ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಎಸ್‌ಕೆ ವಿರುದ್ಧ ಕೆಕೆಆರ್ ಬೆಸ್ಟ್ ಪ್ಲೇಯಿಂಗ್ XI, ಆ್ಯಂಡ್ರೆ ರಸೆಲ್ ಆಡ್ತಾರಾ?

IPL 2021 Final: KKR Best Playing 11 Against CSK; Will Andre Russell Play in IPL Final?

ದುಬೈ: ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 14ನೇ ಆವೃತ್ತಿಯ ಅಂತಿಮ ಕದನಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಸಜ್ಜಾಗಿವೆ. ಎಂಎಸ್ ಧೋನಿ ನಾಯಕತ್ವದ ಚೆನ್ನೈ ಟೂರ್ನಿಯ ಆರಂಭದಿಂದಲೂ ಗೆಲುವಿನ ಲಯದಲ್ಲಿದ್ದರೆ, ಕೋಲ್ಕತ್ತಾ ತಂಡ ಕೊನೇ ಕ್ಷಣದಲ್ಲಿ ಜಯದ ಹಾದಿ ತುಳಿದು ಫೈನಲ್‌ಗೇರುವ ಮೂಲಕ ಬೆರಗು ಮೂಡಿಸಿದೆ.

T20 World Cup: ಭಾರತದ ಅಪಾಯಕಾರಿ ಆಟಗಾರನ ಹೆಸರಿಸಿದ ಹೌರಿಟ್ಜ್T20 World Cup: ಭಾರತದ ಅಪಾಯಕಾರಿ ಆಟಗಾರನ ಹೆಸರಿಸಿದ ಹೌರಿಟ್ಜ್

ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆರಂಭಗೊಂಡ ಐಪಿಎಲ್ ದ್ವಿತೀಯ ಹಂತದ ಪಂದ್ಯಗಳ ವೇಳೆ ಕೋಲ್ಕತ್ತಾ ನೈಟ್ ರೈಡರ್ಸ್ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿತ್ತು. ಆಗ ಚೆನ್ನೈ ಸೂಪರ್ ಕಿಂಗ್ಸ್ ಅಗ್ರ ಎರಡರಲ್ಲಿ ಸ್ಥಾನ ಪಡೆದಿತ್ತು. ಪ್ಲೇ ಆಫ್ಸ್‌ ಪ್ರವೇಶದ ಆಸೆಯನ್ನೇ ಕೈ ಚೆಲ್ಲಿದ್ದ ಕೆಕೆಆರ್ ಕೊನೇ ಏಳು ಪಂದ್ಯಗಳಲ್ಲಿ 5ರಲ್ಲಿ ಗೆದ್ದು ಪ್ಲೇ ಆಫ್ಸ್‌ಗೆ ಪ್ರವೇಶಿಸಿದ್ದಲ್ಲದೆ ಅಲ್ಲಿಂದ ಫೈನಲ್‌ಗೂ ಎಂಟ್ರಿ ಕೊಟ್ಟಿದೆ.

ಕೆಕೆಆರ್ ತಂಡದ ಪ್ರಮುಖ ಆಲ್ ರೌಂಡರ್ ಆ್ಯಂಡ್ರೆ ರಸೆಲ್ ಹ್ಯಾಮ್‌ಸ್ಟ್ರಿಂಗ್ ಗಾಯಕ್ಕೀಡಾಗಿದ್ದಾರೆ. ಹೀಗಾಗಿ ರಸೆಲ್ ಕೆಲ ಪಂದ್ಯಗಳಿಂದ ತಂಡದಿಂದ ಹೊರಗುಳಿದಿದ್ದರು. ರಸೆಲ್ ಈಗ ಚೇತರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಫೈನಲ್‌ ಪಂದ್ಯದಲ್ಲಿ ರಸೆಲ್ ಆಡೋದು ಖಾತರಿಯಿಲ್ಲ. ಹಾಗಂತ ಸೆಎಸ್‌ಕೆ ವಿರುದ್ಧ ರಸೆಲ್ ಕಣಕ್ಕಿಳಿದರೂ ಅಚ್ಚರಿಯಿಲ್ಲ.

ಟಿ20 ವಿಶ್ವಕಪ್: ಭಾರತದ ವಿರುದ್ಧ ಗೆಲ್ಲುವುದು ಹೇಗೆಂದು ಪಾಕಿಸ್ತಾನಕ್ಕೆ ಸಲಹೆ ನೀಡಿದ ಮಿಯಾಂದಾದ್ಟಿ20 ವಿಶ್ವಕಪ್: ಭಾರತದ ವಿರುದ್ಧ ಗೆಲ್ಲುವುದು ಹೇಗೆಂದು ಪಾಕಿಸ್ತಾನಕ್ಕೆ ಸಲಹೆ ನೀಡಿದ ಮಿಯಾಂದಾದ್

ಚೆನ್ನೈ ಸೂಪರ್ ಕಿಂಗ್ಸ್‌ ಐಪಿಎಲ್ ಇತಿಹಾಸದಲ್ಲಿ ಯಶಸ್ವಿ ತಂಡಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಸಿಎಸ್‌ಕೆ ಒಟ್ಟು 3 ಸಾರಿ ಚಾಂಪಿಯನ್ಸ್ ಆಗಿ ಗುರುತಿಸಿಕೊಂಡಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಕೂಡ ಒಟ್ಟು ಎರಡು ಸಾರಿ ಪ್ರಶಸ್ತಿ ಜಯಿಸಿದೆ. ಐಪಿಎಲ್ ಇತಿಹಾಸದಲ್ಲಿ ಎರಡೂ ಬಲಿಷ್ಠ ತಂಡಗಳೇ. ಹೀಗಾಗಿ ಫೈನಲ್‌ ಪಂದ್ಯ ಕುತೂಹಲ ಮೂಡಿಸಿದೆ. ಅಕ್ಟೋಬರ್ 15ರ ಶುಕ್ರವಾರ 7.30 PMಗೆ ಐಪಿಎಲ್ ಫೈನಲ್ ಪಂದ್ಯ ಆರಂಭಗೊಳ್ಳಲಿದೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಫೈನಲ್‌ ಪಂದ್ಯಕ್ಕಾಗಿ ಕೆಕೆಆರ್ ಸಂಭಾವ್ಯ ಪ್ಲೇಯಿಂಗ್ XI
ಶುಭ್ಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯೋನ್ ಮಾರ್ಗನ್ (ನಾಯಕ), ಆಂಡ್ರೆ ರಸೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಸುನೀಲ್ ನರೈನ್, ಲಾಕಿ ಫರ್ಗುಸನ್, ವರುಣ್ ಚಕ್ರವರ್ತಿ ಮತ್ತು ಶಿವಂ ಮಾವಿ.

Story first published: Friday, October 15, 2021, 10:30 [IST]
Other articles published on Oct 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X