ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಸಚಿನ್ ಅಲ್ಲ, ಕೊಹ್ಲಿ ಅಲ್ಲ, ಆರ್‌ಸಿಬಿ ಆಟಗಾರ ಪಡಿಕ್ಕಲ್‌ಗೆ ರೋಲ್ ಮಾಡೆಲ್ ಯಾರು ಗೊತ್ತಾ!

IPL 2021: Devdutt Padikkal revealed former cricketer Gautam Gambhir is his cricketing role model
Devdutt Padikkal ಅವರ ನೆಚ್ಚಿನ ಆಟಗಾರ ಯಾರು ಗೊತ್ತಾ | Oneindia Kannada

ಐಪಿಎಲ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಏಪ್ರಿಲ್ 9ರಂದು ಆರ್‌ಸಿಬಿ ಮುಂಬೈ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೂ ಮುನ್ನ ಆರ್‌ಸಿಬಿ ತಂಡದ ಯುವ ಆಟಗಾರ ದೇವದತ್ ಪಡಿಕ್ಕಲ್ ತನ್ನ ರೋಲ್ ಮಾಡೆಲ್ ಯಾರು ಎಂಬುದನ್ನು ಹೇಳಿಕೊಂಡಿದ್ದಾರೆ.

ಆರ್‌ಸಿಬಿ ತಂಡದ ಪರವಾಗಿ ಕಳೆದ ಬಾರಿ ಅತ್ಯುತ್ತಮ ಪ್ರದರ್ಶನ ನೀಡಿ ಮಿಂಚಿದ್ದರು ಕನ್ನಡಿಗ ದೇವದತ್ ಪಡಿಕ್ಕಲ್. ಸಾಕಷ್ಟು ಭರವಸೆಯನ್ನು ಮೂಡಿಸಿರುವ ಈ ಪ್ರತಿಭಾನ್ವಿತ ಆಟಗಾರನ ರೋಲ್ ಮಾಡೆಲ್ ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಎಂದು ತಿಳಿಸಿದ್ದಾರೆ. ಗಂಭೀರ್ ಅವರ ಆಟದ ವಿಡಿಯೋಗಳನ್ನು ತಾನು ಈಗಲೂ ನೋಡುತ್ತಿರುತ್ತೇನೆ ಎಂದು ಹೇಳಿದ್ದಾರೆ.

ಐಪಿಎಲ್ 2021: ಗೇಲ್ ಯಾವ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬ ಸುಳಿವು ನೀಡಿದ ಕೋಚ್ ಜಾಫರ್ಐಪಿಎಲ್ 2021: ಗೇಲ್ ಯಾವ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬ ಸುಳಿವು ನೀಡಿದ ಕೋಚ್ ಜಾಫರ್

ದೇವದತ್ ಪಡಿಕ್ಕಲ್ ಮಾರ್ಚ್ 22ರಂದು ಕೊರೊನಾ ವೈರಸ್‌ಗೆ ತುತ್ತಾಗಿದ್ದರು. ಸದ್ಯ ಅವರು ಕೊರೊನಾ ವೈರಸ್‌ನಿಂದ ಮುಕ್ತರಾಗಿದ್ದಾರೆ, ಆದರೂ ಇನ್ನು ಕೂಡ ಆರ್‌ಸಿಬಿ ಬಯೋಬಬಲ್‌ಗೆ ಸೇರ್ಪಡೆಯಾಗಿಲ್ಲ. ಈ ಸಂದರ್ಭದಲ್ಲಿ ತನಗೆ ಕ್ರಿಕೆಟ್‌ನಲ್ಲಿ ಸ್ಫೂರ್ತಿ ಯಾರು ಎಂಬುದರ ಬಗ್ಗೆ ಪಡಿಕ್ಕಲ್ ಮಾತನಾಡಿದ್ದಾರೆ.

"ನನಗೆ ಕೇವಲ ಒಬ್ಬರು ಕ್ರಿಕೆಟ್‌ಗೆ ಸ್ಫೂರ್ತಿಯನ್ನು ನೀಡಿಲ್ಲ. ಪ್ರತಿಯೊಬ್ಬ ವ್ಯಕ್ತಿಯ ಹಿಂದೆಯೂ ವಿಭಿನ್ನವಾದ ಕಥೆಗಳು ಇವೆ. ಪ್ರತಿಯೊಬ್ಬರು ಆ ಸ್ಥಾನಕ್ಕೆ ತಲುಪಲು ಜೀವನದಲ್ಲಿ ಸಾಕಷ್ಟು ವಿಶೇಷವಾಗಿರುವುದನ್ನು ಮಾಡಿದ್ದಾರೆ. ಹಾಗಾಗಿ ಭಾರತಕ್ಕಾಗಿ ಆಡಿದ ಪ್ರತಿಯೊಬ್ಬ ಆಟಗಾರನಿಂದಲೂ ಸ್ಫೂರ್ತಿಯನ್ನು ಪಡೆದುಕೊಳ್ಳುತ್ತೇನೆ. ಆದರೆ ನನ್ನ ರೋಲ್ ಮಾಡೆಲ್ ಗೌತಮ್ ಗಂಭೀರ್" ಎಂದು ಪಡಿಕ್ಕಲ್ ಹೇಳಿಕೊಂಡಿದ್ದಾರೆ.

ವಾಂಖೆಡೆ ಸ್ಟೇಡಿಯಂನಲ್ಲಿ ಕೊರೊನಾ ಪ್ರಕರಣಗಳು ಮತ್ತೂ ಏರಿಕೆವಾಂಖೆಡೆ ಸ್ಟೇಡಿಯಂನಲ್ಲಿ ಕೊರೊನಾ ಪ್ರಕರಣಗಳು ಮತ್ತೂ ಏರಿಕೆ

"ನಾನು ಗೌತಮ್ ಗಂಭೀರ್ ಅವರ ಬ್ಯಾಟಿಂಗ್‌ಅನ್ನು ನೋಡಿಕೊಂಡು ಬೆಳೆದಿದ್ದೇನೆ. ಅವರ ಬ್ಯಾಟಿಂಗ್‌ಅನ್ನು ನಾನು ಈಗಲೂ ಆನಂದಿಸುತ್ತೇನೆ. ಗಂಭೀರ್ ನನ್ನ ಕ್ರಿಕೆಟ್‌ನ ರೋಲ್ ಮಾಡಲ್" ಎಂದು ದೇವದತ್ ಪಡಿಕ್ಕಲ್ ಟೈಮ್ಸ್ ಆಫ್ ಇಂಡಿಯಾ ಜೊತೆಗೆ ಮಾತನಾಡುತ್ತಾ ತಿಳಿಸಿದ್ದಾರೆ.

Story first published: Tuesday, April 6, 2021, 18:02 [IST]
Other articles published on Apr 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X