ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2021ರ ಐಪಿಎಲ್‌ನಲ್ಲಿ ಎಂಎಸ್ ಧೋನಿ ನಿರ್ಮಿಸಲಿರುವ ದಾಖಲೆಗಳ ಸಂಪೂರ್ಣ ಪಟ್ಟಿ

IPL 2021: Full list of records CSK skipper MS Dhoni can achieve

ನವದೆಹಲಿ: 2020ರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಕೆಟ್ಟ ಪ್ರದರ್ಶನ ನೀಡಿತ್ತು ನಿಜ. ಆದರೆ ಈ ಬಾರಿ ಸಿಎಸ್‌ಕೆ ಬಲಿಷ್ಠ ವಾಪಸ್ಸಾತಿ ನೀಡುವ ಎಲ್ಲಾ ಸಾಧ್ಯತೆಗಳಿವೆ. ಈ ಸೀಸನ್‌ನಲ್ಲಿ ಸಿಎಸ್‌ಕೆಯ ಪ್ರಮುಖ ಆಲ್ ರೌಂಡರ್, ಬೆಸ್ಟ್ ಫೀಲ್ಡರ್ ಸುರೇಶ್‌ ರೈನಾ ಆಡುತ್ತಿದ್ದಾರೆ. ಕನ್ನಡಿಗ ರಾಬಿನ್ ಉತ್ತಮ ಬಲವೂ ಸಿಎಸ್‌ಕೆ ಪರವಾಗಿದೆ.

ಫಖರ್ ರನ್‌ಔಟ್, ಡಿ ಕಾಕ್ ಮೋಸದಾಟಕೆ ನೆಟ್ಟಿಗರು ಕಿಡಿ: ವಿಡಿಯೋಫಖರ್ ರನ್‌ಔಟ್, ಡಿ ಕಾಕ್ ಮೋಸದಾಟಕೆ ನೆಟ್ಟಿಗರು ಕಿಡಿ: ವಿಡಿಯೋ

ಕಳೆದ ವರ್ಷ ಅನೇಕ ದಿನಗಳ ಕಾಲ ಕ್ರಿಕೆಟ್ ಮೈದಾನದಿಂದ ದೂರ ಉಳಿದಿದ್ದ ಸಿಎಸ್‌ಕೆ ನಾಯಕ ಎಂಎಸ್ ಧೋನಿಯಿಂದಲೂ ಉತ್ತಮ ಪ್ರದರ್ಶನ ಬಂದಿರಲಿಲ್ಲ. ಈ ಬಾರಿ ಸಿಎಸ್‌ಕೆ ಬೇಗನೆ ಅಭ್ಯಾಸ ಆರಂಭಿಸಿತ್ತು. ಹೀಗಾಗಿ ಧೋನಿ ಆಟವೂ ಹೆಚ್ಚು ನಿರೀಕ್ಷೆ ಮೂಡಿಸಿದೆ.

ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್‌ನ ಪ್ಲಸ್-ಮೈನಸ್ ಪಾಯಿಂಟ್ಸ್ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್‌ನ ಪ್ಲಸ್-ಮೈನಸ್ ಪಾಯಿಂಟ್ಸ್

14ನೇ ಆವೃತ್ತಿಯಲ್ಲಿ ಕೂಲ್ ಕ್ಯಾಪ್ಟನ್ ಧೋನಿ ಉತ್ತಮ ಪ್ರದರ್ಶನ ನೀಡಿದರೆ ಅವರ ಹೆಸರಿನಲ್ಲಿ ಬಹಳಷ್ಟು ದಾಖಲೆಗಳು ನಿರ್ಮಾಣವಾಗುವುದರಲ್ಲಿವೆ. ಧೋನಿ ನಿರ್ಮಿಸಿರುವ/ನಿರ್ಮಿಸಲಿರುವ ದಾಖಲೆಗಳ ಮಾಹಿತಿ ಇಲ್ಲಿದೆ.

ಆರ್‌ಸಿಬಿ ವಿರುದ್ಧ ಅತ್ಯಧಿಕ ರನ್

ಆರ್‌ಸಿಬಿ ವಿರುದ್ಧ ಅತ್ಯಧಿಕ ರನ್

* ಎಂಎಸ್ ಧೋನಿ ಇಲ್ಲೀವರೆಗೆ ಒಟ್ಟು 204 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಇದು ಒಬ್ಬ ಆಟಗಾರ ಆಡಿದ ಅತ್ಯಧಿಕ ಐಪಿಎಲ್ ಪಂದ್ಯಗಳೆಂಬ ದಾಖಲೆಗೆ ಕಾರಣವಾಗಿದೆ.
* ಆರ್‌ಸಿಬಿ ವಿರುದ್ಧ ಧೋನಿ 832 ರನ್ ಬಾರಿಸಿದ್ದಾರೆ. ಒಬ್ಬ ಬ್ಯಾಟ್ಸ್‌ಮನ್‌ ಆರ್‌ಸಿಬಿ ವಿರುದ್ಧ ದಾಖಲಿಸಿರುವ ಅತ್ಯಧಿಕ ರನ್ ಇದು.
* ಐಪಿಎಲ್‌ನಲ್ಲಿ ಧೋನಿ ಒಟ್ಟು 209 ಸಿಕ್ಸರ್ ಬಾರಿಸಿದ್ದಾರೆ. ಇದು ಐಪಿಎಲ್‌ನಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ ಬಾರಿಸಿದ ಅತೀ ಹೆಚ್ಚು ಸಿಕ್ಸರ್ ಮತ್ತು ಒಟ್ಟಾರೆ 3ನೇ ಅತ್ಯಧಿಕ ಸಿಕ್ಸರ್ ದಾಖಲೆಯಾಗಿದೆ.

ಡೆತ್ ಓವರ್‌ನಲ್ಲಿ ಭರ್ಜರಿ ಸಿಕ್ಸರ್

ಡೆತ್ ಓವರ್‌ನಲ್ಲಿ ಭರ್ಜರಿ ಸಿಕ್ಸರ್

* ಐಪಿಎಲ್‌ನಲ್ಲಿ 100 ಪಂದ್ಯಗಳನ್ನು ಗೆದ್ದ ಏಕಮಾತ್ರ ನಾಯಕ ದಾಖಲೆಗೆ ಎಂಎಸ್‌ಡಿ ಪಾತ್ರರಾಗಿದ್ದಾರೆ.
* ಮಾಹಿ 13 ಏಪ್ರಿಲ್ 2013ರಿಂದ 14 ಏಪ್ರಿಲ್ 2019ರ ವರೆಗೆ ಸತತ 85 ಪಂದ್ಯಗಳಿಗೆ ನಾಯಕತ್ವ ವಹಿಸಿದ್ದರು. ಇದು ಟಿ20ಯಲ್ಲಿ ನಾಯಕನೊಬ್ಬ ಮುನ್ನಡೆಸಿದ 2ನೇ ಅತ್ಯಧಿಕ ಸತತ ಪಂದ್ಯಗಳು. ಈ ದಾಖಲೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಗೌತಮ್ ಗಂಭೀರ್ (ಕೋಲ್ಕತ್ತಾ ನೈಟ್ ರೈಡರ್ಸ್) ಸತತ 107 ಪಂದ್ಯಗಳಿಗೆ ನಾಯಕತ್ವ ವಹಿಸಿದ್ದರು.
* ಐಪಿಎಲ್ ಡೆತ್ ಓವರ್‌ನಲ್ಲಿ ಅತೀ ಹೆಚ್ಚು ಸಿಕ್ಸರ್ ದಾಖಲೆ ಎಂಎಸ್ ಧೋನಿ ಹೆಸರಿನಲ್ಲಿದೆ. 17-20 ಓವರ್‌ಗಳಲ್ಲಿ ಧೋನಿ ಒಟ್ಟು 141 ಸಿಕ್ಸರ್ ಬಾರಿಸಿದ್ದಾರೆ.

Devdutt Padikkal ಬದಲಿಗೆ ಮೊದಲನೇ ಪಂದ್ಯದಲ್ಲಿ ಆಡುವವರು ಯಾರು | Oneindia Kannada
2021ರಲ್ಲಿ ಧೋನಿ ಮಾಡಬಹುದಾದ ದಾಖಲೆಗಳು

2021ರಲ್ಲಿ ಧೋನಿ ಮಾಡಬಹುದಾದ ದಾಖಲೆಗಳು

* ಧೋನಿ ವಿಕೆಟ್ ಕೀಪರ್ ಆಗಿ ಇನ್ನು ಬರೀ 2 ಔಟ್‌ಗೆ ಕಾರಣರಾದರೆ ಐಪಿಎಲ್‌ನಲ್ಲಿ ಒಟ್ಟು 150 ವಿಕೆಟ್ ಕೀಪಿಂಗ್ ಔಟ್‌ಗಾಗಿ ಧೋನಿ ಕಾರಣರಾಗಲಿದ್ದಾರೆ. ಈ ದಾಖಲೆ ಪಟ್ಟಿಯಲ್ಲಿ ಧೋನಿ ಮೊದಲಿಗರಾಗಲಿದ್ದಾರೆ.
* 14ನೇ ಆವೃತ್ತಿಯ ಐಪಿಎಲ್‌ನಲ್ಲಿ ಧೋನಿ 179 ರನ್ ಬಾರಿಸಿದರೆ, ಟಿ20ಯಲ್ಲಿ 7000 ರನ್ ಮೈಲಿಗಲ್ಲನ್ನು ಧೋನಿ ಸ್ಥಾಪಿಸಲಿದ್ದಾರೆ.
* ಇನ್ನು 14 ಸಿಕ್ಸರ್‌ಗಳನ್ನು ಬಾರಿಸಿದರೆ ಮಹೇಂದ್ರ ಸಿಂಗ್‌ ಧೋನಿ ಸಿಎಸ್‌ಕೆ ಆಟಗಾರನಾಗಿ 200 ಸಿಕ್ಸರ್ ಬಾರಿಸಿದ ದಾಖಲೆ ನಿರ್ಮಾಣವಾಗಲಿದೆ.

Story first published: Tuesday, April 6, 2021, 16:09 [IST]
Other articles published on Apr 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X