ಫ್ರಾಂಚೈಸಿಗಳಿಗೆ ನೀವು ಮೋಸ ಮಾಡಿದಂತೆ: ಇಂಗ್ಲೆಂಡ್ ಕ್ರಿಕೆಟಿಗರ ವಿರುದ್ಧ ಚೋಪ್ರ ಕಿಡಿ

ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಇಂಗ್ಲೆಂಡ್ ಕ್ರಿಕೆಟಿಗರ ವಿರುದ್ಧ ಕಟುವಾಗಿ ಟೀಕಿಸಿದ್ದಾರೆ. ಈ ಬಾರಿಯ ಐಪಿಎಲ್‌ನ ಉಳಿದ ಪಂದ್ಯಗಳಿಗೆ ವೈಯಕ್ತಿಕ ಕಾರಣಗಳನ್ನು ನೀಡಿ ಅಲಭ್ಯವಾದ ಇಂಗ್ಲೆಂಡ್ ಆಟಗಾರರ ನಡೆಗೆ ಚೋಪ್ರ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಐಪಿಎಲ್‌ನಲ್ಲಿ ಭಾಗವಹಿಸಬೇಕಿದ್ದ ಇಂಗ್ಲೆಂಡ್ ತಂಡದ ಆರು ಆಟಗಾರರು ಬೇರೆ ಬೇರೆ ಕಾರಣಗಳನ್ನು ನೀಡಿ ಹಿಂದಕ್ಕೆ ಸರಿದಿದ್ದಾರೆ. ಅದರಲ್ಲೂ ಮೂವರು ಆಟಗಾರರಾದ ಜಾನಿ ಬೈರ್‌ಸ್ಟೋವ್, ಕ್ರಿಸ್ ವೋಕ್ಸ್ ಹಾಗೂ ಡೇವಿಡ್ ಮಲನ್ ಕೊನೆಯ ಕ್ಷಣದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ತಮ್ಮ ಫ್ರಾಂಚೈಸಿಗಳಿಗೆ ಶಾಕ್ ನೀಡಿದ್ದಾರೆ. ಹೀಗಾಗಿ ಈ ಸ್ಥಾನಗಳಿಗೆ ಆಯಾ ಫ್ರಾಂಚೈಸಿಗಳು ಅನುವಾರ್ಯವಾಗಿ ಬೇರೆ ಆಟಗಾರರನ್ನು ಸೇರ್ಪಡೆಗೊಳಿಸಿದೆ. ಇದಕ್ಕೂ ಮುನ್ನ ವೇಗಿ ಜೋಫ್ರಾ ಆರ್ಚರ್, ಬೆನ್ ಸ್ಟೋಕ್ಸ್ ಹಾಗೂ ಜೋಸ್ ಬಟ್ಲರ್ ಕೂಡ ಐಪಿಎಲ್‌ನಿಂದ ಹೊರಗುಳಿಯುವ ನಿರ್ಧಾರ ಕೈಗೊಂಡಿದ್ದರು. ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಈ ವಿಚಾರವಾಗಿ ಪ್ರತಿಕ್ರಿಯಿಸುತ್ತಾ ಇಂಗ್ಲೆಂಡ್ ಆಟಗಾರರು ಸಾಮೂಹಿಕವಾಗಿ ಈ ರೀತಿಯ ನಿರ್ಧಾರಗಳನ್ನು ಕೈಗೊಂಡಿರುವುದು ಫ್ರಾಂಚೈಸಿಗಳಿಗೆ ದ್ರೋಹ ಮಾಡಿದಂತೆ ಎಂದಿದ್ದಾರೆ.

RCB ಜೆರ್ಸಿ ಚೇಂಜಾಗಿರೋದು ಯಾಕೆ ಅಂತಾ ಗೊತ್ತಾದ್ರೆ ನೀವು ಚಪ್ಪಾಳೆ ತಟ್ತೀರಾ? | Oneindia Kannada

"ಜೋಸ್ ಬಟ್ಲರ್, ಜೋಫ್ರಾ ಆರ್ಚರ್ ಹಾಗೂ ಬೆನ್ ಸ್ಟೋಕ್ಸ್ ಮೊದಲೇ ಬರುತ್ತಿಲ್ಲ ಎಂದು ತಿಳಿಸಿದ್ದರು. ಆದರೆ ಈಗ ಡೇವಿಡ್ ಮಲನ್, ಕ್ರಿಸ್ ವೊಕ್ಸ್ ಹಾಗೂ ಜಾನಿ ಬೈರ್‌ಸ್ಟೋವ್ ಕೂಡ ತಮ್ಮ ಹೆಸರನ್ನು ಹಿಂಪಡೆದಿದ್ದಾರೆ. ಅದರರ್ಥ ಅರ್ಧ ಡಜನ್‌ನಷ್ಟು ಇಂಗ್ಲೆಂಡ್ ಆಟಗಾರರು ಈ ಬಾರಿಯ ಐಪಿಎಲ್‌ನಲ್ಲಿ ಭಾಗಿಯಾಗುತ್ತಿಲ್ಲ. ಇದೊಂಥರಾ ಸಾಮೂಹಿಕವಾಗಿ ದ್ರೋಹ ಬಗೆದಂತೆ. ಐಪಿಎಲ್ ಕುಟುಂಬ ಇದನ್ನು ಯಾವತ್ತಿಗೂ ಮರೆಯಲಾರದು" ಎಂದಿದ್ದಾರೆ ಆಕಾಶ್ ಚೋಪ್ರ.

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಆಕಾಶ್ ಚೋಪ್ರ "ಇಂಗ್ಲೆಂಡ್ ಆಟಗಾರರು ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನೀವು ಐಪಿಎಲ್ ಸೀಸನ್‌ನಿಂದ ಹೊರಗುಳಿಯುವ ನಿರ್ಧಾರ ತೆಗೆದುಕೊಂಡಾಗ ನಿಮ್ಮನ್ನು ಖರೀದಿಸಿದ ಫ್ರಾಂಚೈಸಿಗೆ ಮೋಸ ಮಾಡಿದಂತೆ ಅನಿಸುತ್ತದೆ. ನೀವು ಅವರಿಗೆ ದ್ರೋಹ ಮಾಡಿದ್ದೀರಿ ಎಂದು ಅವರು ಭಾವಿಸುತ್ತಾರೆ" ಎಂದು ಆಕಾಶ್ ಚೋಪ್ರ ಹೇಳಿದ್ದಾರೆ.

ಆರು ಮಂದಿ ಇಂಗ್ಲೆಂಡ್ ಆಟಗಾರರು ಐಪಿಎಲ್‌ನಿಂದ ಹೊರಗುಳಿಯಲಿ ನಿರ್ಧರಿಸಿಸದ ಬಳಿಕವೂ ಇಂಗ್ಲೆಂಡ್‌ನ 10 ಮಂದಿ ಆಟಗಾರರು ಈ ಬಾರಿಯ ಐಪಿಎಲ್‌ನ ಭಾಗವಾಗಿದ್ದಾರೆ ಎಂಬುದು ಗಮನಾರ್ಹ. ಮೊಯೀನ್ ಅಲಿ (ಚೆನ್ನೈ ಸೂಪರ್ ಕಿಂಗ್ಸ್) ಮತ್ತು ಸ್ಯಾಮ್ ಕರನ್ (ಸಿಎಸ್‌ಕೆ) ಶೀಘ್ರದಲ್ಲೇ ದುಬೈಗೆ ತೆರಳಲು ಸಜ್ಜಾಗಿದ್ದಾರೆ. ಅವರೊಂದಿಗೆ ಟಾಮ್ ಕರನ್ (ಡೆಲ್ಲಿ ಕ್ಯಾಪಿಟಲ್ಸ್), ಜಾರ್ಜ್ ಗಾರ್ಟನ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು), ಇಯಾನ್ ಮಾರ್ಗನ್ (ಕೋಲ್ಕತಾ ನೈಟ್ ರೈಡರ್ಸ್), ಕ್ರಿಸ್ ಜೋರ್ಡಾನ್ (ಪಂಜಾಬ್ ಕಿಂಗ್ಸ್), ಆದಿಲ್ ರಶೀದ್ (ಪಂಜಾಬ್ ಕಿಂಗ್ಸ್), ಲಿಯಾಮ್ ಲಿವಿಂಗ್ಸ್ಟೋನ್ (ರಾಜಸ್ಥಾನ್ ರಾಯಲ್ಸ್), ಸ್ಯಾಮ್ ಬಿಲ್ಲಿಂಗ್ಸ್ (ಡೆಲ್ಲಿ ಕ್ಯಾಪಿಟಲ್ಸ್) ಮತ್ತು ಜೇಸನ್ ರಾಯ್ (ಸನ್‌ರೈಸರ್ಸ್ ಹೈದರಾಬಾದ್) ಕೂಡ ಐಪಿಎಲ್‌ನ ಭಾಗವಾಗಿರಲಿದ್ದಾರೆ.

ಇಂಗ್ಲೆಂಡ್ ತಂಡದ ಆಟಗಾರ ಕ್ರಿಸ್ ವೋಕ್ಸ್ ತಮ್ಮ ನಿರ್ಧಾರಕ್ಕೆ ಕಾರಣವನ್ನು ತಿಳಿಸಿದ್ದಾರೆ. ಐಪಿಎಲ್‌ನಿಂದ ಹಿಂದಕ್ಕೆ ಸರಿಯಲು ಅಂತಾರಾಷ್ಟ್ರೀಯ ಕ್ರಿಕೆಟ್‌ನ ಬದ್ಧತೆಯನ್ನು ಮುಂದಿಟ್ಟಿದ್ದಾರೆ. ಈ ಬಾರಿಯ ಟಿ20 ವಿಶ್ವಕಪ್‌ನ ತಂಡದಲ್ಲಿ ಆಡುವ ಸಲುವಾಗಿ ಹಾಗೂ ಅದಾದ ಬಳಿಕ ಆಶಸ್ ಸರಣಿಗೆ ಸಂಪೂರ್ಣವಾಗಿ ಫಿಟ್ ಆಗಿರುವ ದೃಷ್ಠಿಯಿಂದ ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ ಕ್ರಿಸ್ ವೋಕ್ಸ್.

"ಟಿ20 ವಿಶ್ವಕಪ್ ಹಾಗೂ ಆಶಸ್ ಟೆಸ್ಟ್ ಸರಣಿ ಸಣ್ಣ ಅವಧಿಯಲ್ಲಿ ಬರುವ ಎರಡು ದೊಡ್ಡ ಟೂರ್ನಿಗಳಾಗಿದೆ. ನಾನು ಐಪಿಎಲ್‌ನ ಭಾಗವಾಗುವುದಕ್ಕೆ ಇಷ್ಟಪಡುತ್ತೇನೆ. ಆದರೆ ಯಾವುದನ್ನಾದರೂ ಬಿಟ್ಟುಕೊಡಬೇಕಿದೆ. ಒಂದು ವಿಶ್ವಕಪ್ ಹಾಗೂ ಒಂದು ಆಶಸ್ ಇದು 2019ರ ಬೇಸಿಗೆ ಋತುವಿನಂತೆಯೇ ದೊಡ್ಡ ಚಳಿಗಾಲದ ಋತುವಾಗಿದೆ" ಎಂದಿದ್ದಾರೆ ಇಂಗ್ಲೀಷ್ ಕ್ರಿಕೆಟರ್ ಕ್ರಿಸ್ ವೋಕ್ಸ್.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 22 - October 28 2021, 07:30 PM
ಆಸ್ಟ್ರೇಲಿಯಾ
ಶ್ರೀಲಂಕಾ
Predict Now

For Quick Alerts
ALLOW NOTIFICATIONS
For Daily Alerts
Story first published: Monday, September 13, 2021, 22:18 [IST]
Other articles published on Sep 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X