ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021, ಫೈನಲ್: ಸಿಎಸ್‌ಕೆ vs ಕೆಕೆಆರ್, ಮೈಲಿಗಲ್ಲುಗಳ ಮೇಲೆ ಕಣ್ಣಿಟ್ಟ ಜಡೇಜಾ ಹಾಗೂ ಡು ಪ್ಲೆಸಿಸ್

IPL 2021 Final, KKR vs CSK Records and Stats Preview

ಐಪಿಎಲ್ 14ನೇ ಆವೃತ್ತಿಯ ಫೈನಲ್ ಪಂದ್ಯ ಶುಕ್ರವಾರ ನಡೆಯಲಿದ್ದು ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಈ ಪಂದ್ಯದಲ್ಲಿ ಪ್ರಶಸ್ತಿಗಾಗಿ ಸೆಣೆಸಾಟವನ್ನು ನಡೆಸಲಿದೆ. ಎಂಎಸ್ ಧೋನಿ ನೇತೃತ್ವದ ಸಿಎಸ್‌ಕೆ ತಂಡ ಐಪಿಎಲ್‌ನಲ್ಲಿ ನಾಲ್ಕನೇ ಬಾರಿಗೆ ಚಾಂಪಿಯನ್ ಎನಿಸಿಕೊಳ್ಳಲು ಸಜ್ಜಾಗಿದ್ದರೆ ಮತ್ತೊಂದೆಡೆ ಇಯಾನ್ ಮಾರ್ಗನ್ ನೇತೃತ್ವದ ಕೆಕೆಆರ್ ಮೂರನೇ ಟ್ರೋಫಿಯ ಮೇಲೆ ಕಣ್ಣಿಟ್ಟಿದೆ.

ಈ ಫೈನಲ್ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಸದಸ್ಯರು ತೀವ್ರ ಪೈಪೋಟಿಯನ್ನು ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಕೆಲ ಆಟಗಾರರು ಪ್ರಮುಖ ದಾಖಲೆಗಳ ಮೇಲೆಯೂ ಕಣ್ಣಿಟ್ಟಿದ್ದಾರೆ. ಐಪಿಎಲ್ 14ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಸಂಭವಿಸಬಹುದಾದ ಕೆಲ ಅಪರೂಪದ ಮೈಲಿಗಲ್ಲುಗಳು ಹಾಗೂ ದಾಖಲೆಗಳ ವಿವರ ಇಲ್ಲಿದೆ.

ರವೀಂದ್ರ ಜಡೇಜಾ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್ ರೌಂಡರ್ ರವೀಂದ್ರ ಜಡೇಜಾ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 200ನೇ ಪಂದ್ಯದಲ್ಲಿ ಆಡಲಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಈತನೇ ಟೀಮ್ ಇಂಡಿಯಾಗೆ ಆಧಾರ: ಕನ್ನಡಿಗನ ಬಗ್ಗೆ ಬ್ರೇಟ್ ಲೀಗೆ ಭರವಸೆಟಿ20 ವಿಶ್ವಕಪ್‌ನಲ್ಲಿ ಈತನೇ ಟೀಮ್ ಇಂಡಿಯಾಗೆ ಆಧಾರ: ಕನ್ನಡಿಗನ ಬಗ್ಗೆ ಬ್ರೇಟ್ ಲೀಗೆ ಭರವಸೆ

ರಾಬಿನ್ ಉತ್ತಪ್ಪ: ಈ ಹಿಂದೆ ಕೆಕೆಆರ್ ತಮಡದ ಸದಸ್ಯನಾಗಿದ್ದ ರಾಬಿಉನ್ ಉತ್ತಪ್ಪ ಈ ಬಾರಿಯ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದಾರೆ. ರಾಬಿನ್ ಉತ್ತಪ್ಪ ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ 7000 ರನ್ ಪೂರೈಸಲು 55 ರನ್‌ಗಳ ಅಗತ್ಯವಿದೆ. ಅಲ್ಲದೆ ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ 700 ಬೌಂಡರಿ ಗಳಿಸಿದ ಆಟಗಾರರ ಒಟ್ಟಿಗೆ ಸೇರ್ಪಡೆಯಾಗಲು 5 ಬೌಂಡರಿಗಳ ಅಗತ್ಯವಿದೆ.

ಅಂಬಾಟಿ ರಾಯುಡು: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅನುಭವಿ ಬ್ಯಾಟ್ಸ್‌ಮನ್ ಅಂಬಾಟಿ ರಾಯುಡು ಐಪಿಎಲ್‌ನಲ್ಲಿ 4000 ರನ್ ಪೂರೈಸಲು 84 ರನ್‌ಗಳ ಅಗತ್ಯವಿದೆ. ಅಲ್ಲದೆ ಐಪಿಎಲ್‌ನಲ್ಲಿ 150 ಸಿಕ್ಸರ್‌ಗಳು ಮತ್ತು ಟಿ20 ಕ್ರಿಕೆಟ್‌ನಲ್ಲಿ 200 ಸಿಕ್ಸರ್‌ಗಳಿಸಿದ ಆಟಗಾರರ ಪಟ್ಟಿಗೆ ಸೇರಿಕೊಳ್ಳಲು 1 ಸಿಕ್ಸರ್‌ನ ಅಗತ್ಯವಿದೆ.

ಐಪಿಎಲ್ 2021: ಕೆಕೆಆರ್‌ ಬ್ಯಾಟ್ಸ್‌ಮನ್‌ ದಿನೇಶ್ ಕಾರ್ತಿಕ್‌ಗೆ ದಂಡಐಪಿಎಲ್ 2021: ಕೆಕೆಆರ್‌ ಬ್ಯಾಟ್ಸ್‌ಮನ್‌ ದಿನೇಶ್ ಕಾರ್ತಿಕ್‌ಗೆ ದಂಡ

ಡ್ವೇಯ್ನ್ ಬ್ರಾವೋ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್ ರೌಂಡರ್ ಡ್ವೇನ್ ಬ್ರಾವೋ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯಲು ಇನ್ನು ಕೇವಲ 1 ವಿಕೆಟ್‌ನ ಅಗತ್ಯವಿದೆ. ಸದ್ಯ ಬ್ರಾವೋ 166 ವಿಕೆಟ್‌ಗಳನ್ನು ತಮ್ಮ ಖಾತೆಯಲ್ಲಿ ಹೊಂದಿದ್ದಾರೆ. ಅಲ್ಲದೆ 170 ವಿಕೆಟ್ ಪಡೆದು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಲಸಿತ್ ಮಾಲಿಂಗ ಅವರನ್ನು ಹಿಂದಿಕ್ಕಲು ಬ್ರಾವೋಗೆ 4 ವಿಕೆಟ್‌ಗಳ ಅಗತ್ಯವಿದೆ.

ಎಂಎಸ್ ಧೋನಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ 7000 ರನ್ ಪೂರೈಸಲು 65 ರನ್‌ಗಳ ಅಗತ್ಯವಿದೆ.
ಋತುರಾಜ್ ಗಾಯಕ್ವಾಡ್: ಸಿಎಸ್‌ಕೆ ಆರಂಭಿಕ ಆಟಗಾರ ಋತುರಾಜ್ ಗಾಯಕ್‌ವಾಡ್ ಆರೆಂಜ್ ಕ್ಯಾಪ್ ಗೆಲ್ಲಲು ಇನ್ನೂ ಕೇವಲ 24 ರನ್‌ಗಳ ಅವಶ್ಯಕತೆಯಿದೆ.

ಫಾಫ್ ಡಿ ಪ್ಲೆಸಿಸ್: ಚೆನ್ನೈ ಸೂಪರ್ ಕಿಂಗ್ಸ್ ತ,ಡದ ಅನುಭವಿ ಆಟಗಾರ ಫಾಫ್ ಡು ಪ್ಲೆಸಿಸ್ ತನ್ನ 100 ನೇ ಐಪಿಎಲ್ ಪಂದ್ಯದಲ್ಲಿ ಆಡಲಿದ್ದಾರೆ. ಅಲ್ಲದೆ ಫಾಫ್ ಐಪಿಎಲ್‌ನಲ್ಲಿ 100 ಸಿಕ್ಸರ್ ಗಳಿಸಿದ ಆಟಗಾರರ ಪಟ್ಟಿಗೆ ಸೇರಿಕೊಳ್ಳಲು 7 ಸಿಕ್ಸ್‌ರ್‌ಗಳನ್ನು ಬಾರಿಸಬೇಕಿದೆ. ಇನ್ನು ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ 600 ಬೌಂಡರಿಗಳಿಸಲು ಫಾಫ್ ಡು ಪ್ಲೆಸಿಸ್‌ಗೆ 3 ಬೌಂಡರಿಗಳ ಅಗತ್ಯವಿದೆ

ಐಪಿಎಲ್‌ 2021: ಕೆಟ್ಟ ದಾಖಲೆ ನಿರ್ಮಿಸಿದ ಡೆಲ್ಲಿ ಕ್ಯಾಪಿಟಲ್ಸ್ಐಪಿಎಲ್‌ 2021: ಕೆಟ್ಟ ದಾಖಲೆ ನಿರ್ಮಿಸಿದ ಡೆಲ್ಲಿ ಕ್ಯಾಪಿಟಲ್ಸ್

ಸುನಿಲ್ ನರೈನ್: ಕೊಲ್ಕತ್ತಾ ನೈಟ್ ರೈಡರ್ಸ್ ಆಲ್‌ರೌಂಡರ್ ಸುನೀಲ್ ನರೇನ್ ಕೆಕೆಆರ್ ಪರವಾಗಿ 161 ಪಂದ್ಯಗಳನ್ನಾಡಿ ತನ್ನ ಫ್ರಾಂಚೈಸಿ ಪರವಾಗಿ ಅತಿ ಹೆಚ್ಚು ಪಂದ್ಯಗಳಲ್ಲಿ ಆಡಿದ ಆಟಗಾರ ಎನಿಸಿದ್ದಾರೆ. ಈಗ ನರೈನ್ ಐಪಿಎಲ್ ನಲ್ಲಿ 1000 ರನ್ ಪೂರೈಸಲು 48 ರನ್‌ಗಳನ್ನು ಗಳಿಸಬೇಕಿದೆ

ಇಯಾನ್ ಮಾರ್ಗನ್: ಐಪಿಎಲ್‌ನಲ್ಲಿ ಕೋಲ್ಕತ್ತಾ ಮೂಲದ ಫ್ರಾಂಚೈಸಿ ಪರವಾಗಿ ಕೆಕೆಆರ್ ತಂಡದ ನಾಯಕ ಇಯಾನ್ ಮಾರ್ಗನ್ 1000 ರನ್ ಪೂರೈಸಲು 9 ರನ್‌ಗಳ ಅವಶ್ಯಕತೆಯಿದೆ.

ದಿನೇಶ್ ಕಾರ್ತಿಕ್: ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ನ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ 400 ಬೌಂಡರಿ ಗಳಿಸಿದ ಆಟಗಾರರ ಪಟ್ಟಿಗೆ ಸೇರಿಕೊಳ್ಳಲು ಒಂದು ಬೌಂಡರಿಯ ಅಗತ್ಯವಿದೆ. ಜೊತೆಗೆ ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ 200 ಸಿಕ್ಸರ್ ಗಳಿಸಿದ ಆಟಗಾರ ಎನಿಸಲು 8 ಸಿಕ್ಸರ್‌ಗಳ ಅಗತ್ಯವಿದೆ.

Story first published: Friday, October 15, 2021, 0:20 [IST]
Other articles published on Oct 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X