್ನು 13 ಎಸೆತಗಳು ಬಾಕಿಯಿರುವಂತೆಯೇ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲುವು ಸಾಧಿಸುವಂತೆ ಮಾಡಿತ್ತು. 41 ಎಸೆತ ಎದುರಿಸಿದ ಶ್ರೇಯಸ್ ಐಯ್ಯರ್ 47 ರನ್‌ ಗಳಿಸಿದರೆ 21 ಎಸೆತಗಳಲ್ಲಿ ಪಂತ್ 35 ರನ್‌ ಸಿಡಿಸಿದ್ದರು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ 17.5 ಓವರ್‌ಗಳಲ್ಲಿ ಗುರಿಯನ್ನು ಯಶಸ್ವಿಯಾಗಿ ತಲುಪಿದೆ.

ಈ ಪ್ರದರ್ಶನದಿಮದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. 9 ಪಂದ್ಯಗಳನ್ನು ಆಡಿರುವ ಡೆಲ್ಲಿ ಕ್ಯಾಪಿಟಲ್ಸ್ 7 ಗೆಲುವಿನೊಂದಿಗೆ 14 ಅಂಕಗಳನ್ನು ಗಳಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ 12 ಹಾಗೂ ಆರ್‌ಸಿಬಿ 10 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ಟಾಪ್ 4ರಲ್ಲಿರುವ ಮತ್ತೊಂದು ತಂಡವಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ಆಡುವ ಬಳಗ: ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್ / ನಾಯಕ), ಮಾರ್ಕಸ್ ಸ್ಟೊಯಿನಿಸ್, ಶಿಮ್ರಾನ್ ಹೆಟ್ಮಿಯರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಾಗಿಸೊ ರಬಾಡಾ, ಅನ್ರಿಚ್ ನಾರ್ಟ್ಜೆ, ಅವೇಶ್ ಖಾನ್

ಐಪಿಎಲ್ 2021: ಪ್ರಮುಖ ಆಟಗಾರನ ಹೊರಗಿಟ್ಟಿದ್ದಕ್ಕೆ ಅನಿಲ್ ಕುಂಬ್ಳೆ ಟ್ರೋಲ್ಐಪಿಎಲ್ 2021: ಪ್ರಮುಖ ಆಟಗಾರನ ಹೊರಗಿಟ್ಟಿದ್ದಕ್ಕೆ ಅನಿಲ್ ಕುಂಬ್ಳೆ ಟ್ರೋಲ್

ಪಾಕ್ ಜೊತೆ ನ್ಯೂಜಿಲೆಂಡ್ ಪ್ರವಾಸ ರದ್ದಾಗೋದಕ್ಕೆ ಭಾರತ ಕಾರಣ ಎಂದ ಪಾಕಿಸ್ತಾನ | Oneindia Kannada

ಸನ್ ರೈಸರ್ಸ್ ಹೈದರಾಬಾದ್ ಆಡುವ ಬಳಗ: ಡೇವಿಡ್ ವಾರ್ನರ್, ವೃದ್ಧಿಮಾನ್ ಸಾಹಾ (ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್ (ನಾಯಕ), ಮನೀಶ್ ಪಾಂಡೆ, ಜೇಸನ್ ಹೋಲ್ಡರ್, ಅಬ್ದುಲ್ ಸಮದ್, ಕೇದಾರ್ ಜಾಧವ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ, ಖಲೀಲ್ ಅಹ್ಮದ್

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 4 - October 18 2021, 07:30 PM
ಶ್ರೀಲಂಕಾ
Namibia
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, September 22, 2021, 19:37 [IST]
Other articles published on Sep 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X