ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಉಳಿದ ಪಂದ್ಯಗಳಿಗೆ ಇಂಗ್ಲೆಂಡ್ ಆಟಗಾರರು ಲಭ್ಯ: ಖಚಿತಪಡಿಸಿದ ಬಿಸಿಸಿಐ

IPL 2021: England players will be available for the remainder of IPL season: BCCI confirms

ಬೆಂಗಳೂರು, ಆಗಸ್ಟ್ 3: ಈ ಬಾರಿಯ ಐಪಿಎಲ್‌ನ ಎರಡನೇ ಚರಣದ ಕ್ರೀಡಾಕೂಟಕ್ಕೆ ಇಂಗ್ಲೆಂಡ್ ಆಟಗಾರರು ಸಂಪೂರ್ಣವಾಗಿ ಅಲಭ್ಯವಾಗಲಿದ್ದಾರೆ ಎಂದೇ ಹೇಳಲಾಗಿತ್ತು. ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ಕೂಡ ಮತ್ತೊಮ್ಮೆ ಐಪಿಎಲ್‌ಗೋಸ್ಕರ ಆಟಗಾರರನ್ನು ಕಳುಹಿಸಲು ಸಾಧ್ಯವಿಲ್ಲ ಎಂಬರ್ಥದಲ್ಲಿಯೇ ಮಾತನಾಡಿತ್ತು. ಆದರೆ ಈಗ ಬಿಸಿಸಿಐ ಒತ್ತಡಕ್ಕೆ ಇಂಗ್ಲೆಂಡ್ ಮತ್ತು ವೇಲ್ಡ್ ಕ್ರಿಕೆಟ್ ಮಂಡಳಿ ಮಣಿದಂತೆ ಕಂಡು ಬರುತ್ತಿದೆ. ಈ ಬಾರಿಯ ಐಪಿಎಲ್ ಕ್ರೀಡಾಕೂಟದಲ್ಲಿ ಇಂಗ್ಲೆಂಡ್‌ನ ಆಟಗಾರರು ಭಾಗಿಯಾಗಲಿದ್ದಾರೆ ಎಂದು ಬಿಸಿಸಿಐ ಖಚಿತಪಡಿಸಿದೆ.

ಹೌದು, ಐಪಿಎಲ್‌ನ ಉಳಿದ ಪಂದ್ಯಗಳಲ್ಲಿ ಇಂಗ್ಲೆಂಡ್‌ನ ಆಟಗಾರರು ಪಾಲ್ಗೊಳ್ಳುವುದು ಖಚಿತವಾಗಿದೆ ಎಂದು ಬಿಸಿಸಿಐ ಅಧಿಕೃತವಾಗಿ ತಿಳಿಸಿದೆ. ಅಂತಾರಾಷ್ಟ್ರೀಯ ವೇಳಾಪಟ್ಟಿಯ ಕಾರಣದಿಂದಾಗಿ ಐಪಿಎಲ್‌ನ ಉಳಿದ ಪಂದ್ಯಗಳಲ್ಲಿ ಭಾಗಿಯಾಗುವುದು ಅಸಾಧ್ಯ ಎಂದು ಇಸಿಬಿ ತಿಳಿಸಿತ್ತು. ಆದರೆ ಅದರಲ್ಲಿ ಬದಲಾವಣೆ ಮಾಡಿಕೊಳ್ಳುವಂತೆ ಮನವೊಲಿಸುವಲ್ಲಿ ಬಿಸಿಸಿಐ ಯಶಸ್ವಿಯಾಗಿದ್ದು ಇಂಗ್ಲೆಂಡ್ ಆಟಗಾರರು ಐಪಿಎಲ್‌ನಲ್ಲಿ ಭಾಗಿಯಾಗಲು ಹಸಿರು ನಿಶಾನೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಭಾರತ vs ಇಂಗ್ಲೆಂಡ್: ಅಭ್ಯಾಸದ ವೇಳೆ ಗಾಯ, ಮೊದಲ ಪಂದ್ಯಕ್ಕೆ ಮಯಾಂಕ್ ಅಲಭ್ಯಭಾರತ vs ಇಂಗ್ಲೆಂಡ್: ಅಭ್ಯಾಸದ ವೇಳೆ ಗಾಯ, ಮೊದಲ ಪಂದ್ಯಕ್ಕೆ ಮಯಾಂಕ್ ಅಲಭ್ಯ

ಅಂತಾರಾಷ್ಟ್ರೀಯ ವೇಳಾಪಟ್ಟಿ ಅಡ್ಡಿ

ಅಂತಾರಾಷ್ಟ್ರೀಯ ವೇಳಾಪಟ್ಟಿ ಅಡ್ಡಿ

ಐಪಿಎಲ್‌ನ ಮೊದಲಾರ್ಧದ ಪಂದ್ಯಗಳು ಪೂರ್ಣವಾಗುತ್ತಿದ್ದಂತೆಯೇ ಕೊರೊನಾವೈರಸ್ ಕಾರಣದಿಂದಾಗಿ ಉಳಿದ ಪಂದ್ಯಗಳನ್ನು ಮುಂದೂಡಲಾಗಿತ್ತು. ಹೀಗಾಗಿ ದ್ವಿತೀಯಾರ್ಧದ ಪಂದ್ಯಗಳನ್ನು ಸೆಪ್ಟೆಂಬರ್ 19ರಿಂದ ಆಯೋಜನೆ ಮಾಡಲಾಗಿದೆ. ಈ ಪಂದ್ಯಗಳು ಯುಎಇನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಆದರೆ ಈ ಸಂದರ್ಭದಲ್ಲಿ ಮೊದಲೇ ಕೆಲ ಅಂತಾರಾಷ್ಟ್ರೀಯ ವೇಳಾಪಟ್ಟಿಗಳು ನಿಗದಿಯಾಗಿರುವ ಕಾರಣ ವಿದೇಶಿ ಆಟಗಾರರು ಪಾಲ್ಗೊಳ್ಳುವ ಬಗ್ಗೆ ಅನುಮಾನಗಳು ಇದ್ದವು.
ಅದರಲ್ಲೂ ಇಂಗ್ಲೆಂಡ್ ತಾನು ಈಗಾಗಲೇ ಒಂದು ಬಾರಿ ಐಪಿಎಲ್‌ಗೋಸ್ಕರ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದು ಮತ್ತೊಮ್ಮೆ ಐಪಿಎಲ್‌ಗೋಸ್ಕರ ಅಂತಾರಾಷ್ಟ್ರೀಯ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬಂತೆ ಪ್ರತಿಕ್ರಿಯಿಸಿತ್ತು. ಹೀಗಾಗಿ ಇಂಗ್ಲೆಂಡ್ ಆಟಗಾರರು ಈ ಬಾರಿಯ ಐಪಿಎಲ್‌ನ ಉಳಿದ ಪಂದ್ಯಗಳಿಗೆ ಅಲಭ್ಯವಾಗಲಿದ್ದಾರೆ ಎಂದೇ ಭಾವಿಸಲಾಗಿತ್ತು.

ಇಂಗ್ಲೆಂಡ್ vs ಬಾಂಗ್ಲಾದೇಶ ಸರಣಿ ಮುಂದೂಡಿಕೆ?

ಇಂಗ್ಲೆಂಡ್ vs ಬಾಂಗ್ಲಾದೇಶ ಸರಣಿ ಮುಂದೂಡಿಕೆ?

ಇಂಗ್ಲೆಂಡ್ ಆಟಗಾರರು ಐಪಿಎಲ್‌ನ ಉಳಿದ ಪಂದ್ಯಗಳಿಂದ ಹೊರಗುಳಿಯಲು ಕಾರಣ ಬಾಂಗ್ಲಾದೇಶದ ವಿರುದ್ಧ ಆಯೋಜನೆಯಾಗಿರುವ ಸರಣಿ. ಐಪಿಎಲ್ ಆಯೋಜನೆಯಾಗಿರುವ ಸೆಪ್ಟೆಂಬರ್ ಅಕ್ಟೋಬರ್ ತಿಂಗಳಲ್ಲಿಯೇ ಬಾಂಗ್ಲಾದೇಶ ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿ ಕೂಡ ಆಯೋಜನೆಯಾಗಿತ್ತು. ಆದರೆ ಈಗ ಇಂಗ್ಲೆಂಡ್ ಐಪಿಎಲ್‌ನಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿರುವ ಕಾರಣ ಈ ಸರಣಿ ಬಹುತೇಕ ಮುಂದೂಡಿಕೆಯಾಗುವ ಸಾಧ್ಯತೆಯಿದೆ. ಮುಂದಿನ ವರ್ಷಾರಂಭದಲ್ಲಿ ಈ ಸರಣಿಯನ್ನು ಆಯೋಜನೆ ಮಾಡುವ ಸಾಧ್ಯತೆಯಿದೆ.

ಭಾರತೀಯ ಆಟಗಾರರ ಜೊತೆ ಇಂಗ್ಲೆಂಡ್ ಆಟಗಾರರ ಪ್ರಯಾಣ

ಭಾರತೀಯ ಆಟಗಾರರ ಜೊತೆ ಇಂಗ್ಲೆಂಡ್ ಆಟಗಾರರ ಪ್ರಯಾಣ

ಭಾರತ ಹಾಗೂ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಭಾಗಿಯಾಗುತ್ತಿದ್ದು ಈ ಸರಣಿಯ ಅಂತ್ಯವಾಗುತ್ತಿದ್ದಂತೆಯೇ ಭಾರತ ಹಾಗೂ ಇಂಗ್ಲೆಂಡ್ ಆಟಗಾರರು ಒಂದೇ ಚಾರ್ಟರ್ ಫ್ಲೈಟ್ ಮೂಲಕ ಯುಎಇಗೆ ಪ್ರಯಾಣಿಸಲಿದ್ದಾರೆ. ಈ ಮೂಲಕ ಒಂದು ಬಯೋಬಬಲ್‌ನಿಂದ ಮತ್ತೊಂದು ಬಯೋಬಬಲ್‌ಗೆ ಸೇರ್ಪಡೆಯಾಗಲಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿ ಆಗಸ್ಟ್ 4 ರಿಂದ ಸೆಪ್ಟೆಂಬರ್ 14ರ ವರೆಗೆ ನಡೆಯಲಿದೆ. ಇದಾದ ಬಳಿಕ ಕೇವಲ 5 ದಿನಗಳ ಅಂತರದಲ್ಲಿ ಐಪಿಎಲ್ ಪುನಾರಂಭವಾಗಲಿದೆ.

ಈ ಸರಣಿಯಲ್ಲೂ ಕೈ ಕೊಡ್ತಾರಾ ಅಥವಾ ಕೈ ಹಿಡೀತಾರಾ ಜಡ್ಡು & ಅಶ್ವಿನ್ | Oneindia Kannada
ಉಳಿದ ದೇಶಗಳ ಆಟಗಾರರ ಕಥೆಯೇನು?

ಉಳಿದ ದೇಶಗಳ ಆಟಗಾರರ ಕಥೆಯೇನು?

ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ತನ್ನ ಆಟಗಾರರು ಐಪಿಎಲ್‌ನ ಉಳಿದ ಪಂದ್ಯಗಳಿಗೆ ಲಭ್ತವಾಗಲಿದ್ದಾರೆ ಎಂಬುದನ್ನು ಈ ಮೊದಲೇ ಖಚಿತಪಡಿಸಿದೆ. ದಕ್ಷಿಣ ಆಫ್ರಿಕಾ ಆಟಗಾರರು ಕೂಡ ಭಾಗಿಯಾಗುವುದು ನಿಶ್ಚಿತ. ಆದರೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಗಳ ನಿರ್ಧಾರ ಕುತೂಹಲ ಮೂಡಿಸಿದೆ. ಈ ಅವಧಿಯಲ್ಲಿ ಅಂತಾರಾಷ್ಟ್ರೀಯ ಸರಣಿಗಳು ನಿಗದಿಯಾಗಿರುವ ಕಾರಣ ಅಲ್ಲಿನ ಆಟಗಾರರ ಲಭ್ಯತೆಯ ಬಗ್ಗೆ ಖಚಿತವಿಲ್ಲ. ಒಂದು ವೇಳೆ ಆಟಗಾರರು ಅಲಭ್ಯವಾದಲ್ಲಿ ಆ ಸ್ಥಾನಕ್ಕೆ ಬೇರೆ ಆಟಗಾರರನ್ನು ಸೇರ್ಪಡೆಗೊಳಿಸುವ ಅವಕಾಶ ದೊರೆಯಲಿದೆ.

Story first published: Tuesday, August 3, 2021, 12:50 [IST]
Other articles published on Aug 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X