ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಿನೇಶ್ ಕಾರ್ತಿಕ್ ನನಗೆ ಸಂಪೂರ್ಣ ಬೆಂಬಲವನ್ನು ನೀಡುತ್ತಿದ್ದಾರೆ: ಇಯಾನ್ ಮಾರ್ಗನ್

IPL 2021: DK offers a huge amount of support to me: KKR skipper Eoin Morgan

ಕೊಲ್ಕತ್ತಾ ನೈಟ್ ರೈಡರ್ಸ್ ಭಾನುವಾರ ಐಪಿಎಲ್ 14ನೇ ಆವೃತ್ತಿಯ ಮೊದಲ ಪಂದ್ಯವನ್ನು ಆಡಲು ಇಳಿದಿದೆ. ಆದರೆ ಈ ಪಂದ್ಯದ ಆರಂಭಕ್ಕೂ ಮುನ್ನ ಕೆಕೆಆರ್ ತಂಡದ ನಾಯಕ ಇಯಾನ್ ಮಾರ್ಗನ್ ಮಾಝಿ ನಾಯಕ ಹಾಲಿ ಉಪ ನಾಯಕ ದಿನೇಶ್ ಕಾರ್ತಿಕ್ ಬೆಂಬಲವನ್ನು ಪ್ರಶಂಸಿಸಿದ್ದಾರೆ.

"ದಿನೇಶ್ ಕಾರ್ತಿಕ್ ವಿಕೆಟ್ ಕೀಪಿಂಗ್ ಹಾಗೂ ಬ್ಯಾಟಿಂಗ್ ಮೂಲಕ ಸಾಕಷ್ಟು ಬೆಂಬಲವನ್ನು ನೀಡುತ್ತಿದ್ದಾರೆ. ಅವರು ಇತ್ತಮ ಫಾರ್ಮ್‌ನಲ್ಲಿದ್ದರು. ಆತ ಯಾವಾಗಲೂ ಬ್ಯಾಟ್ ಮೂಲಕ ಅಭ್ಯಾಸವನ್ನು ನಡೆಸುತ್ತಲೇ ಇರುತ್ತಾರೆ. ಚೆಂಡನ್ನು ಅದ್ಭುತವಾದ ಸಮಯದೊಂದಿಗೆ ಬಾರಿಸುತ್ತಿದ್ದಾರೆ" ಎಂದು ಇಯಾನ್ ಮಾರ್ಗನ್ ಹೇಳಿದ್ದಾರೆ.

ಒಂದೇ ಪಂದ್ಯದಲ್ಲಿ ರೋಹಿತ್ ಮತ್ತು ವಾರ್ನರ್‌ ದಾಖಲೆಯನ್ನು ಸರಿಗಟ್ಟಿದ ಧವನ್ಒಂದೇ ಪಂದ್ಯದಲ್ಲಿ ರೋಹಿತ್ ಮತ್ತು ವಾರ್ನರ್‌ ದಾಖಲೆಯನ್ನು ಸರಿಗಟ್ಟಿದ ಧವನ್

"ದಿನೇಶ್ ಕಾರ್ತಿಕ್ ಅಂಗಳದ ಒಳಗೆ ಅಥವಾ ಆಚೆ ದೊಡ್ಡ ಮಟ್ಟದಲ್ಲಿ ನನಗೆ ಬೆಂಬಲವನ್ನು ನೀಡುತ್ತಿದ್ದಾರೆ. ಆತ ಫಾರ್ಮ್‌ನಲ್ಲಿರುವುದು ಹಾಗೂ ನಮ್ಮ ತಂಡದ ಸದಸ್ಯನಾಗಿರುವುದಕ್ಕೆ ನಾವು ಹೆಮ್ಮೆ ಪಡುತ್ತೇವೆ" ಎಂದು ಉಪನಾಯಕನ ಬಗ್ಗೆ ನಾಯಕ ಇಯಾನ್ ಮಾರ್ಗನ್ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ.

ದಿನೇಶ್ ಕಾರ್ತಿಕ್ 2020ರ ಐಪಿಎಲ್ ಟೂರ್ನಿಯ ಮೊದಲಾರ್ಧದವರೆಗೆ ತಂಡದ ನಾಯಕರಾಗಿದ್ದರು. ಆದರೆ ತಂಡದಿಂದ ಹೇಳಿಕೊಳ್ಳುವಂತಾ ಪ್ರದರ್ಶನ ಬಂದಿರಲಿಲ್ಲ. ಹೀಗಾಗಿ ದ್ವಿತೀಯಾರ್ಧಕ್ಕೂ ಮುನ್ನ ದಿನೇಶ್ ಕಾರ್ತಿಕ್ ನಾಯಕತ್ವದಿಂದ ಹೊರ ಬರುವ ನಿರ್ಧಾರವನ್ನು ತೆಗೆದುಕೊಂಡಿದ್ದರು. ಬಳಿಕ ಇಯಾನ್ ಮಾರ್ಗನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕತ್ವದ ಜವಾಬ್ಧಾರಿ ವಹಿಸಿಕೊಂಡರು.

ನಾಯಕತ್ವ ಬದಲಾದರೂ ಕಳೆದ ಆವೃತ್ತಿಯಲ್ಲಿ ಕೊಲ್ಕತ್ತಾ ತಂಡದ ಪ್ರದರ್ಶನದಲ್ಲಿ ಹೇಳಿಕೊಳ್ಳುವಂತಾ ಬದಲಾವಣೆಗಳು ಆಗಿರಲಿಲ್ಲ. ಟೂರ್ನಿಯಲ್ಲಿ ಕೆಕೆಆರ್ ಪ್ಲೇಆಫ್ ಹಂತಕ್ಕೆ ತಲುಪಲು ವಿಫಲವಾಗಿತ್ತು. ಆದರೆ ಈ ಬಾರಿ ತಂಡದಲ್ಲಿ ಕೆಲ ಬದಲಾವಣೆಗಳು ಆಗಿದ್ದು ಯಾವ ರೀತಿಯ ಪ್ರದರ್ಶನ ಬರಲಿದೆ ಎಂಬುದು ಕುತೂಹಲ ಮೂಡಿಸಿದೆ.

Story first published: Sunday, April 11, 2021, 23:04 [IST]
Other articles published on Apr 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X