ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಿಜಕ್ಕೂ ಐಪಿಎಲ್ 2021 ನಡೆಯುತ್ತಾ? ಆತಂಕದಲ್ಲಿ ಫ್ರಾಂಚೈಸಿಗಳು!

IPL 2021: Franchises Panic About The Increasing Covid-19 Scare

ಐಪಿಎಲ್ 14ನೇ ಆವೃತ್ತಿ ಚಾಲನೆ ಪಡೆದುಕೊಳ್ಳಲು ಕ್ಷಣಗಳು ಹತ್ತಿರವಾಗುತ್ತಿದೆ. ಆದರೆ ಟೂರ್ನಿ ನಡೆಯುವ ಬಗ್ಗೆ ಫ್ರಾಂಚೈಸಿಗಳು ಇನ್ನೂ ಅನುಮಾನಗಳನ್ನು ವ್ಯಕ್ತಪಡಿಸುತ್ತಿವೆ. ಕೊರೊನಾ ವೈರಸ್ ಈ ಬಾರಿಯ ಐಪಿಎಲ್‌ಗೆ ಪದೇ ಪದೆ ಕಾಡುತ್ತಿರುವುದು ಈ ಆತಂಕಕ್ಕೆ ಕಾರಣವಾಗಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಈ ವಿಚಾರವಾಗಿ ಈಗಾಗಲೇ ಸ್ಪಷ್ಟನೆಯನ್ನು ನೀಡಿದ್ದು ಐಪಿಎಲ್ ನಿಗದಿಯಂತೆಯೇ ವೇಳಾಪಟ್ಟಿಯ ಪ್ರಕಾರವೇ ನಡೆಯಲಿದೆ ಎಂದಿದೆ. ಆದರೆ ಐಪಿಎಲ್ ಸ್ಥಗಿತಗೊಳಿಸುವ ಅಥವಾ ಮುಂದೂಡುವ ವಿಚಾರದ ಚರ್ಚೆಗಳು ಕೇಳಿಬರುತ್ತಿದ್ದು "ಇನ್‌ಸೈಡ್ ಸ್ಪೋರ್ಟ್" ಇದನ್ನು ವರದಿ ಮಾಡಿದೆ.

ಐಪಿಎಲ್‌ಗೂ ಮುನ್ನವೇ ಶತಕ ಬಾರಿಸಿದ ಎಂಐಯ ಕ್ರಿಸ್‌ಲಿನ್!ಐಪಿಎಲ್‌ಗೂ ಮುನ್ನವೇ ಶತಕ ಬಾರಿಸಿದ ಎಂಐಯ ಕ್ರಿಸ್‌ಲಿನ್!

ಎರಡು ಫ್ರಾಂಚೈಸಿಗಳಿಗೆ ಸಂಬಂಧಪಟ್ಟವರೊಂದಿಗೆ ಇನ್‌ಸೈಡ್ ಸ್ಪೋರ್ಟ್ ಐಪಿಎಲ್ ಸಿದ್ಧತೆಗಳ ಬಗ್ಗೆ ಮಾತನಾಡಿದೆ. "ಕೊರೊನಾ ಕಾರಣದಿಂದಾಗಿ ಈ ಬಾರಿಯ ಐಪಿಎಲ್‌ಗೆ ಅಡಚಣೆ ಉಂಟಾಗಬಹುದು ಎಂದು ಫ್ರಾಂಚೈಸಿಗಳು ಚಿಂತಿತವಾಗಿವೆ" ಎಂದು ಅವರು ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.

"ಬಯೋಬಬಲ್‌ ಸಾಕಷ್ಟು ಬಿಗಿಯಾಗಿದೆ. ಆದರೆ ದೇಶದಲ್ಲಿನ ಪರಿಸ್ಥಿತಿ ಆತಂಕಕಾರಿಯಾಗಿದೆ. ಬಿಸಿಸಿಐನಿಂದ ಈವರೆಗೆ ಏನೂ ತಿಳಿಸಿಲ್ಲವಾದರೂ ಕೊರೊನಾ ಕಾರಣದಿಂದಾಗಿ ಈ ಋತುವಿಗೆ ಅಡಚಣೆ ಉಂಟಾಗಬಹುದು ಅಥವಾ ಸ್ಥಗಿತಗೊಳ್ಳಬಹುದು ಎಂಬ ಚಿಂತೆಯಲ್ಲಿದ್ದೇವೆ" ಎಂದು ಫ್ರಾಂಚೈಸಿಯೊಂದು ಹೇಳಿದೆ.

ಐಪಿಎಲ್: ಮ್ಯಾಕ್ಸ್‌ವೆಲ್ ರಚಿಸಿದ ಆಲ್ ಟೈಮ್ ತಂಡದಲ್ಲಿ ದೊಡ್ಡ ಆಟಗಾರರಿಗೇ ಸ್ಥಾನವಿಲ್ಲ!ಐಪಿಎಲ್: ಮ್ಯಾಕ್ಸ್‌ವೆಲ್ ರಚಿಸಿದ ಆಲ್ ಟೈಮ್ ತಂಡದಲ್ಲಿ ದೊಡ್ಡ ಆಟಗಾರರಿಗೇ ಸ್ಥಾನವಿಲ್ಲ!

"ಐಪಿಎಲ್‌ನಲ್ಲಿ ನೇರವಾಗಿ ಭಾಗಿಯಾಗುತ್ತಿರುವವರಲ್ಲಿ ನಿತ್ಯವೂ ಕೊರೊನಾ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಈ ಸಂದರ್ಭಗಳಲ್ಲಿ 6 ನಗರಗಳಲ್ಲಿ ಟೂರ್ನಿ ನಡೆಯುತ್ತಿರುವುದು ನಮಗೆ ಸೂಕ್ತವೆನಿಸುತ್ತಿಲ್ಲ. ಎಲ್ಲರೂ ಮುಚ್ಚಿದ ಬಾಗಿಲುಗಳಲ್ಲಿ ಆಡುತ್ತಿರುವಾಗ, ಟೂರ್ನಿಯನ್ನು ಒಂದೇ ನಗರದಲ್ಲಿ ಏಕೆ ನಡೆಸಬಾರದು? ಹೀಗಿದ್ದಾಗ ನಿಗದಿತ ವೇಳಾಪಟ್ಟಿಯಂತೆಯೇ ಲೀಗ್ ಪ್ರಾರಂಭವಾಗುತ್ತದೆಯೇ ಎಂಬ ಬಗ್ಗೆ ನಮಗೆ ಖಚಿತವಿಲ್ಲ" ಎಂದು ಮತ್ತೊಂದು ಫ್ರಾಂಚೈಸಿ ಹೇಳಿಕೊಂಡಿದೆ.

Story first published: Wednesday, April 7, 2021, 16:51 [IST]
Other articles published on Apr 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X