ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಡಿಕ್ಕಲ್ ಅಬ್ಬರದ ಶತಕಕ್ಕೆ 10 ವರ್ಷದ ಈ ಹಳೆಯ ದಾಖಲೆ ಧ್ವಂಸ

IPL 2021 : Devdutt Padikkal scored the fastest IPL century as an uncapped player

ದೇವದತ್ ಪಡಿಕ್ಕಲ್ 2020ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿರುವ ಈ ಅನ್ ಕ್ಯಾಪ್ಡ್ ಆಟಗಾರ ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವುದರ ಮೂಲಕ 473 ರನ್ ಗಳಿಸಿ ಟೂರ್ನಿಯಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ 8ನೇ ಸ್ಥಾನ ಪಡೆದುಕೊಂಡಿದ್ದರು. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿಯೂ ಮಿಂಚಲು ತಯಾರಾಗಿದ್ದ ದೇವದತ್ ಪಡಿಕ್ಕಲ್ ಆರಂಭದಲ್ಲಿಯೇ ಕೊರೊನಾ ವೈರಸ್ ಕಾರಣದಿಂದಾಗಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು.

ನಂತರದ ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ದೇವದತ್ ಪಡಿಕ್ಕಲ್ ಸೇರಿಕೊಂಡರೂ ಸಹ ಗಮನಾರ್ಹ ಆಟವನ್ನೇನೂ ಆಡಲಿಲ್ಲ. ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ 11 ರನ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ 25 ರನ್ ಗಳಿಸಿ ಔಟಾಗಿದ್ದ ದೇವದತ್ ಪಡಿಕ್ಕಲ್ ಟೂರ್ನಿಯಲ್ಲಿ ತಾವು ಆಡಿದ ಮೂರನೇ ಪಂದ್ಯದಲ್ಲಿ ಭರ್ಜರಿಯಾಗಿ ಯಶಸ್ಸಿನ ಹಾದಿಗೆ ಮರಳಿದ್ದಾರೆ. ಗುರುವಾರ ( ಏಪ್ರಿಲ್ 22 ) ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಪಡಿಕ್ಕಲ್ 52 ಎಸೆತಗಳಿಗೆ ಅಜೇಯ 101 ರನ್ ಗಳಿಸಿದರು, ಪಡಿಕ್ಕಲ್ ಅವರ ಈ ಭರ್ಜರಿ ಶತಕದಲ್ಲಿ 11 ಬೌಂಡರಿ ಮತ್ತು 6 ಸಿಕ್ಸರ್ ಸಹ ಒಳಗೊಂಡಿದ್ದವು. ಪಡಿಕ್ಕಲ್ ಐಪಿಎಲ್ ಇತಿಹಾಸದಲ್ಲಿ ಚೊಚ್ಚಲ ಶತಕ ಸಿಡಿಸುವ ಮೂಲಕ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ಅತಿವೇಗವಾಗಿ ಶತಕ ಬಾರಿಸಿದ ಅನ್ ಕ್ಯಾಪ್ಡ್ ಆಟಗಾರ ( ರಾಷ್ಟ್ರೀಯ ತಂಡದ ಪರ ಆಡದೇ ಇರುವ ಆಟಗಾರ ) ಎಂಬ ದಾಖಲೆ ದೇವದತ್ ಪಡಿಕ್ಕಲ್ ಅವರ ಹೆಸರಿಗೆ ಸೇರಿಕೊಂಡಿದೆ.

ದೇವದತ್ ಪಡಿಕ್ಕಲ್ 51 ಎಸೆತಗಳಲ್ಲಿ ಅನ್ ಕ್ಯಾಪ್ಡ್ ಆಟಗಾರರ ಪೈಕಿ ವೇಗದ ಶತಕವನ್ನು ಬಾರಿಸಿದರು. ಇದಕ್ಕೂ ಮುನ್ನ ಐಪಿಎಲ್ ಇತಿಹಾಸದಲ್ಲಿ ಒಟ್ಟು 3 ಅನ್ ಕ್ಯಾಪ್ಡ್ ಆಟಗಾರರು ಶತಕಗಳನ್ನು ಬಾರಿಸಿದ್ದರು. ಆ ಆಟಗಾರರಲ್ಲಿ ಪೌಲ್ ವಲ್ತಾಟಿ 2011ರ ಐಪಿಎಲ್ ಟೂರ್ನಿಯಲ್ಲಿ 52 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಅತಿವೇಗವಾಗಿ ಶತಕ ಬಾರಿಸಿದ ಅನ್ ಕ್ಯಾಪ್ಡ್ ಆಟಗಾರ ಎನಿಸಿಕೊಂಡಿದ್ದರು. ಇದೀಗ ಈ ದಾಖಲೆಯನ್ನು ಹತ್ತು ವರ್ಷಗಳ ಬಳಿಕ ಪಡಿಕ್ಕಲ್ ಮುರಿದು ಹಾಕಿದ್ದು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಪಡಿಕ್ಕಲ್ ಹಾಗೂ ಪೌಲ್ ವಲ್ತಾಟಿ ಮಾತ್ರವಲ್ಲದೆ ಅನ್ ಕ್ಯಾಪ್ಡ್ ಆಟಗಾರರಾಗಿದ್ದ ಶಾನ್ ಮಾರ್ಷ್ 2008ರಲ್ಲಿ 58 ಎಸೆತಗಳಿಗೆ ಮತ್ತು ಮನೀಷ್ ಪಾಂಡೆ 2009ರಲ್ಲಿ 67 ಎಸೆತಗಳಿಗೆ ಶತಕ ಬಾರಿಸಿದ್ದರು.

ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ದಾಖಲೆಯ ಆಟವನ್ನಾಡಿರುವ ಪಡಿಕ್ಕಲ್ ಭಾನುವಾರ ( ಏಪ್ರಿಲ್ 25 ) ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಯಾವ ರೀತಿ ಆಟವಾಡುತ್ತಾರೋ ಕಾದು ನೋಡಬೇಕು.

Story first published: Friday, April 23, 2021, 14:38 [IST]
Other articles published on Apr 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X