ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಋತುರಾಜ್ ಗಾಯಕ್ವಾಡ್ ಆಟಕ್ಕೆ ಪಾಕಿಸ್ತಾನ ಮಾಜಿ ಕ್ರಿಕೆಟಿಗನಿಂದಲೂ ಬಂತು ಮೆಚ್ಚುಗೆ

IPL 2021: Former pakistan cricketer praises Ruturaj Gaikwad said he is Outstanding

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯುವ ಆಟಗಾರ ಋತುರಾಜ್ ಗಾಯಕ್ವಾಡ್ ಈ ಬಾರಿಯ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಋತುರಾಜ್ ತಮ್ಮ ಚೊಚ್ಚಲ ಐಪಿಎಲ್ ಶತಕವನ್ನು ಬಾರಿಸಿ ಮಿಂಚಿದ್ದಾರೆ. ಈ ಮೂಲಕ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಜಗಜ್ಜಾಹೀರುಹೊಳಿಸಿದ್ದಾರೆ. ಸದ್ಯ ಋತುರಾಜ್ ಈ ಬಾರಿಯ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರನಾಗಿಯೂ ಮಿಂಚಿದ್ದು ಆರೆಂಜ್ ಕ್ಯಾಪ್ ಮುಡಿಗೇರಿಸಿದ್ದಾರೆ.

ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಗಾಯಕ್ವಾಡ್ ಆಡಿದ ರೀತಿ ಕ್ರಿಕೆಟ್ ಪ್ರೇಮಿಗಳು ತಲೆದೂಗಿದ್ದಾರೆ. ಏಕಾಂಗಿಯಾಗಿ ತಂಡವನ್ನು ಮೇಲೆತ್ತುವ ಅವರ ಸಾಮರ್ಥ್ಯಕ್ಕೆ ಸಾಕಷ್ಟು ಪ್ರಶಂಸೆಗಳು ವ್ಯಕ್ತವಾಗಿದೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಲ್ಮಾನ್ ಬಟ್ ಋತರಾಜ್ ಗಾಯಕ್ವಾಡ್ ಪ್ರದರ್ಶನವನ್ನು ಕೊಂಡಾಡಿದ್ದಾರೆ. ಆಟದ ವಿಚಾರವಾಗಿ ಗಾಯಕ್ವಾಡ್‌ಗೆ ಇರುವ ತಿಳುವಳಿಗೆ ಅಮೋಘವಾದದ್ದು ಎಂದಿದ್ದಾರೆ ಸಲ್ಮಾನ್ ಬಟ್.

ಮುಂಬೈ ಗೆಲುವಿನಾಸೆಗೆ ಮುಳುವಾದ ಅಶ್ವಿನ್, ಶ್ರೇಯಸ್; ಮುಂಬೈ ಇಂಡಿಯನ್ಸ್‌‌ ಪ್ಲೇಆಫ್ ಕಥೆಯೇನು?ಮುಂಬೈ ಗೆಲುವಿನಾಸೆಗೆ ಮುಳುವಾದ ಅಶ್ವಿನ್, ಶ್ರೇಯಸ್; ಮುಂಬೈ ಇಂಡಿಯನ್ಸ್‌‌ ಪ್ಲೇಆಫ್ ಕಥೆಯೇನು?

ಸ್ವಾಭಾವಿಕ ಪ್ರತಿಭೆ: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಲ್ಮಾನ್ ಬಟ್, ಋತುರಾಜ್ ಗಾಯಕ್ವಾಡ್ ಓರ್ವ ಸ್ವಾಭಾವಿಕ ಪ್ರತಿಭೆ ಎಂದು ಬಣ್ಣಿಸಿದ್ದಾರೆ. "ಋತಿರಾಜ್ ಗಾಯಕ್ವಾಡ್ ಅವರ ಮಾನಸಿಕ ಹಾಗೂ ತಾಂತ್ರಿಕ ಬೆಳವಣಿಗೆ ಹಾಗೂ ಆತನಲ್ಲಿರುವ ಆಟದ ಬಗೆಗಿನ ತಿಳುವಳಿಕೆ ಅಮೋಘವಾಗಿದೆ. ಒತ್ತಡದ ಸಂದರ್ಭದಲ್ಲಿ ಆತ ಅದ್ಭುತವಾಗಿ ಆಡುತ್ತಾರೆ. ಮೂರ್ನಾಲ್ಕು ಎಸೆತಗಳಲ್ಲಿ ಚೆಂಡನ್ನು ಬಾರಿಸಲು ವಿಫಲವಾದಾಗ ಆಟಗಾರರು ಒತ್ತಡದಲ್ಲಿ ಕೆಟ್ಟ ಹೊಡೆತಗಳಿಗೆ ಕೈಹಾಕುವ ಆಟಗಾರರನ್ನು ನಾವು ನೋಡಿದ್ದೇವೆ. ಆದರೆ ಇದರಲ್ಲಿ ಋತುರಾಜ್ ಗಾಯಕ್ವಾಡ್ ಭಿನ್ನವಾಗಿದ್ದಾರೆ. ಆತ ಕ್ರೀಸ್‌ಗೆ ನೆಲಕಚ್ಚಿ ನಿಂತ ನಂತರ ಲೀಲಾಜಾಲವಾಗಿ ರನ್ ಗಳಿಸುತ್ತಾರೆ" ಎಂದಿದ್ದಾರೆ ಸಲ್ಮಾನ್ ಬಟ್.

ಸಿಎಸ್‌ಕೆ ವಿರುದ್ಧ ಭರ್ಜರಿ ಜಯ ಸಾಧಿಸಿದ ರಾಜಸ್ಥಾನ್; ಪ್ಲೇಆಫ್ ಆಸೆಯಲ್ಲಿದ್ದ ಮುಂಬೈಗೆ ಸಂಕಷ್ಟ!ಸಿಎಸ್‌ಕೆ ವಿರುದ್ಧ ಭರ್ಜರಿ ಜಯ ಸಾಧಿಸಿದ ರಾಜಸ್ಥಾನ್; ಪ್ಲೇಆಫ್ ಆಸೆಯಲ್ಲಿದ್ದ ಮುಂಬೈಗೆ ಸಂಕಷ್ಟ!

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರಂಭದಲ್ಲಿ ಎಚ್ಚರಿಕೆಯ ಆಟವನ್ನು ಪ್ರದರ್ಶಿಸಿದ್ದ ಋತುರಾಜ್ ಬಳಿಕ ತಮ್ಮ ಆಟದ ವೇಗವನ್ನು ಹೆಚ್ಚಿಸಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ರುತುರಾಜ್ ಗಾಯಕ್ವಾಡ್ 60 ಎಸೆತಗಳಲ್ಲಿ ಅಜೇಯ 101 ರನ್ ಚಚ್ಚುವುದರ ಮೂಲಕ ತಮ್ಮ ಚೊಚ್ಚಲ ಐಪಿಎಲ್ ಶತಕವನ್ನು ಸಿಡಿಸಿದ್ದಾರೆ. 59 ಎಸೆತಗಳಲ್ಲಿ 95 ರನ್ ಕಲೆಹಾಕಿದ್ದ ಋತುರಾಜ್ ಗಾಯಕ್ವಾಡ್ ಪಂದ್ಯದ ಅಂತಿಮ ಓವರ್‌ನ ಅಂತಿಮ ಎಸೆತದಲ್ಲಿ ಮುಸ್ತಫಿಜರ್ ರಹಮಾನ್ ಬೌಲಿಂಗ್‌ಗೆ ಸಿಕ್ಸರ್ ಬಾರಿಸುವುದರ ಮೂಲಕ ಭರ್ಜರಿಯಾಗಿ ಶತಕವನ್ನು ಸಿಡಿಸಿದ್ದು, ಈ ಅಬ್ಬರದ ಶತಕದಲ್ಲಿ 9 ಬೌಂಡರಿ ಮತ್ತು 5 ಸಿಕ್ಸರ್ ಸೇರಿತ್ತು.

ಇನ್ನು ಇದೇ ಸಂದರ್ಭದಲ್ಲಿ ಋತುರಾಜ್ ಗಾಯಕ್ವಾಡ್ ಆಟವನ್ನು ನೋಡಲು ಕೂಡ ತುಂಬಾ ಸೊಗಸಾಗಿದೆ ಎಂದಿದ್ದಾರೆ. ಅಲ್ಲದೆ ಅಪಾಯಕಾರಿ ಹೊಡೆತಗಳನ್ನು ಬಾರಿಸದೆಯೂ ಆರೋಗ್ಯಕರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡುತ್ತಾರೆ ಎಂದು ಪ್ರಶಂಸಿಸಿದ್ದಾರೆ ಋತುರಾಜ್ ಗಾಯಕ್ವಾಡ್.

ಮುಂಬೈ ಗೆಲುವಿನಾಸೆಗೆ ಮುಳುವಾದ ಅಶ್ವಿನ್, ಶ್ರೇಯಸ್; ಮುಂಬೈ ಇಂಡಿಯನ್ಸ್‌‌ ಪ್ಲೇಆಫ್ ಕಥೆಯೇನು?ಮುಂಬೈ ಗೆಲುವಿನಾಸೆಗೆ ಮುಳುವಾದ ಅಶ್ವಿನ್, ಶ್ರೇಯಸ್; ಮುಂಬೈ ಇಂಡಿಯನ್ಸ್‌‌ ಪ್ಲೇಆಫ್ ಕಥೆಯೇನು?

ಸಂಕ್ಷಿಪ್ತ ಸ್ಕೋರ್ ಹೀಗಿದೆ
ಚೆನ್ನೈ ಸೂಪರ್‌ ಕಿಂಗ್ಸ್‌: 20 ಓವರ್‌ಗಳಲ್ಲಿ 189/4 (ಋತುರಾಜ್‌ ಗಾಯಕ್ವಾಡ್‌ 101*, ರವೀಂದ್ರ ಜಡೇಜಾ ಅಜೇಯ 32*, ಫಾಫ್‌ ಡುಪ್ಲೆಸಿಸ್‌ 25: ರಾಹುಲ್‌ ತೆವಾಟಿಯ 39ಕ್ಕೆ 3, ಚೇತನ್‌ ಸಕಾರಿಯ 31ಕ್ಕೆ 1)
ರಾಜಸ್ಥಾನ್ ರಾಯಲ್ಸ್‌: 17.3 ಓವರ್‌ಗಳಲ್ಲಿ 190/3 (ಶಿವಂ ದುಬೆ 64*, ಯಶಸ್ವಿ ಜೈಸ್ವಾಲ್‌ 50, ಸಂಜು ಸ್ಯಾಮ್ಸನ್‌ 28, ಎವಿನ್ ಲೆವಿಸ್‌ 27, ; ಶಾರ್ದುಲ್‌ ಠಾಕೂರ್‌ 30ಕ್ಕೆ 2, ಕೆ.ಎಂ ಆಸಿಫ್‌ 18ಕ್ಕೆ 1)

David Warner ಸಾಧಾರಣ ಪ್ರೇಕ್ಷಕನಂತೆ ಪಂದ್ಯ ವೀಕ್ಷಿಸಿದರು | Oneindia Kannada

ಚೆನ್ನೈ ಸೂಪರ್ ಕಿಂಗ್ಸ್ ಆಡುವ ಬಳಗ: ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಸುರೇಶ್ ರೈನಾ, ಅಂಬಟಿ ರಾಯುಡು, ಎಂಎಸ್ ಧೋನಿ ( ವಿಕೆಟ್ ಕೀಪರ್ / ನಾಯಕ), ರವೀಂದ್ರ ಜಡೇಜಾ, ಸ್ಯಾಮ್ ಕರನ್, ಶಾರ್ದೂಲ್ ಠಾಕೂರ್, ಕೆಎಂ ಆಸಿಫ್, ಜೋಶ್ ಹೇಜಲ್‌ವುಡ್

Story first published: Sunday, October 3, 2021, 20:35 [IST]
Other articles published on Oct 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X