ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: 16 ವರ್ಷದ ಕೆಳಗಿನ ಅಭಿಮಾನಿಗಳಿಗೆ ಶಾರ್ಜಾ ಸ್ಟೇಡಿಯಂಗೆ ನೋ ಎಂಟ್ರಿ

IPL 2021: Fans below 16 not allowed to Sharjah stadium

ಅಬುಧಾಬಿ: ಅರ್ಧಕ್ಕೆ ನಿಲ್ಲಿಸಲ್ಪಟ್ಟಿದ್ದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 2021ರ ಟೂರ್ನಿ ಮತ್ತೆ ಶುರುವಾಗಿದೆ. ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅಭಿಮಾನಿಗಳಿಗೆ ಈ ಬಾರಿ ಸ್ಟೇಡಿಯಂ ಒಳಗೆ ಪ್ರವೇಶ ನೀಡಿದೆ. ಆದರೆ ಅಭಿಮಾನಿಗಳಿಗೆ ಸ್ಟೇಡಿಯಂಗೆ ಪ್ರವೇಶ ವಿಚಾರದಲ್ಲಿ ಒಂದಿಷ್ಟು ನಿರ್ಬಂಧಗಳೂ ಇವೆ.

ಆರ್‌ಸಿಬಿ 'ಎ' vs ಆರ್‌ಸಿಬಿ 'ಬಿ' ಸೂಪರ್ ಓವರ್ ಪಂದ್ಯ: ವೈರಲ್ ವಿಡಿಯೋಆರ್‌ಸಿಬಿ 'ಎ' vs ಆರ್‌ಸಿಬಿ 'ಬಿ' ಸೂಪರ್ ಓವರ್ ಪಂದ್ಯ: ವೈರಲ್ ವಿಡಿಯೋ

ಸೆಪ್ಟೆಂಬರ್‌ 19ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ) ದುಬೈ, ಅಬುಧಾಬಿ ಮತ್ತು ಶಾರ್ಜಾ ಸ್ಟೆಡಿಯಂಗಳಲ್ಲಿ ಐಪಿಎಲ್ 2021ರ ದ್ವಿತೀಯ ಹಂತದ ಪಂದ್ಯಗಳು ನಡೆಯಲಿವೆ. ಈ ವೇಳೆ ಕ್ರಿಕೆಟ್ ಅಭಿಮಾನಿಗಳಿಗೆ ಸ್ಟೇಡಿಯಂನಲ್ಲಿದ್ದು ಪಂದ್ಯ ವೀಕ್ಷಿಸಲು ಅವಕಾಶವಿದೆಯಾದರೂ ಕೆಲವೆಡೆ 16 ವರ್ಷದ ಕೆಳಗಿನವರು ಪ್ರವೇಶಿಸುವಂತಿಲ್ಲ.

ಶಾರ್ಜಾ ಸ್ಟೇಡಿಯಂ ಪ್ರವೇಶಕ್ಕೆ ಭಿನ್ನ ನಿಯಮ
ಐಪಿಎಲ್ ಪಂದ್ಯ ನಡೆಯುವಾಗ ಸ್ಟೇಡಿಯಂನಲ್ಲಿದ್ದು ಪಂದ್ಯ ವೀಕ್ಷಿಸಲು ಬಯಸುವ ಅಭಿಮಾನಿಗಳು 48 ಗಂಟೆಗಳೊಳಗೆ ಮಾಡಿಸಿದ ಪಿಸಿಆರ್ ಟೆಸ್ಟ್‌ನ ವರದಿ ಸಲ್ಲಿಸಬೇಕೆಂದೇನೂ ಇಲ್ಲ. ಹಿಂದೆ ಈ ನಿಯಮವಿತ್ತು. ಆದರೆ ಈ ಬಾರಿ ಕೋವಿಡ್ ವರದಿ ಸಲ್ಲಿಸಬೇಕಾಗಿಲ್ಲ. ಆದರೆ ಸ್ಟೇಡಿಯಂಗೆ ಬರುವ ಅಭಿಮಾನಿಗಳೆಲ್ಲರೂ ಎರಡು ಬಾರಿ ವ್ಯಾಕ್ಸಿನ್ ಹಾಕಿಸಿಕೊಂಡಿರುವ ಬಗ್ಗೆ ವರದಿ ಸಲ್ಲಿಸಬೇಕು. 12 ವರ್ಷಕ್ಕೂ ಕೆಳಗಿನವರು ವ್ಯಾಕ್ಸಿನ್ ದಾಖಲೆ ತೋರಿಸಬೇಕಾಗಿಲ್ಲ. ಉಳಿದವರೆಲ್ಲರೂ ವ್ಯಾಕ್ಸಿನ್ ದಾಖಲೆ ತೋರಿಸಿದರೆ ಮಾತ್ರ ಸ್ಟೇಡಿಯಂ ಒಳಗೆ ಪ್ರವೇಶ. ಈ ನಿಯಮಗಳೆಲ್ಲ ಎರಡು ಸ್ಟೇಡಿಯಂಗೆ ಅನ್ವಯಿಸುತ್ತೆ. ಆದರೆ ಈ ವಿಚಾರಗಳಲ್ಲಿ ಶಾರ್ಜಾ ಸ್ಟೇಡಿಯಂ ಕೊಂಚ ಭಿನ್ನ ನಿಯಮಗಳನ್ನು ಪ್ರಕಟಿಸಿದೆ. ಶಾರ್ಜಾ ಸ್ಟೇಡಿಯಂನಲ್ಲಿದ್ದು ನೀವು ಪಂದ್ಯ ವೀಕ್ಷಿಸಲು ಬಯಸಿದರೆ, ನಿಮ್ಮ ವಯಸ್ಸು 16+ ಆಗಿರಬೇಕು. ಅಭಿಮಾನಿಗಳು ಕೋವಿಡ್ ಟೆಸ್ಟ್‌ನ ವರದಿ ಜೊತೆಗೆ ಕೊಂಡೊಯ್ಯಬೇಕು. ಅಷ್ಟೇ ಅಲ್ಲ, ಆ ಕೋವಿಡ್ ವರದಿ 48 ಗಂಟೆಗಳ ಒಳಗೆ ಮಾಡಿಸಿದ ವರದಿಯಾಗಿರಬೇಕು. ಜೊತೆಗೆ ಅಲ್ ಹೊಸನ್ ಆ್ಯಪ್‌ನಲ್ಲಿ ನಮ್ಮ ಎಲ್ಲಾ ಆರೋಗ್ಯ ಸ್ಥಿತಿಗತಿಗಳೂ ಗ್ರೀನ್‌ನಲ್ಲಿ ತೋರಿಸುತ್ತಿರಬೇಕು ಎಂದು ನಿಯಮ ರೂಪಿಸಲಾಗಿದೆ.

ಭರ್ಜರಿ ಸಿಕ್ಸರ್‌ಗಳ ಮೂಲಕ ಎಚ್ಚರಿಕೆ ಕೊಟ್ಟ ಎಂಎಸ್ ಧೋನಿ: ವಿಡಿಯೋಭರ್ಜರಿ ಸಿಕ್ಸರ್‌ಗಳ ಮೂಲಕ ಎಚ್ಚರಿಕೆ ಕೊಟ್ಟ ಎಂಎಸ್ ಧೋನಿ: ವಿಡಿಯೋ

27 ದಿನಗಳ ಐಪಿಎಲ್ ಟೂರ್ನಿ
ಭಾರತದಲ್ಲಿ ಆರಂಭವಾಗಿದ್ದ ಐಪಿಎಲ್ ಕೋವಿಡ್-19 ಕಾರಣದಿಂದಾಗಿ ಅರ್ಧಕ್ಕೆ ನಿಲ್ಲಿಸಲ್ಪಟ್ಟಿತ್ತು. ಆರಂಭಿಕ ಹಂತದಲ್ಲಿ 29 ಪಂದ್ಯಗಳು ನಡೆದಿದ್ದವು. ಇನ್ನುಳಿದ 31 ಪಂದ್ಯಗಳು ಯುಎಇಯಲ್ಲಿ ನಡೆಯಲಿದೆ. ಆರಂಭಿಕ ಹಂತದ ಪಂದ್ಯಗಳು ಮುಗಿಯುವಾಗ ಅಂಕಪಟ್ಟಿಯಲ್ಲಿ ಆರ್‌ಸಿಬಿ 3ನೇ ಸ್ಥಾನದಲ್ಲಿತ್ತು. 7 ಪಂದ್ಯಗಳನ್ನಾಡಿದ್ದ ಆರ್‌ಸಿಬಿ 5 ಗೆಲುವು, 2 ಸೋಲಿನೊಂದಿಗೆ 10 ಅಂಕ ಕಲೆ ಹಾಕಿ 3ನೇ ಸ್ಥಾನದಲ್ಲಿತ್ತು. ಮೊದಲ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ದ್ವಿತೀಯ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಇದ್ದವು. ಹೀಗಾಗಿ ಈ ಬಾರಿ ಫೈನಲ್‌ ಪ್ರವೇಶಿಸಲು ಮತ್ತು ಟ್ರೋಫಿ ಗೆಲ್ಲಲು ಆರ್‌ಸಿಬಿಗೆ ಅವಕಾಶವಿದೆ. ಗ್ಲೆನ್ ಮ್ಯಾಕ್ಸ್‌ವೆಲ್‌ ಕೂಡ ಆರ್‌ಸಿಬಿ ಸೇರಿಕೊಂಡಿರುವುದರಿಂದ ತಂಡದ ಬಲ ಹೆಚ್ಚಿದೆ. ಆರ್‌ಸಿಬಿ ಮೊದಲ ಪಂದ್ಯವಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಸವಾಲು ಸ್ವೀಕರಿಸಲಿದೆ. ಕಪ್‌ ಗೆಲ್ಲದ ತಂಡಗಳ ಸಾಲಿನಲ್ಲಿರುವ ಆರ್‌ಸಿಬಿಗೆ ಈ ಸಾರಿ ಕಪ್‌ ಗೆಲ್ಲಲು ಉತ್ತಮ ಅವಕಾಶವಿದೆ.

ಐಪಿಎಲ್ 2021: ಮುಂಬೈ vs ಚೆನ್ನೈ ಪಂದ್ಯದಲ್ಲಿ ಗೆಲ್ಲುವ ತಂಡವನ್ನು ಊಹಿಸಿದ ಆಕಾಶ್ ಚೋಪ್ರಐಪಿಎಲ್ 2021: ಮುಂಬೈ vs ಚೆನ್ನೈ ಪಂದ್ಯದಲ್ಲಿ ಗೆಲ್ಲುವ ತಂಡವನ್ನು ಊಹಿಸಿದ ಆಕಾಶ್ ಚೋಪ್ರ

ಸ್ಪಿನ್ ಮಾಂತ್ರಿಕನಿಗೆ ಸಿಗತ್ತಾ ಅವಕಾಶ!? | Oneindia Kannada

ಆರ್‌ಸಿಬಿ ಉತ್ತಮ ಪ್ರದರ್ಶನದ ನಿರೀಕ್ಷೆ
ಐಪಿಎಲ್ 2021ರ ಸೀಸನ್‌ನಲ್ಲಿ ಆರಂಭಿಕ ಹಂತದಲ್ಲೂ ಆರ್‌ಸಿಬಿ ಉತ್ತಮ ಪ್ರದರ್ಶನ ನೀಡಿತ್ತು. ಆಡಿರುವ 7 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ತೃತೀಯ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ದ್ವಿತೀಯ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳು ಇವೆ. ದ್ವಿತೀಯ ಹಂತದಲ್ಲಿ ಶ್ರೀಲಂಕಾ ಆಲ್ ರೌಂಡರ್ ವನಿಂದು ಹಸರಂಗ ಮತ್ತು ಬೌಲರ್ ದುಶ್ಮಂತ ಚಮೀರ ಆರ್‌ಸಿಬಿ ಸೇರಿಕೊಂಡಿರುವುದರಿಂದ ಆರ್‌ಸಿಬಿ ಪ್ರದರ್ಶನದ ಬಗ್ಗೆ ಇನ್ನೂ ನಿರೀಕ್ಷೆ ಹೆಚ್ಚಾಗಿದೆ. ಒಂದು ಬಾರಿಯೂ ಟ್ರೋಫಿ ಗೆಲ್ಲದ ತಂಡಗಳಾದ ಡೆಲ್ಲಿ, ಪಂಜಾಬ್ ಕಿಂಗ್ಸ್ ಜೊತೆಯಲ್ಲಿರುವ ಆರ್‌ಸಿಬಿ ಈ ಬಾರಿ ಟ್ರೋಫಿ ಗೆಲ್ಲಲು ಒಳ್ಳೆಯ ಅವಕಾಶವಿದೆ. ಸೆಪ್ಟೆಂಬರ್‌ 20ರಂದು ಆರ್‌ಸಿಬಿ ದ್ವಿತೀಯ ಹಂತದ ಮೊದಲ ಪಂದ್ಯವಾಗಿ ಆರ್‌ಸಿಬಿ ಕೋಲ್ಕತ್ತಾ ನೈಟ್ ರೈಡರ್ಸ್ ಸವಾಲು ಸ್ವೀಕರಿಸಲಿದೆ. ಈ ಪಂದ್ಯ ಅಬುಧಾಬಿಯಲ್ಲಿ ನಡೆಯಲಿದೆ.

Story first published: Sunday, September 19, 2021, 15:51 [IST]
Other articles published on Sep 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X