ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಪ್‌ ಗೆದ್ದರೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೋ ಗೊತ್ತಿಲ್ಲ: ಡಿ ವಿಲಿಯರ್ಸ್

IPL 2021: Dont know how we will react if we win trophy, says AB de Villiers

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಯಾವುದೇ ತಂಡಗಳಿಗೂ ತವರಿನಲ್ಲಿ ಪಂದ್ಯ ಇಲ್ಲದಿರುವುದು ಒಂದರ್ಥದಲ್ಲಿ ಪ್ರತೀ ತಂಡಗಳಿಗೂ ಅನುಕೂಲವಾಗಿದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿಕೆಟ್ ಕೀಪರ್, ದಕ್ಷಿಣ ಆಫ್ರಿಕಾ ಪ್ರಮುಖ ಬ್ಯಾಟ್ಸ್‌ಮನ್ ಎಬಿ ಡಿ ವಿಲಿಯರ್ಸ್ ಹೇಳಿದ್ದಾರೆ.

ಮುಂಬೈ vs ಹೈದರಾಬಾದ್ ಪಂದ್ಯದಲ್ಲಿ ಆಗಲಿರುವ ದಾಖಲೆಗಳ ಪಟ್ಟಿಮುಂಬೈ vs ಹೈದರಾಬಾದ್ ಪಂದ್ಯದಲ್ಲಿ ಆಗಲಿರುವ ದಾಖಲೆಗಳ ಪಟ್ಟಿ

ಕೊರೊನಾವೈರಸ್ ಕಾರಣದಿಂದಾಗಿ ಈ ಬಾರಿ ಕೇವಲ ಆರು ತಾಣಗಳಲ್ಲಿ ಐಪಿಎಲ್ 14ರ ಆವೃತ್ತಿಯ ಪಂದ್ಯಗಳನ್ನು ನಡೆಸಲು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಯೋಚಿಸಿತ್ತು. ಜೊತೆಗೆ ತವರಿನಲ್ಲಿ ಯಾವುದೇ ತಂಡಗಳಿಗೂ ಪಂದ್ಯ ನಡೆಸದಿರಲು ನಿರ್ಧರಿಸಿತ್ತು. ಇದರಿಂದಾಗಿ ಆರ್‌ಸಿಬಿಗೆ ಅನುಕೂಲವಾಗಿದೆ. ಕಪ್‌ ಗೆಲ್ಲುವ ಸಾಧ್ಯತೆಯೂ ಇದೆ ಎಂಬರ್ಥದಲ್ಲಿ ಎಬಿ ಡಿವಿಲಿಯರ್ಸ್ ಮಾತನಾಡಿದ್ದಾರೆ.

'ಯಾವುದೇ ತಂಡಗಳಿಗೂ ತವರು ತಾಣದಲ್ಲಿ ಪಂದ್ಯಗಳು ಇಲ್ಲದಿರುವುದು ಟೂರ್ನಿಗೆ ಒಂದು ಸಮತೋಲನ ನೀಡಿದೆ. ನಾವು ಟ್ರೋಫಿ ಗೆಲ್ಲೋದನ್ನು ನೀವು ಬಯಸಿದ್ದೀರಿ, ನಾವೂ ಟ್ರೋಫಿ ಗೆಲ್ಲೋದನ್ನು ಇಷ್ಟಪಡುತ್ತೇವೆ. ಒಂದು ದಿನ ಟ್ರೊಫಿ ಗೆದ್ದಾಗ ನಾವು ಹೇಗೆ ಪ್ರತಿಕ್ರಿಯಿಸುತ್ತೇನೋ ನನಗೆ ಗೊತ್ತಿಲ್ಲ,' ಎಂದು ಡಿ ವಿಲಿಯರ್ಸ್ ಹೇಳಿದ್ದಾರೆ.

ಮುಂಬೈಗಿಂತ ಚೆನ್ನೈ ಡೇಂಜರಸ್ ತಂಡ ಎನ್ನುತ್ತಿವೆ ಈ ಅಂಕಿ ಅಂಶಮುಂಬೈಗಿಂತ ಚೆನ್ನೈ ಡೇಂಜರಸ್ ತಂಡ ಎನ್ನುತ್ತಿವೆ ಈ ಅಂಕಿ ಅಂಶ

'ಟ್ರೋಫಿ ಗೆಲ್ಲೋದರ ಬಗ್ಗೆ ಮಾತನಾಡಲು ಬೋರ್ ಆಗುತ್ತದೆ. ಆದರೆ ಟ್ರೋಫಿ ಗೆದ್ದ ನಿಮಿಷ ನಿಮಗೆ ಟ್ರೋಫಿ ಗೆಲ್ಲೋದಕ್ಕಿಂತ ಇನ್ನೂ ಪ್ರಮುಖ ಬೇರೆ ಸಂಗತಿಗಳು ಮನವರಿಕೆಯಾಗುತ್ತದೆ,' ಎಂದು ಎಬಿಡಿ ವಿವರಿಸಿದ್ದಾರೆ. ಈ ಬಾರಿ ಟೂರ್ನಿಯ ಆರಂಭಿಕ ಎರಡೂ ಪಂದ್ಯಗಳನ್ನು ಗೆದ್ದಿರುವ ಕೊಹ್ಲಿ ಪಡೆ ಕಪ್‌ ಗೆಲ್ಲುವ ಹುಮ್ಮಸ್ಸಿನಲ್ಲಿದೆ.

Story first published: Saturday, April 17, 2021, 20:39 [IST]
Other articles published on Apr 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X