ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಕೆಕೆಆರ್‌ ಬ್ಯಾಟ್ಸ್‌ಮನ್‌ ದಿನೇಶ್ ಕಾರ್ತಿಕ್‌ಗೆ ದಂಡ

IPL 2021: Dinesh Karthik reprimanded for breaching code of conduct

ಶಾರ್ಜಾ: ಕೋಲ್ಕತ್ತಾ ನೈಟ್ ರೈಡರ್ಸ್ ಮಾಜಿ ನಾಯಕ, ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್‌ಗೆ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ನಿಯಮ ಮೀರಿದ್ದಕ್ಕಾಗಿ ದಂಡ ವಿಧಿಸಲಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನಡುವಿನ ಐಪಿಎಲ್ ಕ್ವಾಲಿಫೈಯರ್ ಪಂದ್ಯದಲ್ಲಿ ನಿಯಮ ಮೀರಿ ವರ್ತಿಸಿದ್ದಕ್ಕಾಗಿ ಕಾರ್ತಿಕ್‌ಗೆ ದಂಡ ವಿಧಿಸಲಾಗಿದೆ.

ಐಪಿಎಲ್ 2021: ಎಲಿಮಿನೇಟರ್ ಪಂದ್ಯದ ಸೋಲಿನ ನಂತರ ಭಾವನಾತ್ಮಕ ಪೋಸ್ಟ್ ಹಾಕಿದ ಮ್ಯಾಕ್ಸ್‌ವೆಲ್ಐಪಿಎಲ್ 2021: ಎಲಿಮಿನೇಟರ್ ಪಂದ್ಯದ ಸೋಲಿನ ನಂತರ ಭಾವನಾತ್ಮಕ ಪೋಸ್ಟ್ ಹಾಕಿದ ಮ್ಯಾಕ್ಸ್‌ವೆಲ್

ಬುಧವಾರ (ಅಕ್ಟೋಬರ್‌ 14) ಶಾರ್ಜಾ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಕ್ವಾಲಿಫೈಯರ್-2 ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಾದಾಡಿದ್ದವು. ಈ ಪಂದ್ಯದಲ್ಲಿ ಕೋಲ್ಕತ್ತಾ 3 ವಿಕೆಟ್‌ ಜಯದೊಂದಿಗೆ ಫೈನಲ್‌ಗೆ ಪ್ರವೇಶಿಸಿದೆ.

"ಐಪಿಎಲ್‌ನ 2.2 ಮಟ್ಟದ ನಿಯಮವನ್ನು ದಿನೇಶ್ ಕಾರ್ತಿ ಮೀರಿ ನಡೆದುಕೊಂಡಿದ್ದಾರೆ ಮತ್ತು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಲೆವೆನ್ 1ರ ನಿಯಮದ ಪ್ರಕಾರ, ಅಂಪೈರ್ ನಿರ್ಧಾರವೇ ಅಂತಿಮ ಎಂಬ ನಿಯಮವನ್ನು ಕಾರ್ತಿಕ್ ಉಲ್ಲಂಘಿಸಿದ್ದಾರೆ," ಎಂದು ಐಪಿಎಲ್ ತನ್ನ ಹೇಳಿಕೆಯ ಮೂಲಕ ತಿಳಿಸಿದೆ.

ಆರ್‌ಸಿಬಿ ನಾಯಕನಾಗಿ ಕೊಹ್ಲಿ ವಿದಾಯ ರಾತ್ರಿಯ ಚಿತ್ರಗಳನ್ನು ಹಂಚಿಕೊಂಡ ಧನಶ್ರೀಆರ್‌ಸಿಬಿ ನಾಯಕನಾಗಿ ಕೊಹ್ಲಿ ವಿದಾಯ ರಾತ್ರಿಯ ಚಿತ್ರಗಳನ್ನು ಹಂಚಿಕೊಂಡ ಧನಶ್ರೀ

5ನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಂದಿದ್ದ ಕಾರ್ತಿಕ್, ಕಾಗಿಸೋ ರಬಾಡ ಅವರ 17.6ನೇ ಓವರ್‌ನಲ್ಲಿ ಬೌಲ್ಡ್ ಆಗಿ 0 ರನ್‌ಗೆ ನಿರ್ಗಮಿಸಿದರು. ಈ ವೇಳೆ ಹರಾಶೆಯಿಂದ ಕಾರ್ತಿಕ್ ವಿಕೆಟ್‌ಗೆ ಬ್ಯಾಟ್‌ನಿಂದ ಬಡಿದಿದ್ದರು. ಅಲ್ಲದೆ, ಶಿಮ್ರನ್ ಹೆಟ್ಮೈಯರ್ ಔಟ್ ಆಗಿ ಮೈದಾನದಿಂದ ಹೊರ ನಡೆದು ನೋ ಬಾಲ್‌ ತೀರ್ಪಿನಿಂದ ಬ್ಯಾಟಿಂಗ್‌ಗೆ ವಾಪಸ್ ಬಂದಾಗಲೂ ವಿವಾದ ಕಾಣಿಸಿತ್ತು.

ಬುಧವಾರದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್, ಪೃಥ್ವಿ ಶಾ 18, ಶಿಖರ್ ಧವನ್ 36, ಶ್ರೇಯಸ್ ಅಯ್ಯರ್ 30, ರಿಷಭ್ ಪಂತ್ 6, ಮಾರ್ಕಸ್ ಸ್ಟೋಯಿನಿಸ್ 18, ಶಿಮ್ರಾನ್ ಹೆಟ್ಮೈರ್ 17, ಅಕ್ಸರ್ ಪಟೇಲ್ 4 ರನ್‌ನೊಂದಿಗೆ 20 ಓವರ್‌ಗೆ 5 ವಿಕೆಟ್ ಕಳೆದು 135 ರನ್ ಗಳಿಸಿತು.

ರನ್ ಬಾರಿಸಲಾಗದ ಆತನ ಅವಶ್ಯಕತೆ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿಗೆ ಇಲ್ಲ: ಬ್ರಿಯಾನ್ ಲಾರಾರನ್ ಬಾರಿಸಲಾಗದ ಆತನ ಅವಶ್ಯಕತೆ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿಗೆ ಇಲ್ಲ: ಬ್ರಿಯಾನ್ ಲಾರಾ

ಟೀಮ್ ಇಂಡಿಯಾ ಹೊಸ ಜರ್ಸಿ ಅನಾವರಣ:ನಿಮ್ಗೂ ಇದೆ ಧರಿಸೋ ಅವಕಾಶ | Oneindia Kannada

ಗುರಿ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್, ಶುಬ್ಮನ್ ಗಿಲ್ 46, ವೆಂಕಟೇಶ್ ಅಯ್ಯರ್ 55, ರಾಹುಲ್ ತ್ರಿಪಾಠಿ 12, ನಿತೀಶ್ ರಾಣಾ 13 ರನ್‌ನೊಂದಿಗೆ 19.5 ಓವರ್‌ಗೆ 7 ವಿಕೆಟ್ ಕಳೆದು 136 ರನ್ ಗಳಿಸಿತು. ಐಪಿಎಲ್ ಆರಂಭಿಕ 7 ಪಂದ್ಯಗಳ ಬಳಿಕ ಅಂಕಪಟ್ಟಿಯಲ್ಲಿ ತಳ ಸೇರಿದ್ದ ತಂಡ ಆ ಬಳಿಕ ಫೈನಲ್‌ವರೆಗಿನ ಸಾಧನೆ ಮಾಡಿರುವ ಕೆಕೆಆರ್ ವಿಶೇಷ ದಾಖಲೆಗೆ ಕಾರಣವಾಗಿದೆ.

Story first published: Thursday, October 14, 2021, 13:16 [IST]
Other articles published on Oct 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X