ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ದೇವದತ್ ಪಡಿಕ್ಕಲ್ ಕೊರೊನಾ ವರದಿ ನೆಗೆಟಿವ್, ಶೀಘ್ರವೇ ತಂಡಕ್ಕೆ ಸೇರ್ಪಡೆ

IPL 2021: Devdutt Padikkal Tests Negative For Coronavirus, Likely to Join RCB Bio-Bubble soon
Devdutt Padikkal ಅವರ ನೆಚ್ಚಿನ ಆಟಗಾರ ಯಾರು ಗೊತ್ತಾ | Oneindia Kannada

ಆರ್‌ಸಿಬಿ ಅಭಿಮಾನಿಗಳು ಸಂತಸ ಪಡುವ ಸುದ್ದಿ ಈಗ ಹೊರಬಿದ್ದಿದೆ. ಕೊರೊನಾ ವೈರಸ್‌ಗೆ ತುತ್ತಾಗಿದ್ದ ದೇವದತ್ ಪಡಿಕ್ಕಲ್ ಈಗ ಸಂಪೂರ್ಣವಾಗಿ ಕೊರೊನಾ ವೈರಸ್‌ನಿಂದ ಮುಕ್ತರಾಗಿದ್ದಾರೆ. ಅವರ ವರದಿಯಲ್ಲಿ ನೆಗೆಟಿವ್ ಬಂದಿದ್ದು ಶೀಘ್ರದಲ್ಲಿಯೇ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಆರ್‌ಸಿಬಿ ತಂಡದ ಯುವ ಆಟಗಾರ ಕೊರೊನಾ ವೈರಸ್‌ಗೆ ತುತ್ತಾಗಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿತ್ತು. ಭಾನುವಾರ ಈ ವಿಚಾರ ಮಾಧ್ಯಮಗಳಲ್ಲಿ ಬಹಿರಂಗಗೊಂಡಿದ್ದು ಬಳಿಕ ಈ ವರದಿಗೆ ಫ್ರಾಂಚೈಸಿ ಸ್ಪಷ್ಟನೆಯನ್ನು ನೀಡಿತ್ತು. ಪಡಿಕ್ಕಲ್ ಕೊರೊನಾವೈರಸ್‌ಗೆ ತುತ್ತಾಗಿರುವುದು ನಿಜ. ಆದರೆ ಮಾರ್ಚ್ 22 ರಂದು ಅವರು ಕೊರೊನಾಗೆ ತುತ್ತಾಗಿದ್ದಾರೆ ಎಂದು ವಿವರಣೆ ನೀಡಿತ್ತು.

ಮುಂಬೈ ವಿರುದ್ಧದ ಪಂದ್ಯಕ್ಕೆ ಆರ್‌ಸಿಬಿ ಪ್ಲೇಯಿಂಗ್ XI ಹೆಸರಿಸಿದ ಚೋಪ್ರಾಮುಂಬೈ ವಿರುದ್ಧದ ಪಂದ್ಯಕ್ಕೆ ಆರ್‌ಸಿಬಿ ಪ್ಲೇಯಿಂಗ್ XI ಹೆಸರಿಸಿದ ಚೋಪ್ರಾ

ಇದೀಗ ದೇವದತ್ ಕೊರೊನಾ ವೈರಸ್‌ನಿಂದ ಸಂಪೂರ್ಣವಾಗಿ ಮುಕ್ತರಾಗಿದ್ದಾರೆ ಎಂದು ಸ್ಪಷ್ಟವಾಗಿದೆ. ಆದರೆ ಪಡಿಕ್ಕಲ್ ಮುಂಬೈ ಇಂಡಿಯನ್ಸ್ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಆರಂಭಿಕನಾಗಿ ಆರ್‌ಸಿಬಿ ಪರವಾಗಿ ಕಣಕ್ಕಿಳಿಯಲಿದ್ದಾರಾ ಎಂಬುದು ಇನ್ನೂ ಅಧಿಕೃತವಾಗಿ ಮಾಹಿತಿ ಲಭ್ಯವಾಗಿಲ್ಲ.

ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನ ಕೊರೊನಾ ವೈರಸ್ ಸಾಕಷ್ಟು ಆತಂಕವನ್ನು ಮೂಡಿಸುತ್ತಿದೆ. ಮೊದಲಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ನಿತೀಶ್ ರಾಣಾ ಕೊರೊನಾ ವೈರಸ್‌ಗೆ ತುತ್ತಾಗಿದ್ದ ಸಂಗತಿ ಬಹಿರಂಗವಾಗಿತ್ತು. ಅದಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಲ್‌ರೌಂಡರ್ ಅಕ್ಷರ್ ಪಟೇಲ್ ಕೂಡ ಕೋವಿಡ್‌ಗೆ ತುತ್ತಾಗಿರುವುದು ಬೆಳಕಿಗೆ ಬಂದಿತ್ತು.

ಐಪಿಎಲ್‌ನಿಂದ ಹೊರಗುಳಿದರೂ ಶ್ರೇಯಸ್ ಐಯ್ಯರ್‌ಗೆ ದೊರೆಯಲಿದೆ ಸಂಪೂರ್ಣ 7 ಕೋಟಿ ಸಂಬಳಐಪಿಎಲ್‌ನಿಂದ ಹೊರಗುಳಿದರೂ ಶ್ರೇಯಸ್ ಐಯ್ಯರ್‌ಗೆ ದೊರೆಯಲಿದೆ ಸಂಪೂರ್ಣ 7 ಕೋಟಿ ಸಂಬಳ

ನಿತೀಶ್ ರಾಣಾ ಹಾಗೂ ಅಕ್ಷರ್ ಪಟೇಲ್ ಇಬ್ಬರೂ ತಂಡದಿಂದ ಪ್ರತ್ಯೇಕವಾಗಿದ್ದು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ನೆಗೆಟಿವ್ ವರದಿ ಬಂದ ಬಳಿಕ ಈ ಆಟಗಾರರು ಕೂಡ ತಂಡವನ್ನು ಕೂಡಿಕೊಳ್ಳಲಿದ್ದು ಅಭ್ಯಾಸವನ್ನು ಪಡೆಸಲಿದ್ದಾರೆ.

Story first published: Tuesday, April 6, 2021, 10:20 [IST]
Other articles published on Apr 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X