ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಮತ್ತೆ ಅಬ್ಬರಿಸಲು ಸಿದ್ಧ ಎಂದು ಘೋಷಿಸಿದ ದೇವದತ್ ಪಡಿಕ್ಕಲ್

IPL 2021: Devdutt Padikkal wants to carry with his domestic form for RCB

ಕಳೆದ ಬಾರಿಯ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಆಡುವ ಅವಕಾಶ ಗಳಿಸಿಕೊಂಡಿದ್ದ ದೇವದತ್ ಪಡಿಕ್ಕಲ್ ಸಿಕ್ಕ ಅವಕಾಶವನ್ನು ಎರಡು ಕೈಗಳಿಂದಲೂ ಬಾಚಿಕೊಂಡಿದ್ದರು. ಬಳಿಕ ಇತ್ತೀಚೆಗೆ ಅಂತ್ಯವಾದ ದೇಶೀಯ ಕ್ರಿಕೆಟ್‌ನಲ್ಲಿಯೂ ಪಡಿಕ್ಕಲ್ ಅತ್ಯುದ್ಭುತವಾದ ಪ್ರದರ್ಶನ ನೀಡಿದ್ದರು. ಈಗ ಮತ್ತೊಮ್ಮೆ ಐಪಿಎಲ್‌ಗೆ ಸಿದ್ಧವಾಗಿರುವ ಪಡಿಕ್ಕಲ್ ಈ ಫಾರ್ಮ್‌ಅನ್ನು ಮುಂದುವರಿಸುವ ಬಯಕೆ ವ್ಯಕ್ತಪಡಿಸಿದ್ದಾರೆ.

ಐಪಿಎಲ್ ಆರಂಭಕ್ಕೆ ಕೆಲವೇ ದಿನಗಳಿರುವಾಗ ಪಡಿಕ್ಕಲ್ ಕೊರೊನಾ ವೈರಸ್‌ಗೆ ತುತ್ತಾಗಿದ್ದರು. ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದರೂ ಮೊದಲ ಪಂದ್ಯದಲ್ಲಿ ಪಡಿಕ್ಕಲ್ ಆಡುವ ಬಳಗದಿಂದ ಹೊರಗುಳಿದಿದ್ದರು. ಈಗ ಮತ್ತೆ ಆರ್‌ಸಿಬಿ ತಂಡದ ಪರವಾಗಿ ಕಣಕ್ಕಿಳಿಯಲು ಅವರು ಸಜ್ಜಾಗಿದ್ದಾರೆ.

ಐಪಿಎಲ್ 2021: ಕೊಲ್ಕತ್ತಾ ವಿರುದ್ಧದ ಸೋಲಿಗೆ ಕಾರಣ ಹೇಳಿದ ಡೇವಿಡ್ ವಾರ್ನರ್ಐಪಿಎಲ್ 2021: ಕೊಲ್ಕತ್ತಾ ವಿರುದ್ಧದ ಸೋಲಿಗೆ ಕಾರಣ ಹೇಳಿದ ಡೇವಿಡ್ ವಾರ್ನರ್

"ಕೊರೊನಾ ವೈರಸ್ ಹಿನ್ನಡೆಯುಂಟು ಮಾಡಿತು. ವೈರಸ್‌ಗೆ ತುತ್ತಾಗಬಾರದು ಎಂದು ನಾನು ಬಯಸಿದ್ದೆ. ಆದರೆ ಅದು ನನ್ನ ನಿಯಂತ್ರಣದಲ್ಲಿರಲಿಲ್ಲ. ಇದ್ದದ್ದನ್ನು ಇದ್ದ ಹಾಗೆ ಒಪ್ಪಿಕೊಳ್ಳಬೇಕಿತ್ತು. ಹಾಗಾಗಿ ನನಗೆ ಅವಕಾಶ ದೊರೆಯುವ ವೇಳೆಗೆ ನನ್ನನ್ನು ಸಿದ್ಧವಾಗಿರುವಂತೆ ನೋಡಿಕೊಳ್ಳಬೇಕಿದೆ" ಎಂದು ಪಡಿಕ್ಕಲ್ ಆರ್‌ಸಿಬಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಹೇಳಿದ್ದಾರೆ.

"ಈಗ ನಾನು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ. ಅದಕ್ಕೂ ಹೆಚ್ಚಾಗಿ ನಾನು ಸುತ್ತಲೂ ಓಡಾಡಬಹುದು. ನಾನು ಎಸೆತಗಳಿಗೆ ಪ್ರತಿಕ್ರಿಯಿಸಬಹುದು ಅದು ಮುಖ್ಯವಾದ ಸಂಗತಿ. ಐಪಿಎಲ್‌ನಲ್ಲಿ ನೀವು ಯಾವಾಗಲೂ ಸಿದ್ಧರಾಗಿರಬೇಕು, ನೀವು ಯಾವಾಗಲೂ ಎಲ್ಲಾ ಪರಿಸ್ಥಿತಿಯಲ್ಲಿಯೂ 100 ಶೇಕಡಾ ಪ್ರಯತ್ನವನ್ನು ನೀಡಬೇಕು. ಇಲ್ಲವಾದಲ್ಲಿ ನಿಮ್ಮನ್ನು ನೀವು ಮುಂದಕ್ಕೆ ತಳ್ಳಲು ಸಾಧ್ಯವಿಲ್ಲ" ಎಂದಿದ್ದಾರೆ ದೇವದತ್ ಪಡಿಕ್ಕಲ್.

ಐಪಿಎಲ್ 2021: ಹೈದರಾಬಾದ್ ವಿರುದ್ಧ 10 ರನ್‌ಗಳ ಗೆಲುವು ಸಾಧಿಸಿದ ಕೊಲ್ಕತ್ತಾಐಪಿಎಲ್ 2021: ಹೈದರಾಬಾದ್ ವಿರುದ್ಧ 10 ರನ್‌ಗಳ ಗೆಲುವು ಸಾಧಿಸಿದ ಕೊಲ್ಕತ್ತಾ

20ರ ಹರೆಯದ ದೇವದತ್ ಪಡಿಕ್ಕಲ್ ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ಪರವಾಗಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರನಾಗಿದ್ದರು. 15 ಪಂದ್ಯಗಳಿಂದ ಅವರು 473 ರನ್‌ಗಳಿಸಿದ್ದರು. ಇದರಲ್ಲಿ ಐದು ಅರ್ಧ ಶತಕವನ್ನು ಗಳಿಸಿದ್ದರು. ಇದು ಅವರ ಚೊಚ್ಚಲ ಐಪಿಎಲ್ ಆವೃತ್ತಿಯಾಗಿತ್ತು. ಇದೇ ಫಾರ್ಮ್‌ಅನ್ನು ಅವರು ಸಯ್ಯದ್ ಮುಶ್ತಾಕ್ ಅಲಿ ಟೂರ್ನಿಯಲ್ಲಿ ಹಾಗೂ ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂದುವರಿಸಿದ್ದರು.

Story first published: Monday, April 12, 2021, 16:25 [IST]
Other articles published on Apr 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X